ಸಾರಾಂಶ
ಗುಂಡ್ಲುಪೇಟೆ: ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೆ ಸಮರ್ಥಳು ಎಂದು ಜಿಲ್ಲಾ ಮಾನವ ಬಂಧುತ್ವ ವೇದಿಕೆ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಚಿಜಲ ನರ್ಸಿಂಗ್ ಶಾಲೆಯಲ್ಲಿ ರೂಟ್ಸ್ ಫಾರ್ ಫ್ರೀಡಂ ಹಾಗೂ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕ್ಲಾರಾ ಜೆಟ್ಕಿನ್, ಜ್ಯೋತಿ ಫುಲೆ, ಸಾವಿತ್ರಿ ಬಾಯಿಪುಲೆ,ಡಾ.ಅಂಬೇಡ್ಕರ್ ಮಹಿಳೆಯರ ಅಭ್ಯುದಯಕ್ಕೆ ಕಾರಣರಾಗಿದ್ದಾರೆ. ಪ್ರಸ್ತುತ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್, ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಯಾವತಿ, ಮಮತಾ ಬ್ಯಾನರ್ಜಿ ಸಾಧನೆಯನ್ನು ಗುರುತಿಸಬಹುದು. ಮಹಿಳಾ ದಿನಾಚರಣೆಯ ಹಿಂದೆ ಕ್ಲಾರಾ ಜೆಟ್ಕಿನ್ ಹೋರಾಟದ ಇತಿಹಾಸ ಇದೆ ಎಂದರು.ಸಮಾಜ ಸೇವಕಿ ಡಾ.ಸುವರ್ಣಮ್ಮ ಮಾತನಾಡಿ, ನಮಗೆ ಮಹಿಳಾ ದಿನಾಚರಣೆ ಒಂದು ದಿನದ ಹಬ್ಬ ಆಗಬಾರದು. ಸಮಾಜದಲ್ಲಿ ನಮ್ಮ ಭಾವನೆಗಳನ್ನು ಗೌರವಿಸುವ ವ್ಯವಸ್ಥೆ ಕೆಲಸ ನಿರಂತರವಾಗಿ ನಡೆಯಬೇಕು ಎಂದರು. ರೂಟ್ಸ್ ಫಾರ್ ಫ್ರೀಡಂ ಸಂಸ್ಥೆಯ ಜಿಲ್ಲಾ ಸಂಚಾಲಕ ಕುನ್ನ ಹೊಳಯಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಚಿಜಲ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಂಸ್ಥೆ ಅಧ್ಯಕ್ಷೆ ಮಹದೇವಮ್ಮ ವಹಿಸಿದ್ದರು. ಗಡಿನಾಡು ವನ್ಯಜೀವಿ ಸಂರಕ್ಷಣಾ ಪರಿಸರ ಸಂಘ ಅಧ್ಯಕ್ಷ ಪಿ.ಬಾಲು, ಉಪಾಧ್ಯಕ್ಷ ಜಾಕಿ, ಕವಿ ಮದ್ದಯ್ಯನಹುಂಡಿ ನಾಗರಾಜ್ ಇದ್ದರು. ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಸುವರ್ಣಮ್ಮ, ಚಿಜಲ ಸಂಸ್ಥೆಯ ಅಧ್ಯಕ್ಷೆ ಮಹದೇವಮ್ಮ, ಬಾಲು, ಜಾಕಿ, ಮದ್ದಯ್ಯನಹುಂಡಿ ನಾಗರಾಜ್ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಮಹದೇವ ಚಿಜಲ ಹಾಗು ಹಲವು ಮಹಿಳಾ ಸಂಘಟನೆಯವರು ಭಾಗವಹಿಸಿದ್ದರು.