ಮಹಿಳೆ ಎಲ್ಲಾ ರಂಗಗಳಲ್ಲೂ ಸಾಮರ್ಥ್ಯ ತೋರಿದ್ದಾರೆ: ನ್ಯಾ.ಮೊಹಮ್ಮದ್

| Published : Mar 28 2024, 12:49 AM IST

ಮಹಿಳೆ ಎಲ್ಲಾ ರಂಗಗಳಲ್ಲೂ ಸಾಮರ್ಥ್ಯ ತೋರಿದ್ದಾರೆ: ನ್ಯಾ.ಮೊಹಮ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಎಲ್ಲಾ ರಂಗಗಳಲ್ಲೂ ಇಂದು ಸಾಮರ್ಥ್ಯ ತೋರಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾ.ಮೊಹಮ್ಮದ್ ಮೊಯಿನುದ್ದೀನ್ ಹೇಳಿದರು.ನಗರದ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆದ ಮಹಿಳಾ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಹಿರಿಯೂರು: ಮಹಿಳೆಯರು ಎಲ್ಲಾ ರಂಗಗಳಲ್ಲೂ ಇಂದು ಸಾಮರ್ಥ್ಯ ತೋರಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾ.ಮೊಹಮ್ಮದ್ ಮೊಯಿನುದ್ದೀನ್ ಹೇಳಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆದ ಮಹಿಳಾ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಮಹಿಳೆಯರು ಪುರುಷರಿಗೆ ಎಲ್ಲಾ ವಿಭಾಗಗಳಲ್ಲೂ ಪೈಪೋಟಿ ನೀಡುವಷ್ಟು ಬೆಳೆದಿದ್ದಾರೆ. ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಸರ್ಕಾರಗಳಿಂದ ಹಲವಾರು ಸ್ಕೀಮ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ ಮಹಿಳೆಯರು ಲೀಗಲ್ ಪ್ರೊಫೆಷನ್‌ನಲ್ಲಿ ಮುಂದೆ ಬರಬೇಕಾಗಿದೆ. ಮಹಿಳೆಯರಿಗೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಜಗತ್ತಿಗೆ ತೋರಿಸುವ ಕೆಲಸವಾಗಬೇಕು. ಇತ್ತೀಚೆಗೆ ಸಾಕಷ್ಟು ಬದಲಾವಣೆಗಳಾಗಿದ್ದು, ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಂತಿದ್ದಾರೆ ಎಂದರು.

ಪ್ರಧಾನ ಸಿವಿಲ್ ನ್ಯಾ.ಶಿಲ್ಪಾ ತಿಮ್ಮಾಪುರ ಮಾತನಾಡಿ ಹೆಣ್ಣಿಗೆ ವಿದ್ಯೆ ಅತೀ ಮುಖ್ಯವಾಗಿದ್ದು ಹೆಣ್ಣನ್ನು ಸ್ವತಂತ್ರಳನ್ನಾಗಿಸಬೇಕು. ಸ್ವ-ನಿರ್ಧಾರ ತೆಗೆದುಕೊಳ್ಳಲು ಅವಳಿಗೆ ಆದ್ಯತೆ ನೀಡಬೇಕು. ಎಲ್ಲಿಯೇ ಆಗಲಿ ಅವಳನ್ನು ಅವಳು ರಕ್ಷಿಸಿಕೊಳ್ಳುವಷ್ಟು ಆತ್ಮ ಸ್ಥೈರ್ಯವನ್ನು ಪೋಷಕರು ತುಂಬಬೇಕು. ಚಿಕ್ಕ ಮಕ್ಕಳಿನಿಂದಲೂ ಅವರನ್ನು ಭಯದಲ್ಲಿ ಬೆಳೆಸಬಾರದು. ಹೆಣ್ಣನ್ನು ರಕ್ಷಿಸುವ ನೆಪದಲ್ಲಿ ಅವರನ್ನು ದುರ್ಬಲಗೊಳಿಸದೇ ಸ್ವತಂತ್ರವಾಗಿ ಅವಳು ಬೆಳೆಯುವಂತಾಗಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ ಮಾತನಾಡಿ, ಮಹಿಳೆಯರ ರಕ್ಷಣೆಗೆ, ಬೆಳವಣಿಗೆಗೆ ಅನೇಕ ಕಾನೂನುಗಳನ್ನು, ಸೌಲಭ್ಯಗಳನ್ನು ಒದಗಿಸಲಾಗಿದೆ. ಅವುಗಳನ್ನು ಸದುಪಯೋಗ ಮಾಡಿಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕಾಗಿದೆ. ಸ್ವಾವಲಂಬಿಯಾಗಿ ಮಹಿಳೆ ಬೆಳೆಯಬೇಕಾಗಿದೆ. ಹೆಣ್ಣಿಗೆ ಮೀಸಲಾತಿಗಿಂತ ಬಹು ಮುಖ್ಯವಾಗಿ ಎಲ್ಲಾ ವಿಷಯದಲ್ಲೂ ಆದ್ಯತೆ ನೀಡಬೇಕಾಗಿದೆ. ಇಂದು ಮಹಿಳೆ ದೇಶದ ಅರ್ಥ ವ್ಯವಸ್ಥೆಯನ್ನೇ ನಿಭಾಯಿಸುವಷ್ಟು ಚಾಣಾಕ್ಷಳಾಗಿದ್ದಾಳೆ. ಹಾಗಾಗಿ ಹೆಣ್ಣು ಅಬಲೆಯಲ್ಲ ಎಂದರು.

ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾ.ಎಚ್.ಡಿ.ಶ್ರೀಧರ್, ಸಹಾಯಕ ಸರ್ಕಾರಿ ಅಭಿಯೋಜಕ ಚಿದಾನಂದಪ್ಪ, ವಕೀಲರ ಸಂಘದ ಉಪಾಧ್ಯಕ್ಷೆ ಬೀನಾರಾಣಿ, ಪ್ರಧಾನ ಕಾರ್ಯದರ್ಶಿ ಚಿತ್ರಲಿಂಗಪ್ಪ, ಜಂಟಿ ಕಾರ್ಯದರ್ಶಿ ವೆಂಕಟೇಶ್ ಶಿಲ್ಪಿ, ಖಜಾಂಚಿ ಸೈಯದ್ ನವಾಜ್, ವಕೀಲರು ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಶೇಷಾದ್ರಿ, ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.