ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆಯರು ಇಂದು ಪುರುಷರಷ್ಟೆ ಸಮಥ೯ರಾಗಿ ಬೆಳೆದಿದ್ದಾರೆ. ಶಿಕ್ಷಣ ಪಡೆದಿರುವ ಮಹಿಳೆ ಆಥಿ೯ಕವಾಗಿ ಸಮಥ೯ಳಾಗಿ ಸ್ವಾಭಿಮಾನದ ಜೀವನ ಸಾಗಿಸಿ ಸಾಥ೯ಕಳಾಗಿದ್ದಾಳೆ ಎಂದು ಹಿರಿಯ ಸಾಹಿತಿ ಮಡಿವಾಳಮ್ಮ ನಾಡಗೌಡ ಬಳಗಾನೂರ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ಕುಟುಂಬದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಪ್ರಾಧ್ಯಾನತೆ ನೀಡಬೇಕು. ಮಹಿಳೆಯರು ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಮಹಿಳಾ ಸಬಲೀಕರಣ ಎಲ್ಲ ಹಂತಗಳಲ್ಲಿ ನಡೆಯಬೇಕು ಎಂದರು.
ಸಾಹಿತಿ ಡಾ.ರೇಖಾ ಪಾಟೀಲ ಮಾತನಾಡಿ, ಮಹಿಳೆ ಕೌಟುಂಬಿಕವಾಗಿ ತಲ್ಲಣಗೊಂಡಿದ್ದಾಳೆ. ಕೆಲವು ಪುರುಷರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ತೆಗೆದುಹಾಕಬೇಕು. ಮಹಿಳೆಯರ ವಿದ್ಯಾಭ್ಯಾಸದಿಂದ ಬದುಕು ಕಟ್ಟಿಕೊಳ್ಳುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ, ತಾಯಿಯು ಭೂಮಿಯ ತೂಕದ ಮಹಿಳೆ ಹಾಗೂ ದೇವತೆ ಎಂದು ಅರಿತುಕೊಳ್ಳಬೇಕು. ಮಹಿಳೆಯರು ಸ್ವ ಸಾಮರ್ಥ್ಯದಿಂದ ವ್ಯಕ್ತಿತ್ವ ರೂಪಿಸಿಕೊಂಡು ಸ್ವಾಭಿಮಾನಿಯಾಗಿ ಬೆಳೆಯಬೇಕು ಎಂದು ಹೇಳಿದರು.
ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡಿ, ಸಾಧನೆ ಮಾಡುವ ಪ್ರವೃತ್ತಿಗಳನ್ನು ಮಹಿಳೆ ರೂಢಿಸಿಕೊಳ್ಳಬೇಕು. ಸಮಥ೯ ಕಾನೂನುಗಳಿದ್ದರು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಎಂದರು.ಸಾಹಿತಿ ಶ್ರೀದೇವಿ ಉತ್ಲಾಸರ, ಶೋಭಾ ಮೇಡೆದಾರ, ಬಾಲ ಕವಯಿತ್ರಿ ಸೌಮ್ಯ ದೊರನಳ್ಳಿ ಮಾತನಾಡಿದರು. ಜಯಶ್ರೀ ಹಿರೇಮಠ, ಆಶಾ ಬಿರಾದಾರ, ರಶ್ಮಿ ಬದ್ನೂರ, ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಸುರೇಶ ಜತ್ತಿ, ರಾಜೇಶ್ವರಿ ಮೋಪಗಾರ, ಲತಾ ಗುಂಡಿ, ಬಿ.ಎಂ ಅಜೂರ, ಕೆ.ಎಸ್ ಹಣಮಾಣಿ, ಮಹಾದೇವಿ ತೆಲಗಿ, ಶರಣಗೌಡ ಪಾಟೀಲ, ಅಮಸಿದ್ದ ಪೂಜಾರಿ, ಶಿವಾಜಿ ಮಾನೆ, ಬಸನಗೌಡ ಬಿರಾದಾರ, ಪರಶುರಾಮ ಬಗಲಿ, ರಾಜೇಸಾಬ ಶಿವನಗುತ್ತಿ, ಎಂ.ಎಂ.ಹಂದಿಗನೂರ, ಎಂ.ಡಿ.ಬಿಳಿಜಾಡರ, ಬಸವರಾಜ ಹಿರೇಮಠ, ಜಿ.ಎಸ್.ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶಶಿಕಲಾ ಇಜೇರಿ ಮುಂತಾದವರು ಉಪಸ್ಥಿತರಿದ್ದರು. ಸುಜಾತಾ ಹ್ಯಾಳದ ಸ್ವಾಗತಿಸಿದರು. ಮಮತಾ ಮಳಸಾವಳಗಿ ನಿರೂಪಿಸಿದರು. ಡಾ.ಸಂಗಮೇಶ ಮೇತ್ರಿ ಮಾತನಾಡಿದರು. ಶೋಭಾ ಬಡಿಗೇರ ವಂದಿಸಿದರು.