ಮಹಿಳೆಯರ ಕಲೆಗೆ ಪ್ರೋತ್ಸಾಹ ಅಗತ್ಯ: ಎನ್‌.ಸಿ.ಕೆರೂರ

| Published : Dec 31 2023, 01:30 AM IST

ಸಾರಾಂಶ

ಕಿತ್ತೂರು ರಾಣಿ ಚನ್ನಮ್ಮ ಪಂಚಮಸಾಲಿ ಮಹಿಳಾ ಸಂಘದ ಅಧ್ಯಕ್ಷೆ ಎನ್.ಸಿ. ಕೆರೂರ ಅವರು ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಮಹಿಳೆಯರು ಸಾಕಷ್ಟು ಕಲಾತ್ಮಕ ಚಟುವಟಿಕೆ ಹೊಂದಿದ್ದರೂ ಅವರ ಕಲೆಯ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಸಂಘ, ಸಂಸ್ಥೆಗಳು ನೀಡಿ ಮಹಿಳೆಯರ ಕಲೆಗೆ ಪ್ರೋತ್ಸಾಹಿಸಬೇಕೆಂದು ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಪಂಚಮಸಾಲಿ ಮಹಿಳಾ ಸಂಘದ ಅಧ್ಯಕ್ಷೆ ಎನ್.ಸಿ. ಕೆರೂರ ಹೇಳಿದರು.

ಶನಿವಾರ ಇಲ್ಲಿನ ಸರ್ವೋದಯ ಮಹಿಳಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಗುಲಾಬ್ ಚಿತ್ರಮಂದಿರದ ಹತ್ತಿರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮನೆಗೆಲಸ ಹಾಗೂ ಇನ್ನಿತರ ಬಿಡುವಿಲ್ಲದ ಕೆಲಸಗಳಲ್ಲಿ ಹಾಗೂ ವಿದ್ಯಾರ್ಜನೆ ಸಮಯದಲ್ಲಿ ರಂಗೋಲಿಯಂತಹ ಕಲೆ ಅನಾವರಣಗೊಳಿಸಲು ಸಂಘ-ಸಂಸ್ಥೆಗಳು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಮಹಿಳಾ ಸಂಘಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಸಂಘ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳಲಿ ಎಂದು ಆಶಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ಯಲ್ಲವ್ವ ಗೌಡರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸುಶೀಲಾ ದಲಬಂಜನ, ಸುವರ್ಣಾ ಸಾಲಿಮನಿ ಭಾಗವಹಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಸುಜಾತಾ ಧುತ್ತರಗಿ ಪ್ರಥಮ, ಸೃಷ್ಟಿ ಬಸಕಾಳಿ ದ್ವಿತೀಯ ಹಾಗೂ ನೇತ್ರಾ ನೇಮದಿ ತೃತೀಯ ಬಹುಮಾನ ಪಡೆದರು.

ಸರ್ವೋದಯ ಮಹಿಳಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಬಾಯಕ್ಕ ಕಳ್ಳಿಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಿಗೆವ್ವ ಕಳ್ಳಿಗುಡ್ಡ, ಗೀತಾ ತೋಳಮಟ್ಟಿ, ಶಿವಲೀಲಾ ಕಳ್ಳಿಗುಡ್ಡ, ಸಾವಿತ್ರಿ ಕಳ್ಳಿಗುಡ್ಡ, ರೇಖಾ ಹಳೆಹೊಳಿ ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಸವಿತಾ ಕೋಲಕಾರ ನಿರೂಪಿಸಿದರು. ಹೇಮಾ ಕಳ್ಳಿಗುಡ್ಡ ವಂದಿಸಿದರು.