ಓಡ್ ಕೌನ್ಸಿಲ್‌ನಿಂದ ಮಹಿಳಾ ದಿನ ಆಚರಣೆ

| Published : Mar 25 2024, 01:46 AM IST

ಸಾರಾಂಶ

ಪೀಣ್ಯ ದಾಸರಹಳ್ಳಿಯಲ್ಲಿ ಮಹಿಳಾ ದಿನಾಚರಣೆ ವೇಳೆ ನಡೆದ ಭೋವಿ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ನಮ್ಮ ಸಮುದಾಯದ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜನಾಂಗವನ್ನು ಸಂಘಟಿಸಿ ಬಲಪಡಿಸುವ ಮುಖಾಂತರ ನಮ್ಮ ಸಲ್ಲಬೇಕಾದ ಹಕ್ಕುಗಳನ್ನು ಪಡೆಯಲು ಸಂಘ ರಚಿಸಿಕೊಂಡಿದ್ದವೆ ಎಂದು ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ.ಮನಿಮಾರಪ್ಪ ತಿಳಿಸಿದರು.

ಓಡ್(ಭೋವಿ) ಕಮ್ಯೂನಿಟಿ ಕೌನ್ಸಿಲ್ ಆಫ್‌ ಇಂಡಿಯಾ ಇಂಟರ್ನ್ಯಾಷನಲ್ ಟಿವಿಎಸ್ ಕ್ರಾಸ್ ಬಳಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಭೋವಿ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಅಭಿನಂದಿಸಲಾಯಿತು.

ನಮ್ಮ ಸಂಘಟನೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಧ್ಯಕ್ಷರಾದ ರವಿ ಮಾಕಳಿ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಶಿಕ್ಷಣ, ಸಂಘಟನೆ, ಹೋರಾಟ ನಮ್ಮ ಧ್ಯೇಯವಾಗಿದ್ದು, ಎಲ್ಲಾ ರಂಗಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು ಎಂದು ಮಹಿಳೆಯರಿಗೆ ಕರೆ ಎಂ.ಮನಿಮಾರಪ್ಪ ನೀಡಿದರು.

ಭೋವಿ ಜನಾಂಗದ ಮಹಿಳೆಯರು ಎಲ್ಲಾ ರಂಗಗಳಲ್ಲೂ ಕೂಡ ತೊಡಗಿಸಿಕೊಂಡು ಎಲ್ಲವನ್ನೂ ಮೀರಿ ಮುಂದೆ ಬರಬೇಕು. ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂದು ಸಾಧಿಸಿ ತೋರಿಸಬೇಕು ಎಂದು ಮಹಿಳಾ ಮುಖಂಡರಾದ ಭಾಗ್ಯ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಆನಂದಪ್ಪ, ರಾಷ್ಟ್ರೀಯ ಕಾರ್ಯಾಧ್ಯಕ್ಷ ಜಯರಾಮ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈ ಶಂಕರ್, ಬೌರಿಂಗ್ ಆಸ್ಪತ್ರೆಯ ಮುಖ್ಯ ನಿರ್ದೇಶಕಿ ಡಾ. ನಿರ್ಮಲ, ಗೀತಾ, ರಾಷ್ಟ್ರೀಯ ಉಪಾಧ್ಯಕ್ಷ ಯಲ್ಲಪ್ಪ, ಅಂತಾರಾಷ್ಟ್ರೀಯ ಖಜಾಂಚಿ ವೆಂಕಟೇಶ್, ಡಾ. ಗಂಗಾಧರ್, ಅಂತಾರಾಷ್ಟ್ರೀಯ ಮಹಿಳಾ ನಿರ್ದೇಶಕಿ ಗೀತಾ ಭಾಗವಹಿಸಿದ್ದರು.