ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಿಳೆಯರೇ ಉತ್ಪಾದಿಸುವ ವಸ್ತುಗಳನ್ನು ಖರೀದಿಸಿ ಆ ಉದ್ಯಮವನ್ನು ಬೆಳೆಸಬೇಕಾಗಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.ಕಲಬುರಿಗಿ ಕನ್ನಡ ಭವನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಮಹಿಳಾ ಉದ್ಯಮಿಗಳು ಉತ್ಪಾದಿಸುವ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು, ಆಭರಣಗಳು ವಿವಿಧ ರೀತಿಯ ಉಡುಪು, ಅಲಂಕಾರ ಹೂಗಳು, ಸಾವಯ ಆಹಾರ ವಸ್ತುಗಳಿಗೆ ವ್ಯಾಪಕ ಪ್ರಚಾರ ನೀಡಬೇಕೆಂದರು.ಒಂದು ಪ್ರಸ್ತಾವನೆ ಸಲ್ಲಿಸಿ ಇದು ಬಹಳ ಅವಶ್ಯಕವಾಗಿದ್ದು, ಮಾರಾಟ ಮಾಡಲು ಅನುಕೂಲವಾಗುವಂತಹ ಒಂದು ಸ್ಥಳವನ್ನು ಅವಕಾಶ ಮಾಡಿಕೊಳ್ಳಲು ಸರ್ಕಾರ ಮನವಿ ಮಾಡುತ್ತೇನೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹5 ಸಾವಿರ ಕೋಟಿ ಬರುತ್ತಿದೆ. ಇದಕ್ಕಾಗಿ ಹಣಕೊಡಿಸುವಂತ ಕೆಲಸ ಮಾಡುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್ ಅವರು ಮಾತನಾಡಿ, ಸ್ವ-ಉದ್ಯೋಗಿಗಳು ಎಂದು ಮಹಿಳೆಯರನ್ನು ಕರೆಯಬಹುದು ಉದ್ಯೋಗ ಎಂಬುವುದು ನೌಕರಿ ಒಂದೇ ಎಂದು ಹೇಳಲು ಬರುವುದಿಲ್ಲ. ಅನೇಕ ಪ್ರಕಾರದ ವೈಭವ ಹೊಂದಿದ ಕಲೆ ಕೌಶಲ್ಯ ಹೊಂದಿದ ಮಹಿಳೆಯರು ಪ್ರಸ್ತುತವಾಗಿ ನಮ್ಮ ಎದುರುಗಡೆ ಇದ್ದಾರೆ ಎಂದು ಹೇಳಿದರು.ಒಟ್ಟು 40 ಮೇಳಗಳು ಪ್ರದರ್ಶನ ಮಾಡುತ್ತಿವೆ. ಪ್ರತಿಯೊಂದು ಮೇಳದಲ್ಲಿ ಒಂದು ಹೊಸ ಚೈತನ್ಯವನ್ನು ತುಂಬಿದೆ. ಇದಕ್ಕೆ ಸಾರ್ವಜನಿಕರು ಅವರಿಗೆ ಪ್ರೋತ್ಸಾಹ ನೀಡಬೇಕು ಹಾಗೂ ಎಷ್ಟೋ ಮಹಿಳೆಯರಲ್ಲಿ ಪ್ರತಿಭೆಯನ್ನು ಹೊಂದಿರುತ್ತಾರೆ. ಅವರಲ್ಲಿ ಇರುವ ಕಲೆಯನ್ನು ಹೊರಗಡೆ ತರಲು ಒಂದು ಸಣ್ಣ ಪ್ರಯತ್ನ ಅವೇಕ ಹಾಗೂ ಸಿಡ್ಬಿ ಸಂಸ್ಥೆ ಮಾಡುತ್ತಿದೆ ಎಂದರು.
ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಬಿ. ಪಾಟೀಲ ಮಾತನಾಡಿದರು. ಬೆಂಗಳೂರು ಪ್ರಾಂತೀಯ ಕಚೇರಿಯ ಡಿ.ಜಿ.ಎಂ.ಬಿ. ಉಳಗಿಯಾನ ಮಾತನಾಡಿ, ಅವೆಕ ಸಂಸ್ಥೆಯೂ 1919ರಲ್ಲಿ ಪ್ರಾರಂಭವಾದ ಅನೇಕ ಮಹಿಳೆಯರಿಗೆ ಉದ್ಯೋಗ ಉಡುಗರೆ ಉಡುಪು ಅಂತ ಕೊಡಲಾಯಿತು. ಇದು ಮೊಟ್ಟ ಮೊದಲು ಏಷ್ಯಾದಲ್ಲಿ ಆರಂಭವಾಯಿತು. ಅಲ್ಲಿನ ಮಹಿಳೆಯರಿಗೆ ಉದ್ಯೋಗ ಮಾಡಲು ಬ್ಯಾಂಕಿನವರು ಲೋನ್ ಕೊಡುತ್ತಾರೆ. ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.ಅವೇಕ ಸಂಸ್ಥೆಯ ಅಧ್ಯಕ್ಷ, ಪ್ರದರ್ಶನ ಅವೇಕ ಉಷಾ ಸುರೇಶ ಮಾತನಾಡಿ, ಹಣಕಾಸಿನಲ್ಲಿ ಹೇಗೆ ಅವರಿಗೆ ಸಹಾಯ ಮಾಡುವುದು. ಮಹಿಳೆಯರಿಗೆ ಟ್ರೇನಿಂಗ್ ಕೊಡಿಸುವುದು ಹಾಗೂ ಇದಕ್ಕೆ ಜನರು ಪ್ರೋತ್ಸಾಹ ಕೊಡಬೇಕು. ಸ್ವಾವಲಂಬನ ಮೇಳಗಳು ಉನ್ನತ ಮಟ್ಟಕ್ಕೆ ಹೊಗಬೇಕು ಅಂತ ಅವರು ಹೇಳಿದರು.
ಬೆಂಗಳೂರು ಪ್ರಾಂತೀಯ ಕಚೇರಿಯ ಸಿಡ್ಬಿ ಸಿ.ಮಹೇಶ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಸತೀಶಕುಮಾರ. ಅವೇಕ್ ಆರ್.ಆರ್.ಸಿ. ಸಂಸ್ಥೆಯ ಜಂಟಿ ಕಾರ್ಯದರ್ಶಿ ಮತ್ತು ಮುಖ್ಯಸ್ಥೆ ರೇಣುಕಾರ ಮನೋಜ್ ಅಧ್ಯಕ್ಷತೆ ವಹಿಸಿದರು. ಅವೇಕ ಮಾರಾಟ ಉಷಾ ಸುರೇಶ್, ಅವೇಕ್ ಜಿಲ್ಲಾ ವಲಯ-2 ಮುಖ್ಯಸ್ಥೆ ನಮ್ರತ ಫಟಾಟೆ ಇದ್ದರು. ಪ್ರದರ್ಶನಕ್ಕೆ ಒಟ್ಟು 40 ಮಳಿಗೆಗಳು ಮೇಳದಲ್ಲಿ ಭಾಗವಹಿಸಿದ್ದರು.