ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
12ನೇ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ಮಹಿಳಾ ಜಾಗೃತಿಯಿಂದ ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.ಶನಿವಾರ ನಗರದ ಮಹಾಲಕ್ಷ್ಮೀ ಸಭಾಭವನದಲ್ಲಿ ಜೆಸಿಐ ಸಂಸ್ಥೆಯಿಂದ ಹಮ್ಮಿಕೊಂಡ ದಾಂಡಿಯಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂಸ್ಕೃತಿ ಪರಂಪರೆ ಜಗತ್ತಿನಲ್ಲಿಯೇ ಮಾದರಿಯಾಗಿದೆ. ಇಂತಹ ಧಾರ್ಮಿಕ ಕಾರ್ಯ ಹಾಗೂ ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ದೇವರ ಅನುಗ್ರಹದೊಂದಿಗೆ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ಈ ಪರಂಪರೆಯನ್ನು ನಾವೆಲ್ಲರೂ ಮುಂದುವರೆಸೋಣ. ಇಂತಹ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವ ಜೆಸಿಐ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.ವೇದಿಕೆಯ ಮೇಲೆ ಸ್ಥಳೀಯ ಪ್ರಧಾನ ದಿವಾಣಿ ನ್ಯಾಯಾಧೀಶ ರಾಜೀವ ಗೋಳಸಾರ, ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ರೂಪಾ ಮಟ್ಟಿ, ವಕೀಲರ ಸಂಘದ ಮಹಿಳಾ ಪ್ರತಿನಿಧಿ ಪ್ರೇಮಾ ಚಿಕ್ಕೋಡಿ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಪಿಎಸ್‌ಐ ಕೆ. ವಾಲಿಕಾರ, ಬಾಲಾಜಿ ಗ್ರೂಪ್ ನ ಬಸವರಾಜ ಕಲ್ಯಾಣಶೆಟ್ಟಿ, ಜೆಸಿಐ ಅಧ್ಯಕ್ಷ ಸುಮನ ಜಾಧವ, ಮಹಿಳಾ ಅಧ್ಯಕ್ಷ ರಾಜೇಶ್ವರಿ ಕಿತ್ತೂರ, ಕಾಟೇಶ ಗೋಕಾವಿ, ಲಲಿತಾ ಚವ್ಹಾಣ, ಭಾಗೀರಥಿ ನಂದಗಾವಿ, ಮೀನಾಕ್ಷಿ ಸವದಿ, ರಾಜೇಶ್ವರಿ ಹಳ್ಳಿ, ಸಮೀನಾ ದೇಸಾಯಿ, ಕಿಶೋರ ಭಟ್, ಇಮ್ತಿಯಾಜ್ ದಪೇದಾರ, ಶೇಖರ ಉಳ್ಳಾಗಡ್ಡಿ, ಬಸವರಾಜ ಗಂಗರೆಡ್ಡಿ, ಮಂಜುನಾಥ ಗಂಗರೆಡ್ಡಿ, ಕಾಜಾಸಾಬ ದಬಾಡಿ, ಶಿವಲಿಂಕ ಕೆ., ಇದ್ದರು.ದಾಂಡಿಯಾ ಸ್ಫರ್ಧೆಯಲ್ಲಿ ಲಕ್ಕಿ ನೃತ್ಯ ತಂಡದವರು ಪ್ರಥಮ, ಸ್ಯಾನಿಡೊ ತಂಡ ದ್ವೀತಿಯ, ವೇದಾಸ್ ತಂಡ ತೃತೀಯ ಸ್ಥಾನ ಪಡೆದವು.