ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ರಾಜ್ಯದಲ್ಲಿ ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಬಸ್‌ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದ್ದು, ಬಸ್‌ಗಳಲ್ಲಿ ಸೀಟ್‌ಗಾಗಿ ಮಹಿಳೆಯರು ಹೊಡೆದಾಡಿಕೊಳ್ಳುತ್ತಿರುವುದು ಸಾಮಾನ್ಯವಾದಂತಾಗಿದೆ. ಇದೀಗ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರು ಮಾರಾಮಾರಿ ನಡೆಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ದೇವರಹಿಪ್ಪರಗಿಯಿಂದ ತಾಳಿಕೋಟಿಗೆ ಹೋಗುವ ಬಸ್‌ನಲ್ಲಿ ಸೋಮವಾರ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ರಾಜ್ಯದಲ್ಲಿ ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಬಸ್‌ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದ್ದು, ಬಸ್‌ಗಳಲ್ಲಿ ಸೀಟ್‌ಗಾಗಿ ಮಹಿಳೆಯರು ಹೊಡೆದಾಡಿಕೊಳ್ಳುತ್ತಿರುವುದು ಸಾಮಾನ್ಯವಾದಂತಾಗಿದೆ. ಇದೀಗ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರು ಮಾರಾಮಾರಿ ನಡೆಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ದೇವರಹಿಪ್ಪರಗಿಯಿಂದ ತಾಳಿಕೋಟಿಗೆ ಹೋಗುವ ಬಸ್‌ನಲ್ಲಿ ಸೋಮವಾರ ಘಟನೆ ನಡೆದಿದೆ.ದೇವರಹಿಪ್ಪರಗಿ-ತಾಳಿಕೋಟಿಗೆ ಹೋಗುವ ಬಸ್ಸಿನಲ್ಲಿ ಮಹಿಳೆಯರು ಸೀಟ್‌ಗಾಗಿ ಪ್ರಯತ್ನಿಸಿದ್ದು, ತನಗೆ ಬೇಕು, ತಾನು ಸೀಟ್ ಹಿಡಿದಿದ್ದೆ ಎಂದು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ದಾಡಿಕೊಂಡಿದ್ದಾರೆ. ಮಹಿಳೆಯರ ಹೊಡೆದಾಟ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ತಳ್ಳಾಟ, ನೂಕಾಟ ಸೇರಿ ಜಡೆ ಕಿತ್ತಾಟಗಳು ನಡೆದಿವೆ. ನೂಕಾಟದಿಂದ ಬಸ್ ಬಾಗಿಲು, ಕಿಟಕಿಯ ಸರಪಳಿ ಕಿತ್ತುಕೊಂಡು ಬಂದಿದೆ. ನಂತರ ಅಲ್ಲಿದ್ದ ಸಹ ಪ್ರಯಾಣಿಕರನ್ನು ಮಹಿಳೆಯರನ್ನು ಸಮಾಧಾನ ಮಾಡಿದ್ದಾರೆ. ಅಷ್ಟೇ ಅಲ್ಲ ಇದೀಗ ಫ್ರೀ ಬಸ್‌ನಲ್ಲಿ ಸೀಟ್‌ಗಾಗಿ ಮಾರಾಮಾರಿ ನಡೆದಿದೆ. ಇದು ಸಹ ಪ್ರಯಾಣಿಕರಿಗೆ ಹಾಗೂ ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ