ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಪಾರಮ್ಯ

| Published : Oct 03 2024, 01:16 AM IST

ಸಾರಾಂಶ

ಕಾಲ ಬದಲಾಗಿದೆ, ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದುವರಿದಿದ್ದಾರೆ. ಈಗ ಉದ್ಯೋಗಂ ಮಹಿಳಾ ಲಕ್ಷಣಂ ಎಂಬುವಷ್ಟು ಮಟ್ಟಿಗೆ ಸರ್ವ ಕ್ಷೇತ್ರಗಳಲ್ಲೂ ಮಹಿಳೆಯರದೇ ಪಾರುಪತ್ಯ ಸಾಧಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಾಲ ಬದಲಾಗಿದೆ, ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದುವರಿದಿದ್ದಾರೆ. ಈಗ ಉದ್ಯೋಗಂ ಮಹಿಳಾ ಲಕ್ಷಣಂ ಎಂಬುವಷ್ಟು ಮಟ್ಟಿಗೆ ಸರ್ವ ಕ್ಷೇತ್ರಗಳಲ್ಲೂ ಮಹಿಳೆಯರದೇ ಪಾರುಪತ್ಯ ಸಾಧಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.ಬಸವನಗರದ ಸಮುದಾಯಭವನದಲ್ಲಿ ಸ್ಥಳೀಯ ಸಿ.ಎಂ.ಹುರಕಡ್ಲಿ ಫೌಂಡೇಷನ್, ಹೊಳೆಮಠದ ಐರಣಿ ಮಹಾಸಂಸ್ಥಾನ ಹಾಗೂ ದಾವಣಗೆರೆಯ ಸ್ಫೂರ್ತಿ ನಗರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 255ನೇ ಮಹಿಳಾ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆಯರ ಸ್ವಾವಲಂಬನೆ, ಆರ್ಥಿಕ ಸದೃಢತೆ, ಕೌಶಲ ವರ್ಧನೆಗಾಗಿ ಮಹಿಳೆಯರಿಗೆ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸ್ಫೂರ್ತಿ ತರಬೇತಿ ಸಂಸ್ಥೆಯ ರಾಜ್ಯ ಸಂಘಟಕ ಎಂ.ಗುಡ್ಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಜಯರಾಮ ಶೆಟ್ಟಿ, ಚನ್ನಬಸು ಹುರಕಡ್ಲಿ ಮಾತನಾಡಿದರು.

ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಉದ್ಘಾಟಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಬಲವಂತಗೌಡ ಪಾಟೀಲ, ಸಿದ್ಧಾರೂಢ ಮಠದ ಉತ್ತರಾಧಿಕಾರಿ ಸಿದ್ಧಾನಂದ ಭಾರತಿ ಶ್ರೀ, ಸಿದಾಮಯ್ಯ ಶ್ರೀ, ಪುರಸಭಾ ಸದಸ್ಯರಾದ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಮಂಜು ಬಕರೆ, ಶ್ರೀಶೈಲ ಬಾಡನವರ, ಈರಪ್ಪ ಕಡಕೋಳ, ಭೀಮಶಿ ಪೂಜಾರಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಮಹಾಲಿಂಗಪ್ಪ ಕಂಠಿ, ಶ್ರೀಶೈಲ ಬಳಗಾರ, ಮಲಕಾಜಪ್ಪ ಹನಗಂಡಿ, ದುಂಡಪ್ಪ ಮುರಗೋಡ ಸೇರಿದಂತೆ ಇತರರಿದ್ದರು.