ಮಹಿಳೆಯರಿಗೆ ಹಕ್ಕು, ಕಾನೂನು ಅರಿವು ಅಗತ್ಯ

| Published : Sep 14 2024, 01:45 AM IST

ಸಾರಾಂಶ

ಎಲ್ಲಾ ಮಹಿಳೆಯರು ಸಹ ತಮ್ಮ ಹಕ್ಕು ಹಾಗೂ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾತ್ರ ನೀವು ಪ್ರಶ್ನಿಸಲು ಸಾಧ್ಯವಾಗುತ್ತದೆ. ಸರ್ಕಾರದಿಂದ ನಿಮಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ರಕ್ಷಣೆಗಾಗಿ ಪೊಲೀಸ್ ಇಲಾಖೆ ಇದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಹಿಳೆಯರಿಗೆ ಶಕ್ತಿ ತುಂಬಲು ಹಾಗೂ ಧ್ವನಿಯಾಗಲು ಹಾಗೂ ಅಧಿಕಾರಿಗಳು ಯಾವ ಕೆಲಸಗಳು ಮಾಡಿದ್ದೀರಿ ಎಂದು ತಿಳಿದುಕೊಳ್ಳುವುದೇ ತಮ್ಮ ಭೇಟಿಯ ಉದ್ದೇಶವೇ ಹೊರತು ಅಧಿಕಾರ ಚಲಾಯಿಸಲು ಅಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ತಾಲೂಕಿನ ವಟ್ರಕುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಹಾಗೂ ಪೋಷನ್ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅ‍ವರು, ಸಭೆಗೆ ಇಲ್ಲಿನ ಇಒ ಗೈರು ಆಗಿದ್ದಾರೆ. ಅವರ ಮೇಲೆ ಕ್ರಮ ಜರಗಿಸಬೇಕೆಂದು ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ಎಂದರು.ಮಹಿಳೆಗೆ ಹಕ್ಕುಗಳ ಅರಿವು ಅಗತ್ಯ

ಇಲ್ಲಿ ಬಂದಿರುವಂತಹ ಎಲ್ಲಾ ಮಹಿಳೆಯರು ಸಹ ತಮ್ಮ ಹಕ್ಕು ಹಾಗೂ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾತ್ರ ನೀವು ಪ್ರಶ್ನಿಸಲು ಸಾಧ್ಯವಾಗುತ್ತದೆ. ಸರ್ಕಾರದಿಂದ ನಿಮಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ರಕ್ಷಣೆಗಾಗಿ ಸದಾ ಪೊಲೀಸ್ ಇಲಾಖೆ ಇದೆ. ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ ನಿಮಗೆ ಏನೇ ಸಮಸ್ಯೆ ಬಂದರೂ ಸಹ ತಕ್ಷಣ ಕರೆ ಮಾಡಿ ಹತ್ತರಿಂದ ಹದಿನೈದು ನಿಮಿಷದಲ್ಲಿ ನಿಮ್ಮ ರಕ್ಷಣೆಗೆ ಬರುತ್ತಾರೆ ಎಂದು ಹೇಳಿದರು.ತಹಸೀಲ್ದಾರ್ ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಮಹಿಳಾ ಸಂಘದ ಅಧ್ಯಕ್ಷ ಗೀತಾ, ಡಿ.ಡಿ ನಾರಾಯಣಸ್ವಾಮಿ, ಡಿಎಚ್ಒ ಶ್ರೀನಿವಾಸ್, ಟಿಎಚ್ಒ ಸುನಿಲ್, ಸಿ ಡಿ ಪಿ ಓ ಮುನಿರಾಜು, ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್, ಕನ್ನಡಪರ ಹೋರಾಟಗಾರ ವೆಂಕಟಪ್ಪ, ಅಂಜಲಿ, ಪ್ರೇಮ, ಅನಿತಾ, ಚಂದ್ರಣ್ಣ, ಶಾಂತಮ್ಮ, ಹರೀಶ್, ಮತ್ತಿತರರು ಇದ್ದರು.