ಸಾರಾಂಶ
ಮಹಿಳೆಯರಿಗೆ ಉದ್ಯಮದೊಂದಿಗೆ ಆಧ್ಯಾತ್ಮಿಕ ಜ್ಞಾನವೂ ಅತ್ಯಂತ ಅವಶ್ಯವಾಗಿದ್ದು, ಅದನ್ನು ಪಡೆದುಕೊಳ್ಳುವತ್ತ ಎಲ್ಲರ ಗಮನ ಹರಿಸಬೇಕು ಎಂದು ಹುಬ್ಬಳ್ಳಿ ನಂದು ಕೆಮಿಕಲ್ ಇಂಡಸ್ಟ್ರೀಸ್ ನಿರ್ದೇಶಕಿ ಉಷಾ ಹೆಗಡೆ ಹೇಳಿದರು.
ಗದಗ: ಮಹಿಳೆಯರಿಗೆ ಉದ್ಯಮದೊಂದಿಗೆ ಆಧ್ಯಾತ್ಮಿಕ ಜ್ಞಾನವೂ ಅತ್ಯಂತ ಅವಶ್ಯವಾಗಿದ್ದು, ಅದನ್ನು ಪಡೆದುಕೊಳ್ಳುವತ್ತ ಎಲ್ಲರ ಗಮನ ಹರಿಸಬೇಕು ಎಂದು ಹುಬ್ಬಳ್ಳಿ ನಂದು ಕೆಮಿಕಲ್ ಇಂಡಸ್ಟ್ರೀಸ್ ನಿರ್ದೇಶಕಿ ಉಷಾ ಹೆಗಡೆ ಹೇಳಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದಿಂದ ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಬ್ಬ ಮಹಿಳೆ ತಾನು ಬಯಸಿದ್ದನ್ನು ಸಾಧಿಸುವ ಛಲ ಮತ್ತು ಬುದ್ಧಿ ಶಕ್ತಿಯನ್ನು ಹೊಂದಿರುತ್ತಾಳೆ. ಆದರೆ ಸರಿಯಾದ ಬಳಕೆಯಾಗಬೇಕು, ಅದಕ್ಕೆ ಬೇಕಾಗುವ ಪ್ರೋತ್ಸಾಹ ಮಹಿಳೆಗೆ ದೊರೆಯಬೇಕು ಎಂದರು.12ನೇ ಶತಮಾನದಲ್ಲಿ ಬಸವಣ್ಣವರ ಕಾಲದಲ್ಲಿ ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು. ಅಂದಿನಿಂದ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗತೊಡಗಿದವು, ಮಹಿಳೆ ಉದ್ಯಮದೊಂದಿಗೆ ಆಧ್ಯಾತ್ಮಿಕತೆ ಅವಶ್ಯವಿದೆ ಎಂದರು.
ಸಾನ್ನಿಧ್ಯವನ್ನು ವಹಿಸಿದ್ದ ಮಣಕವಾಡ ಮಠ ಅಭಿನವ ಮೃತ್ಯುಂಜಯ ಶ್ರೀಗಳು, ಆಶೀರ್ವಚನ ನೀಡಿ ಮಹಿಳೆಯರು ತಾಯಿ ಸ್ವರೂಪಿಯಾಗಿದ್ದು, ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವಂತಹ ಶಕ್ತಿಯನ್ನು ಇರುತ್ತದೆ. ಈ ಹಿಂದೆ ಮಹಿಳೆಯರು ಸ್ವಾತಂತ್ರ್ಯದಿಂದ ಇರಲು ಸಾಧ್ಯವಾಗುತ್ತಿರಲ್ಲಿಲ್ಲ ಆದರೆ ಈಗ ಪ್ರತಿಯೊಂದು ಕ್ಷೇತ್ರದಲ್ಲಿ ಸಾಕಷ್ಟು ಮುಂದೆ ಇರುವುದನ್ನು ನಾವು ಕಾಣುತ್ತಿದ್ದೇವೆ. ದೂರದರ್ಶನ ಹಾಗೂ ಮೊಬೈಲ್‌ದಿಂದ ಮಕ್ಕಳನ್ನು ನಾವು ದೂರ ಇಡುವಂತಾ ಕೆಲಸಕ್ಕೆ ತಾಯಂದಿರು ಮೊದಲ ಆದ್ಯತೆ ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಮಂಗಳಾ ಕಿರಣ ನೀಲಗುಂದ, ನಂದಿನಿ ಶಾಬಾದಿಮಠ, ನಿರ್ಮಲಾ ಕೊಳ್ಳಿ, ರಶ್ಮಿ ಕುರಗೊಡ ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಪಾಟೀಲ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಮುಂತಾದವರು ಮಾತನಾಡಿದರು.
ಮಹಿಳಾ ಘಟಕದ ಅಧ್ಯಕ್ಷೆ ನಂದಾ ಬಾಳಿಹಳ್ಳಿಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜಾ ಭೂಮಾ, ರೇಖಾ ಚನ್ನಪ್ಪನವರ, ಸುವರ್ಣಾ ಸದಾಶಿವಯ್ಯ ಮದರಿಮಠ, ಉಮಾ ಮುನವಳ್ಳಿ, ಸುಜಾತಾ ಗುಡಿಮನಿ, ವನಜಾಕ್ಷಿ ಕೂಗು, ಲಲಿತಾ ತಡಸದ, ಭಾರತಿ ಮುದಗಲ್, ಅನೀತಾ ಗೊಡಚಿ, ಸುನೀತಾ ಗೊಡಚಿ, ಸುರೇಖಾ ಮಲ್ಲಾಡದ, ಸೀಮಾ ಜೈನ್, ರಾಜೇಶ್ವರಿ ಪವಾರ, ಭಾಗ್ಯಶ್ರೀ ಕುರಡಗಿ, ಶ್ವೇತಾ ಖಟವಟೆ, ಆರತಿ ಭಾಂಡಗೆ, ಸಂಧ್ಯಾ ಭಾಂಡಗೆ ಪೂರ್ಣಿಮಾ ಪಾಟೀಲ, ರೇಶ್ಮಾ ಭಾರತ, ಕಸ್ತೂರಿ ತೆಲೆಗೌಡ್ರ, ಅತ್ತರಬಾನು ತಾಡಪತ್ರಿ, ಮದುಶ್ರೀ ಭದ್ರಕಾಳಮಮಠ, ಗಾಯತ್ರಿ ಭಾಂಡಗೆ , ಜ್ಯೋತಿ ಹಬೀಬ, ಸುನೀತಾ ಪಾಟೀಲ ಮುಂತಾದವರು ಹಾಜರಿದ್ದರು. ಕ್ಷೀತಿ ಸುಲಾಖೆ ಪ್ರಾರ್ಥಿಸಿದರು. ಪ್ರೀತಿ ನೈತ್ಯ ಪ್ರದರ್ಶನ ನೀಡಿದರು. ಜ್ಯೋತಿ ಹೇರಲಗಿ ನಿರೂಪಿಸಿದರು. ಜ್ಯೋತಿ ದಾನಪ್ಪಗೌಡ್ರ ವಂದಿಸಿದರು.