ಮಹಿಳೆಯರು ಪರಿಶ್ರಮ ರೂಢಿಸಿಕೊಂಡು ಸಾಧಕರಾಗಿ

| Published : Mar 19 2024, 12:53 AM IST

ಮಹಿಳೆಯರು ಪರಿಶ್ರಮ ರೂಢಿಸಿಕೊಂಡು ಸಾಧಕರಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ಹೆಣ್ಣುಮಕ್ಕಳು ಬದುಕನ್ನು ಗೌರವಿಸಿಕೊಂಡು ಶಕ್ತಿ ಶ್ರೇಷ್ಠತೆ ಮೆರೆಯಬೇಕು. ಜೀವನದಲ್ಲಿ ಸರಳವಾಗಿ ಯಾವುದು ಸಿಗುವದಿಲ್ಲ. ಕಠಿಣ ಪರಿಶ್ರಮ ರೂಢಿಸಿಕೊಂಡು ಸಾಧಕರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಜಲನಗರ ಪೊಲೀಸ್ ಸ್ಟೇಶನ್ ಪಿಎಸ್ಐ ಕೃಷ್ಣವೇಣಿ ಅಭಿಪ್ರಾಯಪಟ್ಟರು. ನಗರದ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್.ಐ. ಪದವಿ ಮಹಿಳಾ ಮಹಾವಿದ್ಯಾಲಯ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಿಎಚ್.ಡಿ ಪದವಿ ಪುರಸ್ಕೃತರಿಗೆ ಮತ್ತು ರ‍್ಯಾಂಕ್ ವಿಜೇತರಿಗೆ ಸುವರ್ಣ ಪದಕ ನೀಡಿ ಸನ್ಮಾನಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹೆಣ್ಣುಮಕ್ಕಳು ಬದುಕನ್ನು ಗೌರವಿಸಿಕೊಂಡು ಶಕ್ತಿ ಶ್ರೇಷ್ಠತೆ ಮೆರೆಯಬೇಕು. ಜೀವನದಲ್ಲಿ ಸರಳವಾಗಿ ಯಾವುದು ಸಿಗುವದಿಲ್ಲ. ಕಠಿಣ ಪರಿಶ್ರಮ ರೂಢಿಸಿಕೊಂಡು ಸಾಧಕರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಜಲನಗರ ಪೊಲೀಸ್ ಸ್ಟೇಶನ್ ಪಿಎಸ್ಐ ಕೃಷ್ಣವೇಣಿ ಅಭಿಪ್ರಾಯಪಟ್ಟರು.

ನಗರದ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್.ಐ. ಪದವಿ ಮಹಿಳಾ ಮಹಾವಿದ್ಯಾಲಯ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಿಎಚ್.ಡಿ ಪದವಿ ಪುರಸ್ಕೃತರಿಗೆ ಮತ್ತು ರ‍್ಯಾಂಕ್ ವಿಜೇತರಿಗೆ ಸುವರ್ಣ ಪದಕ ನೀಡಿ ಸನ್ಮಾನಿಸಿ ಮಾತನಾಡಿದರು.

ಸ್ತ್ರೀ- ಪುರುಷರಿಬ್ಬರು ಸರಿಸಮಾನರಾಗಿದ್ದು, ಪರಸ್ಪರ ಅರಿತು ನಡೆದರೆ ಬದುಕಿನ ಸಮಸ್ಯೆಗಳು ದೂರಾಗುತ್ತವೆ. ಇದನ್ನು ಪ್ರೀತಿ, ವಿಶ್ವಾಸ ಮತ್ತು ಸಮಾನತೆಯ ತತ್ವಕ್ಕೆ ಅನುಸಾರವಾಗಿ ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫಿ ಭಂಡಾರಿ ಮಾತನಾಡಿ, ಸಮಕಾಲೀನ ಜಗತ್ತು ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ನಾವು ಗೆಲ್ಲಬೇಕಾದರೆ ಸ್ಪರ್ಧಾ ಉತ್ತಮ ಮನೋಭಾವ ಹೊಂದಿ ವಿಜೇತರಾಗಬೇಕು. ಇದಕ್ಕೆ ಪೂರಕವಾಗುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವನ್ನು ಮಹಾವಿದ್ಯಾಲಯದಲ್ಲಿ ಆರಂಭಿಸಬೇಕೆಂದು ಸಲಹೆ ನೀಡಿದರು.

ಸಿಕ್ಯಾಬ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ ಮಾತನಾಡಿ, ಉನ್ನತ ಶಿಕ್ಷಣ ನಮ್ಮ ವ್ಯಕ್ತಿತ್ವ ಬದಲಾವಣೆ ಮಾಡುತ್ತದೆ ಹಾಗೂ ಮಹಿಳಾ ಸಬಲೀಕರಣಕ್ಕೆ ಕಾರಣವಾಗುತ್ತದೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಸಿಕ್ಯಾಬ್ ಎ.ಆರ್.ಎಸ್.ಐ. ಪದವಿ ಮಹಾವಿದ್ಯಾಲಯದ ಕೌಸ್ಸಿಲ್ ಚೇರ್ಮನ್‌ ರಿಯಾಜ್ ಫಾರೂಖಿ ಮಾತನಾಡಿ, ಶಿಕ್ಷಣ ಹಾಗೂ ಸಮಾಜ ಸುಧಾರಣೆ ಪರಸ್ಪರ ಪೂರಕವಾಗಿವೆ. ಉನ್ನತ ಅಧ್ಯಯನಗಳು ಪ್ರಾಯೋಗಿಕವಾಗಿ ಸಾಗಬೇಕು. ಈ ಮೂಲಕ ಸಮಾಜ ಸುಧಾರಣೆಗೆ ಕಾರಣವಾಗಬೇಕು. ಸ್ತ್ರೀಯರು ಛಲದಿಂದ ಬಲ ಪಡೆದುಕೊಂಡು ಭದ್ರವಾದ ಜೀವನ ಕಟ್ಟಿಕೊಳ್ಳಬೇಕೆಂದು ಎಂದು ತಿಳಿಸಿದರು.

ಪಿಎಚ್‌ಡಿ ಮಾರ್ಗದರ್ಶಕ ಸಿಕ್ಯಾಬ್ ಇಂಜಿನಿಯರಿಂಗ್ ಕಾಲೇಜಿನ ಡಾ.ಸಬಾ ಫಾತಿಮಾ, ಪಿಎಚ್.ಡಿ ಪದವಿ ಪುರಸ್ಕೃತ ಡಾ.ರೇಷ್ಮಾ ಚಿರಲದಿನ್ನಿ, ಡಾ.ದಾವಲಬಿ ನದಾಫ್‌, ಡಾ.ಚೇತನಾ ಸಂಕೊಂಡ, ಡಾ.ತೇಜಸ್ವಿನಿ ಕಡಪಟ್ಟಿ, ಡಾ.ಕೀರ್ತಿ ಹೊನವಾಡ, ಪದವಿ ರ‍್ಯಾಂಕ್‌ ಪಡೆದ ಶ್ರೀನಿಧಿ ಜೋಶಿ, ಮುಸ್ಕಾನ್‌ ಬೊಮ್ಮನಳ್ಳಿ, ಶ್ರೇಯಾಂಕ ಪಾಟೀಲ, ಸ್ನಾತಕೋತ್ತರ ಪದವಿ ರ‍್ಯಾಂಕ್ ಪಡೆದ ತಮಸುಮ್ ಮೇಟಿ, ಮುಸ್ಕಾನ್‌ ಬೇಪಾರಿ, ಫಿರದೋಸ್‌ ಮನಿಯಾರ, ಶ್ರೇಯಾ ನಾಯಕ ಹಾಗೂ ಸುವರ್ಣ ಪದಕ ಪಡದ ಪ್ರೀತಿ ಬಡಿಗೇರ, ಗಿರಿಜಾ ಮೂಡಲಗಿ, ಶ್ರೀನಿಧಿ ಜೋಶಿ, ಫಿರದೋಸ್ ಮನಿಯಾರ ಅವರನ್ನು ಸನ್ಮಾನಿಸಲಾಯಿತು.

ಆಸ್ಮಾ ನಾಗರದಿನ್ನಿ, ಸುಸ್ಮಿತಾ ಬಂಡೇನವರ, ನಜೀಫಾ, ಸೌಮ್ಯಾ, ಪ್ರಾಚಾರ್ಯ ಪ್ರೊ.ಎಂ.ಟಿ. ಕೊಟ್ನಿಸ್, ಪ್ರೊ.ತೌಸಿಫ್‌ ಬಾಗವಾನ, ಪ್ರೊ. ಝಡ್.ಟಿ. ಖಾಜಿ, ಮಲ್ಲಿಕಾರ್ಜುನ ಮೇತ್ರಿ, ಪ್ರೊ.ಸಾದಿಯಾ ಬಾನು, ಪಾಲಕರು, ಪ್ರಾಧ್ಯಾಪಕರು, ವಿಶೇಷ ಆಹ್ವಾನಿತರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.