ಸಾರಾಂಶ
ನೆಲಮಂಗಲ: ಗ್ರಾಮೀಣ ರೈತ ಮಹಿಳೆಯರು ಅರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಮಾಡಿ ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.
ನೆಲಮಂಗಲ: ಗ್ರಾಮೀಣ ರೈತ ಮಹಿಳೆಯರು ಅರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಮಾಡಿ ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.
ತಾಲೂಕಿನ ಪಿಳ್ಳಹಳ್ಳಿಯಲ್ಲಿ ನೆಲಮಂಗಲ ರೋಟರಿ ಸಂಸ್ಥೆಯಿಂದ ಕಾಮಧೇನು ಯೋಜನೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಲೂರು ಹೊಸಹಳ್ಳಿಯ ಗಂಗಮ್ಮ ಅವರಿಗೆ ಉಚಿತ ಹಸುಕರು ವಿತರಣೆ ಮಾಡಿ ಮಾತನಾಡಿದರು.ರೋಟರಿ ಸಂಸ್ಥೆ ಸಮಾಜದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಪ್ರತಿ ವರ್ಷವೂ ರೋಟರಿ ಸಂಸ್ಥೆಯಿಂದ ಕಾಮಧೇನು ಯೋಜನೆಯಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಹಸುಕರುವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು. ಮಹಿಳಾ ಸಬಲೀಕರಣಕ್ಕೆ ಒತ್ತು:
ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ, ಕಾಮಧೇನು ಯೋಜನೆಯಡಿ ಹಸು ವಿತರಣೆ, ಟೈಲರಿಂಗ್ ಹಾಗೂ ಬ್ಯುಟಿಷಿಯನ್ ತರಬೇತಿ ಸೇರಿ ಸಾಕಷ್ಟು ಯೋಜನೆ ರೂಪಿಸಿದೆ. ಅದರಂತೆ ಹಲವಾರು ದಶಕಗಳಿಂದ ರೋಟರಿ ಸಂಸ್ಥೆ ಆರೋಗ್ಯ, ಶಿಕ್ಷಣ ಸೇರಿ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುತ್ತಿದೆ ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ಮಾಹಿತಿ ನೀಡಿದರು. ರೋಟರಿ ಮಾಜಿ ಅಧ್ಯಕ್ಷ ಎನ್ ಜಿ.ನಾಗರಾಜು, ಉಪಾಧ್ಯಕ್ಷ ಬಿ.ಟಿ.ಕೃಷ್ಣಮೂರ್ತಿ, ನಿರ್ದೇಶಕರಾದ ಶಿವಶಂಕರ್‌ಪ್ರಸಾದ್, ಎಲ್. ಕುಮಾರ್, ಆರ್.ನಾಗರಾಜ್, ಮುನಿರಾಜ್ ಇತರರಿದ್ದರು.(ಡೀಸಿ ಸುದ್ದಿಯಲ್ಲಿ ಸಿಂಗಲ್ ಕಾಲಂ ಫೋಟೋ)
ಪೊಟೊ -5ಕೆ ಎನ್ ಎಲ್ ಎಮ್ 1ಪಿಳ್ಳಹಳ್ಳಿಯಲ್ಲಿನೆಲಮಂಗಲ ರೋಟರಿ ಸಂಸ್ಥೆಯಿಂದ ಕಾಮಧೇನು ಯೋಜನೆಯಡಿ ಅಲೂರು ಹೊಸಹಳ್ಳಿಯ ಗಂಗಮ್ಮ ಅವರಿಗೆ ಅಧ್ಯಕ್ಷ . ನಾಗರಾಜು ಉಚಿತ ಹಸು, ಕರು ವಿತರಿಸಿದರು.