ಸಾರಾಂಶ
ಒಂದು ಕಾಲದಲ್ಲಿ ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲ ರಂಗದಲ್ಲೂ ಸಮರ್ಪಣಾ ಮನೋಭಾವದಿಂದ ಆಸಕ್ತಿ, ಕಾಳಜಿಯಿಂದ ಸೇವೆ ಸಲ್ಲಿಸಿ ವಿಶೇಷ ಛಾಪು ಮೂಡಿಸಿದ್ದಾರೆ.
ಹಳಿಯಾಳ:
ಒಂದು ಕಾಲದಲ್ಲಿ ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲ ರಂಗದಲ್ಲೂ ಸಮರ್ಪಣಾ ಮನೋಭಾವದಿಂದ ಆಸಕ್ತಿ, ಕಾಳಜಿಯಿಂದ ಸೇವೆ ಸಲ್ಲಿಸಿ ವಿಶೇಷ ಛಾಪು ಮೂಡಿಸಿದ್ದಾರೆ. ಇಂದು ವಿಶ್ವದ ಸರ್ವಾಂಗೀಣ ಅಭಿವೃದ್ಧಿಯ ಕೇಂದ್ರ ಬಿಂದುವಾಗಿದ್ದಾರೆ ಎಂದು ಶಾಸಕ ಆರ್.ವಿ. ದೇಶಪಾಂಡ ಹೇಳಿದರು.ಗುರುವಾರ ಪಟ್ಟಣದ ಪುರಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆ ತಾಯಿಯಾಗಿ, ಪುತ್ರಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಹೀಗೆ ಸಮಾಜದಲ್ಲಿ ವಿವಿಧ ಕೌಟುಂಬಿಕ ಜವಾಬ್ದಾರಿ ನಿಭಾಯಿಸಿ ಸ್ವಸ್ಥ್ಯ ಕುಟುಂಬ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸುಂದರ ಸಮಾಜ ಕಟ್ಟಲು ಸಾಧ್ಯವಾಗಿದೆ ಎಂದರು.ಸಮಾಜದಲ್ಲಿ ಇನ್ನೂ ಮಹಿಳೆಯರ ಮೇಲೆ ಶೋಷಣೆಗಳು ಮುಂದುವರಿದಿದ್ದು ಇದೊಂದು ತಲೆತಗ್ಗಿಸುವ ಬೆಳವಣಿಗೆಯಾಗಿದೆ. ಅವರಿಗೆ ಗೌರವ ನೀಡಬೇಕು, ಸಿಗುವಂತಾಗಬೇಕು. ಮಹಿಳೆಯರು ತಮ್ಮ ಶಿಕ್ಷಣ ಮತ್ತು ಆರೋಗ್ಯದ ಕಡೆ ನಿಗಾವಹಿಸಬೇಕು ಎಂದು ತಿಳಿಸಿದರು.ಸಂವಾದ:ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ಸಮರ್ಪಕ ಅನುಷ್ಠಾನದ ಕುರಿತು ಶಾಸಕ ದೇಶಪಾಂಡೆ ಮಹಿಳೆಯರೊಂದಿಗೆ ಸಂವಾದ ನಡೆಸಿದರು.ಸನ್ಮಾನ:ಕಾರ್ಯಕ್ರಮದಲ್ಲಿ ಪರಿಸರವಾದಿ ರಜನಿರಾವ್ ಹಾಗೂ ಬುಡಕಟ್ಟು ಸಿದ್ದಿ ಸಮುದಾಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ರೇಷ್ಮಾ ಪಾಸ್ಕಲ್ ಕಾಂಬ್ರೆಕರ ಅವರನ್ನು ಸನ್ಮಾನಿಸಲಾಯಿತು. ಬುಡಕಟ್ಟು ಸಿದ್ದಿ ಸಮುದಾಯದ ಜನಪದ ಕಲಾವಿದೆ ಜ್ಯೂಲಿಯಾನಾ ಫರ್ನಾಂಡೀಸ್ ರಾಜ್ಯ ಸರ್ಕಾರದ ಪಂಚ್ ಗ್ಯಾರಂಟಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಶಿಶು ಅಭಿವೃದ್ಧಿ ಅಧಿಕಾರಿ ಡಾ. ಲಕ್ಷ್ಮೀದೇವಿ ಎಸ್. ಅಂತಾರಾಷ್ಟ್ರೀಯ ದಿನಾಚರಣೆಯ ಉದ್ದೇಶ, ಅದರ ಮಹತ್ವದ ಬಗ್ಗೆ ತಿಳಿಸಿದರು.ತಾಪಂ ಇಒ ಪರಶುರಾಮ ಘಸ್ತೆ, ತಹಸೀಲ್ದಾರ್ ಆರ್.ಎಚ್. ಭಾಗವಾನ, ಜಿಪಂ ಎಇಇ ಸತೀಶ, ಪುರಸಭಾ ನಿಕಟಪೂರ್ವ ಅಧ್ಯಕ್ಷ ಅಜರ್ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣ ಮಾದರ, ಭಾರತಿ ನಲ್ವಡೆ, ಅನಸೂಯಾ ರೆಡೆಕರ ಇದ್ದರು.