ಆಲ್ದೂರುಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಇ-ಕೆವೈಸಿ ಹಾಗೂ ಪರಿಷ್ಕರಣೆ ಮಾಡಿಸಲು ಮೂಡಿಗೆರೆ ತಾಲೂಕಿನಲ್ಲಿ ಮಹಿಳೆಯರು ಪರದಾಡುವಂತಾಗಿದೆ. ಇಡೀ ತಾಲೂಕಿಗೆ ಕೇವಲ 2 ಆಧಾರ್ ಸೇವಾ ಕೇಂದ್ರಗಳಿರು ವುದರಿಂದ ಬೆಳಗಿನ ಜಾವ 4ರಿಂದಲೇ ಮಹಿಳೆಯರು ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಇ ಕೆ ವೈಸಿ ಆಧಾರ್ ಅಪ್ಡೇಟಿಗೆ ಸರ್ವರ್ ಕಂಟಕ । ಸರ್ವರ್ ಸಮಸ್ಯೆಯಿಂದ ದಿನವಿಡೀ ಕಾದರೂ 25- 30 ಮಂದಿಗೆ ಮಾತ್ರ ಸೇವೆ ಲಭ್ಯ । ಹೆಚ್ಚುವರಿ ಸೇವ ಕೇಂದ್ರಗಳನ್ನು ಒದಗಿಸುವಂತೆ ಸಾರ್ವಜನಿಕರ ಒತ್ತಾಯ

ಜೋಸೆಫ್. ಎಂ.ಆಲ್ದೂರು

ಕನ್ನಡಪ್ರಭ ವಾರ್ತೆ ಆಲ್ದೂರು

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಇ-ಕೆವೈಸಿ ಹಾಗೂ ಪರಿಷ್ಕರಣೆ ಮಾಡಿಸಲು ಮೂಡಿಗೆರೆ ತಾಲೂಕಿನಲ್ಲಿ ಮಹಿಳೆಯರು ಪರದಾಡುವಂತಾಗಿದೆ. ಇಡೀ ತಾಲೂಕಿಗೆ ಕೇವಲ 2 ಆಧಾರ್ ಸೇವಾ ಕೇಂದ್ರಗಳಿರು ವುದರಿಂದ ಬೆಳಗಿನ ಜಾವ 4ರಿಂದಲೇ ಮಹಿಳೆಯರು ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.ಮೂಡಿಗೆರೆ ಬ್ಯಾಂಕ್ ಆಫ್ ಬರೋಡ ಶಾಖೆ ಹಾಗೂ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಪರಿಷ್ಕರಣೆ ಮತ್ತು ಹೊಸ ಆಧಾರ್ ಮಾಡಿಸುವ ಸೌಲಭ್ಯವಿದೆ. ಹೀಗಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಮಹಿಳೆಯರು ಸೇರಿದಂತೆ ಸಾರ್ವಜ ನಿಕರು ಇದೇ 2 ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ಹಾಗಾಗಿ ಕೇಂದ್ರಗಳ ಮುಂದೆ ಪ್ರತಿದಿನ ಜನದಟ್ಟಣೆ ಹೆಚ್ಚಿ ಇಡೀ ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ದಿನಕ್ಕೆ 25–30 ಮಂದಿಗಷ್ಟೇ ಅವಕಾಶ:ಆಧಾರ್ ಅಪ್‌ಡೇಟ್ ಹಾಗೂ ಇ-ಕೆವೈಸಿಗೆ ಬರುವ ಎಲ್ಲರಿಗೂ ಸೇವೆ ಪಡೆಯಲು ಅವಕಾಶ ಸಿಗುತ್ತಿಲ್ಲ. ಪ್ರತಿ ಕೇಂದ್ರ ದಲ್ಲಿ ದಿನಕ್ಕೆ ಸರತಿ ಸಾಲಿನಲ್ಲಿ ಮೊದಲು ಬರುವ 25- 30 ಮಂದಿಗೆ ಮಾತ್ರ ಟೋಕನ್ ನೀಡಲಾಗುತ್ತಿದೆ. ಟೋಕನ್ ಸಿಗದ ವರು ಮರುದಿನ ಮತ್ತೆ ಬೆಳಗಿನ ಜಾವವೇ ಬಂದು ಸರತಿಯಲ್ಲಿ ನಿಲ್ಲಬೇಕು. ಟೋಕನ್ ಪಡೆದವರ ಕೆಲಸವೂ ಸರ್ವರ್ ಸಮರ್ಪಕ ವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪೂರ್ಣವಾಗುತ್ತದೆ. ಸಮಸ್ಯೆ ಎದುರಾದರೆ ಅವರೂ ಮರುದಿನ ಬರುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.ಬಿಎಸ್‌ಎನ್‌ಎಲ್ ಕೇಂದ್ರ ಸ್ಥಗಿತ: ಈ ಹಿಂದೆ ಮೂಡಿಗೆರೆ ಬಿಎಸ್‌ಎನ್‌ಎಲ್ ಕಚೇರಿಯಲ್ಲೂ ಆಧಾರ್ ಸೇವೆ ಲಭ್ಯವಿತ್ತು. ಆದರೆ, ಕಾರಣಾಂತರಗಳಿಂದ ಈ ಕೇಂದ್ರ ಸ್ಥಗಿತವಾಗಿದ್ದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗೃಹಲಕ್ಷ್ಮಿ ಯೋಜನೆ ಪ್ರಕ್ರಿಯೆಗೆ ಆಧಾರ್ ಪಡೆಯಲು ಜನರು ಪರದಾಡುತ್ತಿರುವ ಸಂದರ್ಭದಲ್ಲಿ, ತಾಲೂಕಿ ನಲ್ಲಿ ಹೆಚ್ಚಿನ ಕೇಂದ್ರಗಳನ್ನು ಆರಂಭಿಸಿ ಹಾಗೂ ಸ್ಥಗಿತಗೊಂಡ ಕೇಂದ್ರವನ್ನು ಪುನರಾರಂಭಿಸುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.

...ಕೋಟ್....

ಇ ಕೆ ವೈ ಸಿ ಮತ್ತು ಆಧಾರ್ ಅಪ್ಡೇಟ್ ಗೆ ಸರ್ವರ್ ಸಮಸ್ಯೆ ಮೂಲ ಕಾರಣ. ತಾಲೂಕಿಗೆ ಕೇವಲ 2 ಸೇವಾ ಕೇಂದ್ರ ಗಳಿರುವುದು ದೊಡ್ಡ ಸಮಸ್ಯೆ. ಮುಂಜಾನೆ 4 ರಿಂದ ಗ್ರಾಮೀಣ ಭಾಗವರು ಆಗಮಿಸಿ ಕಾಯುವ ಪರಿಸ್ಥಿತಿ. ಇದರಿಂದ ಕೆಲವೊಮ್ಮೆ ಗಲಾಟೆ ಸಹ ಆಗುತ್ತಿದೆ.- ನಿತಿನ್, ಗೋಣಿಬೀಡು ಗ್ರಾಮಸ್ಥರು

-- ಕೋಟ್ --ಮುಂಜಾನೆ 4 ರಿಂದ ಸೇವೆ ಪಡೆಯಲು ಯುವಕರು ನಿಲ್ಲಬಹುದು. ಆದರೆ ವಯೋವೃದ್ಧರು ನಿಲ್ಲಲು ಸಾಧ್ಯವೇ ಸರ್ಕಾರ ಹೆಚ್ಚಿನ ಸೇವಾ ಕೇಂದ್ರಗಳಲ್ಲಿ ಸೇವೆ ಒದಗಿಸಲು ಮುಂದಾಗಬೇಕು. ಪಡಿತರ ಚೀಟಿ ವಿತರಿಸುವ ನ್ಯಾಯಬೆಲೆ ಅಂಗಡಿ, ಇನ್ನಿತರ ಸಾಮಾಜಿಕ ಸಂಸ್ಥೆಗಳ ವ್ಯಾಪ್ತಿಗೆ ಸೇವೆ ವಿಸ್ತರಿಸಬೇಕು. - ಲಕ್ಷ್ಮಣ್ ಆಚಾರ್ಯ, ಸಾರ್ವಜನಿಕ--ಕೋಟ್-- ಇ ಕೆ ವೈ ಸಿ ಮತ್ತು ಆಧಾರ್ ಅಪ್ಡೇಟ್ ಗೆ ಕೂಲಿ ಕೆಲಸ ಮಾಡುವವರು ಪ್ರತಿದಿನ ರಜೆ ಹಾಕಿ ಬಂದರೆ ಮಂಗಳೂರು ಬೆಂಗಳೂರು ದೂರದ ಊರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ವಾರದ ರಜೆ ಪೂರ್ತಿ ಇಲ್ಲಿ ಕಳೆಯ ಬೇಕಾದ ದುಸ್ಥಿತಿ ಎದುರಾಗಿದೆ. ಕ್ಷೇತ್ರದ ಅಧಿಕಾರಿಗಳು ಸರ್ಕಾರಕ್ಕೆ ವಿಷಯಮುಟ್ಟಿಸಬೇಕು.

- ಜಯರಾಮ್, ಮುಗ್ರಹಳ್ಳಿ ಗ್ರಾಮ