ಸಾರಾಂಶ
ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿಮೆನ್ ಎಪವರ್‌ಮೆಂಟ್ ಸೆಲ್ ಮತ್ತು ಆ್ಯಂಟಿ ವಿಮೆನ್ ಹರಾಸ್‌ಮೆಂಟ್ ಸೆಲ್ ಆಶ್ರಯದಲ್ಲಿ ಕಾಲೇಜ್‌ನಲ್ಲಿ ‘ಎಂಪವರ್ ವಿಮೆನ್, ಟ್ರಾನ್ಸಾಫಾರ್ಮ್ ಲೈವ್ಸ್’ ಕಾರ್ಯಕ್ರಮ ನೆರವೇರಿತು.
ಪುತ್ತೂರು: ಮಹಿಳೆಯರು ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಛಲ ಹೊಂದಿಕೊಂಡಿರಬೇಕು. ಸಮಾಜದಲ್ಲಿ ಮಹಿಳೆಯರು ಎದ್ದು ನಿಲ್ಲಬೇಕು. ಯಾರಿಗೂ ಹೆದರದೆ ತಮ್ಮ ವಿಚಾರ ಮುಂದಿಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸೋಮಾರಿತನ ಬಿಟ್ಟು ಜೀವನದಲ್ಲಿ ಮುನ್ನುಗ್ಗುವ ಛಲ ಮೈಗೂಡಿಸಿಕೊಳ್ಳಬೇಕು ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದ್ದಾರೆ.
ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿಮೆನ್ ಎಪವರ್‌ಮೆಂಟ್ ಸೆಲ್ ಮತ್ತು ಆ್ಯಂಟಿ ವಿಮೆನ್ ಹರಾಸ್‌ಮೆಂಟ್ ಸೆಲ್ ಆಶ್ರಯದಲ್ಲಿ ಕಾಲೇಜ್‌ನಲ್ಲಿ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಬುಧವಾರ ನಡೆದ ‘ಎಂಪವರ್ ವಿಮೆನ್, ಟ್ರಾನ್ಸಾಫಾರ್ಮ್ ಲೈವ್ಸ್’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಶಕ್ತಿಯನ್ನು ನಿಮ್ಮ ಮಾತು ಮತ್ತು ಕಾರ್ಯಗಳಲ್ಲಿ ಪ್ರದರ್ಶಿಸುವಂತಾಗಬೇಕು. ಅವರ ಜೀವನವನ್ನು ಅವರೇ ರೂಪಿಸಿಕೊಳ್ಳಬೇಕಾಗಿದೆ. ಶ್ರಮಜೀವಿಗಳಾಗಿಗಿ ಕೆಲಸ ಮತ್ತು ಸ್ವಚ್ಛತೆಯ ಬಗ್ಗೆ ಬದ್ಧತೆಯನ್ನು ಹೊಂದಿರಬೇಕು. ಮಾಜದಲ್ಲಿ ಮಹಿಳೆಯರಿಗೆ ಅನೇಕ ಅವಕಾಶಗಳಿದ್ದು, ನಿಮ್ಮಲ್ಲಿರುವ ಶಕ್ತಿ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಬೇಕು ಎಂದರು.ವಿಮೆನ್ ಎಪವರ್‌ಮೆಂಟ್ ಸೆಲ್ ಸಂಯೋಜಕಿ ಪ್ರೇಮಲತಾ ಕೆ ಮತ್ತು ಆ್ಯಂಟಿ ವಿಮೆನ್ ಹರಾಸ್‌ಮೆಂಟ್ ಸೆಲ್ ಸಂಯೋಜಕಿ ನೋವ್ಲಿನ್ ಎನ್ ಡಿಸೋಜಾ ಉಪಸ್ಥಿತರಿದ್ದರು. ಪಿಆರ್‌ಒ ಭಾರತಿ ಎಸ್ ರೈ , ಕಾಲೇಜಿನ ಮಹಿಳಾ ಉಪನ್ಯಾಸಕಿಯರು ಮತ್ತು ಮಹಿಳಾ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಇದ್ದರು.ವಿದ್ಯಾರ್ಥಿನಿ ಲಾನಿಷಾ ಡಿ ಸೋಜಾ ಸ್ವಾಗತಿಸಿದರು. ರಿಯಾ ವಂದಿಸಿದರು. ಅಪೂರ್ವ ಡಿ ನಿರೂಪಿಸಿದರು.