ಕಡೂರುಮಹಿಳೆ ಇಂದು ಅಬಲೆಯಲ್ಲ, ಸಬಲೆ ಎಂದು ಎಲ್ಲ ರಂಗಗಳಲ್ಲೂ ತನ್ನ ಛಾಪು ಮೂಡಿಸಿ ಮುಂದಿದ್ದಾರೆ ಎಂದು ಶಾಸಕ ತಮ್ಮಯ್ಯ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಕಡೂರು

ಮಹಿಳೆ ಇಂದು ಅಬಲೆಯಲ್ಲ, ಸಬಲೆ ಎಂದು ಎಲ್ಲ ರಂಗಗಳಲ್ಲೂ ತನ್ನ ಛಾಪು ಮೂಡಿಸಿ ಮುಂದಿದ್ದಾರೆ ಎಂದು ಶಾಸಕ ತಮ್ಮಯ್ಯ ಹೇಳಿದರು. ತಾಲೂಕಿನ ಸಖರಾಯಪಟ್ಟಣ ಸಮೀಪದ ಹುಲೀಕೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನೌಕರರ ಭಾರತೀಯ ಮಜ್ದೂರ್ ಸಂಘದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆ ತಮ್ಮ ಹಕ್ಕುಗಳ ಬಗ್ಗೆ 1908 ರಲ್ಲಿಯೇ ಅಮೇರಿಕಾದಲ್ಲಿ ಹೋರಾಟ ನಡೆಸಿದ್ದರು. ಮಹಿಳೆ ಮನೆಗೆ ಸೀಮಿತವಾಗದೆ ಎಲ್ಲ ರಂಗದಲ್ಲೂ ಮುಂದಿದ್ದೇವೆ ಎಂದು ತೋರಿಸಿದ್ದಾರೆ.

ಅಂಬೇಡ್ಕರ್ ಮತ್ತು ಬಸವಣ್ಣನವರು 12 ನೇ ಶತಮಾನದಲ್ಲೇ ಮಹಿಳೆಯರಿಗೆ ಸಮಾನ ಹಕ್ಕು ಬೇಕೆಂದು ನಿರ್ಣಯ ಮಾಡಿದ್ದರು. ಅದರ ಫಲವಾಗಿ ಇಂದು ಮಹಿಳೆಯರಿಗೆ ಸಮಾನ ಹಕ್ಕಿದೆ. ತಾಯಿಯಾಗಿ, ಮಗಳಾಗಿ , ಹೆಂಡತಿಯಾಗಿ, ಅಲ್ಲದೆ ದೇಶವನ್ನು ಮುನ್ನಡೆಸುತ್ತೇವೆ ಎಂಬ ಆತ್ಮ ವಿಶ್ವಾಸ ಹೊಂದಿದ್ದಾರೆ ಎಂದರು. ಸಿಡಿಪಿಒ ಶಿವಪ್ರಕಾಶ್ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಬೇಕಾದ ಎಲ್ಲ ಹಕ್ಕನ್ನು ಕೊಟ್ಟಿದೆ. ಮಹಿಳೆಯರು ಜಾಗೃತ ರಾಗಬೇಕು. ಈ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಕಾರ್ಯ ನಿರ್ವಹಿಸಿ ಜನಮಾನಸದಲ್ಲಿದ್ದಾರೆ. ಎಲ್ಲರೂ ಸೇರಿ ಉತ್ತಮವಾಗಿ ಅಂತರಾಷ್ಟ್ರೀ ಯ ಮಹಿಳಾ ದಿನಾಚರಣೆ ಆಚರಿಸುತ್ತಿದ್ದಾರೆ ಎಂದರು. ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಮಾತನಾಡಿ, ಭಾರತದಲ್ಲಿ ಮಾತ್ರ ಸ್ತ್ರೀ ದೇವತೆಗಳ ಪರಂಪರೆ ನೋಡಬಹುದು . ಅದರಲ್ಲಿಯೂ ಪ್ರಭಾವಶಾಲಿಯಾದ ಹಣಕಾಸಿಗೆ ಲಕ್ಷ್ಮೀ ದೇವಿ, ವಿದ್ಯೆಗೆ ಸರಸ್ವತಿ, ಗೃಹಖಾತೆಗೆ ಪಾರ್ವತಿ ದೇವಿ, ರಕ್ಷಣೆಗೆ ದುಗಾದೇವಿ, ಅನ್ನಕ್ಕೆ ಅನ್ನಪೂರ್ಣದೇವಿ ಕೊನೆಗೆ ಶಿವನೇ ಅರ್ಧನಾರೀಶ್ವರನಾಗಿ ಮಹಿಳೆಯರ ಸಾಮರ್ಥ್ಯ ತೋರಿಸಿದ್ದಾನೆ. ಇದೇ ರೀತಿ ಈಗಲೂ ಮಹಿಳೆಯರೇ ಎಲ್ಲ ರಂಗದಲ್ಲೂ ಮುಂದಿದ್ದಾರೆ. ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದರು. ಮಹಿಳಾ ದಿನಾಚರಣೆ ಬಗ್ಗೆ ತೆಂಗು ಮತ್ತು ನಾರು ಮಂಡಳಿ ನಿಗಮದ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಆರ್ಥಿಕ ,ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯವಾಗಿ ಮುಂಚೂಣಿಯಲ್ಲಿದ್ದಾರೆ. ಮನೆ ನಿರ್ವಹಣೆಯಿಂದ ಹಿಡಿದು ದೇಶದ ರಾಷ್ಟ್ರಪತಿಯವರೆಗೆ ನಡೆಸುವ ಶಕ್ತಿ ಇದೆ ಎಂದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನೌಕರರ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಶಿವಮ್ಮ ತಾಲೂಕು ಅಧ್ಯಕ್ಷೆ ಸುನೀತಾ ,ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಅರ್ಪಿತಾ ಪಾಟೀಲ್, ಪ್ರಾಧ್ಯಾಪಕಿ ಕು.ಮಮತಾ, ಮೇಲ್ವಿಚಾರಕಿ ನೇತ್ರಾವತಿ, ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರಾ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆ ಇಂದಿರಮ್ಮ ಮಾತನಾಡಿದರು. ಗ್ರಾಮ ಮುಖಂಡರಾದ ಪುಷ್ಪರಾಜ್,ಆನಂದ್, ಶಿವಮೂರ್ತಿ, ಶ್ರೀನಿವಾಸ್, ನಿವೃತ್ತ ಶಿಕ್ಷಕ ಚೆಲುವಪ್ಪ, ಪುಲೀಕೇಶಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಗ್ರಾಮಸ್ಥರು ಭಾಗವಹಿಸಿದ್ದರು.

22ಕೆಕೆಡಿಯು4.

ಕಡೂರು ತಾಲೂಕಿನ ಹುಲೀಕೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನೌಕರರ ಭಾರತೀಯ ಮಜ್ದೂರ್ ಸಂಘ ಏರ್ಪಡಿಸಿದ್ದ ಅಂತಾರಾಷ್ಟ್ರೀ ಯ ಮಹಿಳಾ ದಿನಾಚರಣೆಯಲ್ಲಿ ಶಾಸಕ ತಮ್ಮಯ್ಯ ಮಾತನಾಡಿದರು. ಜೊತೆಯಲ್ಲಿ ಶಾಸಕ ಸಿ. ಟಿ. ರವಿ ಹಾಗೂ ಇತರರು ಇದ್ದಾರೆ.