ಎಸ್ ಬಿಐ ಬ್ಯಾಂಕ್ ಸಿಬ್ಬಂದಿ ವಿರುದ್ಧ ಮಹಿಳೆಯರ ಆಕ್ರೋಶ

| Published : Mar 04 2025, 12:36 AM IST

ಸಾರಾಂಶ

Women's anger against SBI bank staff

-ಕೆವೈಸಿ ನೆಪದಲ್ಲಿ ಗ್ರಾಹಕರನ್ನು ಸತಾಯಿಸುತ್ತಿರುವ ಬ್ಯಾಂಕ್ ಸಿಬ್ಬಂದಿ

-----

ಕನ್ನಡಪ್ರಭ ವಾರ್ತೆ ಔರಾದ್: ಖಾತೆಗೆ ಕೆವೈಸಿ ಮಾಡಿರದಕ್ಕೆ ಅಕೌಂಟ್ ತಡೆದ ಹಿನ್ನಲೆ ನೂರಾರು ಮಹಿಳಾ ಗ್ರಾಹಕರು ಬ್ಯಾಂಕ್ ನಲ್ಲಿ ಜಮಾ ಆಗಿ ಸರತಿ ಸಾಲಿನಲ್ಲಿ ನಿಂತಿದ್ದರು ಸಿಬ್ಬಂದಿ ಕಚೇರಿ ಕೆಲಸ ಮಾಡದೆ ನಾಲ್ಕು ಗಂಟೆಗಳವರೆಗೆ ಸಾಲಿನಲ್ಲಿ ನಿಂತ ಮಹಿಳೆಯರಿಗೆ ವಾಪಸ್‌ ಹೋಗಿ ಎಂದು ಸಿಬ್ಬಂದಿ ಹೇಳಿರುವುದಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಎಪಿಎಂಸಿ ಕ್ರಾಸ್ ಬಳಿಯ ಎಸ್ ಬಿಐ ಶಾಖೆಯ ಬ್ಯಾಂಕ್ ವ್ಯವಸ್ಥಾಪಕರ ಬೇಜವಾಬ್ದಾರಿತನದ ವಿರುದ್ಧ ಗ್ರಾಹಕರು ಕೇಲ ಕಾಲ ಕೆಂಡ ಕಾರಿದ್ದಾರೆ.

ಆಗಿದ್ದೇನು...?: ವಿವಿಧ ಸರ್ಕಾರಿ ಯೋಜನೆಗಳ ಅಡಿ ಜಮಾ ಆದ ಹಣವನ್ನು ಖಾತೆಯಿಂದ ತೆಗೆದುಕೊಳ್ಳಲು ಬ್ಯಾಂಕ್ ಗೆ ಬಂದ ನೂರಾರು ಮಹಿಳೆಯರದ್ದು ಕೆವೈಸಿ ಸಮಸ್ಯೆ ಅಂತ ಹೇಳಿ ವಾಪಸ್‌ ಕಳಿಸಿದ್ದಾರೆ. ನಂತರ ಆಧಾರ ಕಾರ್ಡ್‌ ಜತೆಗೆ ಪಾನ ಕಾರ್ಡ್‌ನ್ನು ಸ್ಥಳೀಯ ಎಸ್ ಬಿಐ ಸೇವಾ ಕೇಂದ್ರದಲ್ಲಿ ಗ್ರಾಹಕರು ಕೆವೈಸಿ ಮಾಡಿಸಿಕೊಂಡಿದ್ದಾರೆ. ಸೇವಾ ಕೇಂದ್ರದಲ್ಲಿ ನೀಡಿದ್ದ ಪತ್ರಕ್ಕೆ ಅನುಮೋದನೆ ನೀಡುವ ಸಣ್ಣ ಕೆಲಸ ಮಾತ್ರ ಬ್ಯಾಂಕ್ ಸಿಬ್ಬಂದಿ ಗಳದ್ದಾಗಿತ್ತು.

ಆದ್ರೆ, ಬೆಳಿಗ್ಗೆಯಿಂದಲೂ ಕೆವೈಸಿ ಸಮಸ್ಯೆಯ ಗ್ರಾಹಕರ ಸಾಲು ಮಾಡಿ ಬ್ಯಾಂಕಿನಲ್ಲೆ ಮಹಿಳಾ ಗ್ರಾಹಕರ ಜತೆ ಪುರುಷರನ್ನು ಸತತ ನಾಲ್ಕು ಗಂಟೆಗಳ ಕಾಲ ಬ್ಯಾಂಕ್ ವ್ಯವಸ್ಥಾಪಕ ಅಮೀರ ನಿಲ್ಲಿಸಿದ್ದಾರೆ.

ಆದರೆ, ಕೆವೈಸಿ ಮಾಡಿಸಲು ನೇಮಿಸಲಾದ ಕೌಂಟರ್ ಸಿಬ್ಬಂದಿ ಅನ್ಯ ಕೆಲಸದ ನಿಮಿತ್ತ ಹೊರ ಹೋಗಿದ್ದೆ ಗೊಂದಲಕ್ಕೆ ಕಾರಣವಾಗಿ ಕೆಲ ಕಾಲ ಬ್ಯಾಂಕ್ ನಲ್ಲಿ ಗ್ರಾಹಕರು ಮತ್ತು ವ್ಯವಸ್ಥಾಪಕರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಪ್ರತ್ಯಕ್ಷದರ್ಶಿ ಹೇಳಿದರು.

ಎಸ್ ಬಿಐ ಬ್ಯಾಂಕ್ ಔರಾಧ ಶಾಖೆಯಲ್ಲಿ ಇದು ಒಂದು ದಿನದ ಸಮಸ್ಯೆ ಅಲ್ಲ. ಬ್ಯಾಂಕ್‌ ಸಿಬ್ಬಂದಿ ಸತಾಯಿಸ್ತಾರೆ. ಬ್ಯಾಂಕ್ ಸಿಬ್ಬಂದಿ ಒಳ ಜಗಳದ ಪರಿಣಾಮ ಗ್ರಾಹಕರು ಪರದಾಡುವಂತಾಗಿದೆ ಎಂದು ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅನೀಲ ದೇವಕತ್ತೆ ಹೇಳ್ತಾರೆ.

ಡಿಜಿಟಲೀಕರಣ ದಿನಗಳಲ್ಲಿ ಸಣ್ಣ ಕೆವೈಸಿ ಮಾಡಲಿಕ್ಕೆ ದಿನಗಟ್ಟಲೆ ಮಹಿಳೆಯರನ್ನು ನಿಲ್ಲಿಸುವ ಬ್ಯಾಂಕ್ ಸಿಬ್ಬಂದಿ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

--

ಚಿತ್ರ 3ಬಿಡಿಆರ್55

ಅನೀಲ ದೇವಕತ್ತೆ

ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು

--