ಮಹಿಳಾ ಸ್ವಾವಲಂಬನೆ ಉತ್ತಮ ಬದಲಾವಣೆ: ವಾಣಿ ಶ್ರೀನಿವಾಸ್

| Published : Mar 22 2024, 01:04 AM IST

ಸಾರಾಂಶ

ಮಹಿಳೆ ಇಂದು ಸ್ವಾವಲಂಬನೆ ಕಡೆ ಸಾಗುತ್ತಿರುವುದು ಉತ್ತಮ ಬದಲಾವಣೆ ಎಂದು ವಾಣಿ ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಿಳೆ ಇಂದು ಸ್ವಾವಲಂಬನೆ ಕಡೆ ಸಾಗುತ್ತಿರುವುದು ಉತ್ತಮ ಬದಲಾವಣೆ ಎಂದು ವಾಣಿ ಶ್ರೀನಿವಾಸ್ ಹೇಳಿದ್ದಾರೆ.

ಚುಂಚಶ್ರೀ ತರೀಕೆರೆ ತಾಲೂಕು ಮಹಿಳಾ ಒಕ್ಕಲಿಗರ ಸಂಘದಿಂದ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಸಮಾಜದ ಶಕ್ತಿ, ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾದಿಸಬಲ್ಲಳು. ಸರ್ಕಾರದಿಂದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ನಡೆದಿದೆ, ಅದನ್ನು ಬಳಸಿಕೊಂಡು ಮಹಿಳೆಯರು ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇಕು ಎಂದು ಕರೆ ನೀಡಿದರು.

ಸಹಕಾರ ಸಂಘಗಳ ಉಪನಿಬಂಧಕರು, ಜಿಲ್ಲಾ ನೋಂದಣಾಧಿಕಾರಿ ಡಾ.ತೇಜಸ್ವಿನಿ ಶ್ರೀ ಹರಿ ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತನ್ನ ಹಕ್ಕುಗಳಿಗಾಗಿ ಹೋರಾಡ ಬೇಕಾಗಿದೆ ಹಾಗೂ ಕುಟುಂಬ ನಿರ್ವಹಣೆ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.

ಚುಂಚಶ್ರೀ ತರೀಕೆರೆ ತಾಲೂಕು ಮಹಿಳಾ ಒಕ್ಕಲಿಗರ ಸಂಘ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್ ಮಾತನಾಡಿ ಅಡು ಮುಟ್ಟದ ಸೊಪ್ಪಿಲ್ಲ, ನಾರಿ ಸಾಧನೆ ಮಾಡದ ಕ್ಷೇತ್ರವಿಲ್ಲ ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಇರುವುದು ಹೆಮ್ಮೆಯ ವಿಚಾರ, ಮಹಿಳೆಯನ್ನು ನೋಡುವ ಮನಸ್ಥಿತಿ ಬದಲಾಗಿದೆ. ಇಂದು ಮಹಿಳೆಯನ್ನು ಸಮಾಜದ ಕೇಂದ್ರ ಬಿಂದುವಾಗಿ ನೋಡುತ್ತಿರುವುದು ಹೆಮ್ಮೆಯ ವಿಚಾರ, ಮಹಿಳೆ ಶೋಷಣೆಯನ್ನು ಸಹಿಸದೆ ಅದರ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.

ಚುಂಚಶ್ರೀ ತರೀಕೆರೆ ತಾಲೂಕು ಮಹಿಳಾ ಒಕ್ಕಲಿಗರ ಸಂಘ ಉಪಾಧ್ಯಕ್ಷೆ ರಾಜೇಶ್ವರಿ ಸೀತಾರಾಂ, ಖಜಾಂಚಿ ಕಾವ್ಯ ಗಣೇಶ್, ಸಂಘಟನಾ ಕಾರ್ಯದರ್ಶಿ ಕಲಾ ಮಾಲತೇಶ್, ನಿರ್ದೇಶಕರಾದ ಅಶ್ವಿನಿ ಸಚಿನ್, ಅನಿತಾ ಜವರೇಗೌಡ, ಆಶಾ ಶ್ರೀನಿವಾಸ್, ಭಾಗ್ಯ ಜವರೇಗೌಡ್ರು, ಜಯಂತಿ ಮದುಸೂದನ್, ಭಾಗ್ಯ ರಾಜು, ಜಯಲಕ್ಷ್ಮಿ ಕುಮಾರ್, ಲತಾ ಹನುಮಂತ ಯ್ಯ, ಮಮತ ರಮೇಶ್, ಪದ್ಮಶ್ರೀ ಕೃಷ್ಣಮೂರ್ತಿ, ರೂಪಾ ಕೃಷ್ಣ, ಶಾಂತ ವೆಂಕಟೇಶ್, ಸುಜಾತ ಶ್ರೀನಿವಾಸ್ , ಕಾರ್ಯ ದರ್ಶಿ ಮಾನಸ ಜಯಕುಮಾರ್ , ಸಹಕಾರ್ಯದರ್ಶಿ ಶೈಲಾ ಕೆಂಪೇಗೌಡ ಮತ್ತು ಸದಸ್ಯರು ಭಾಗವಹಿಸಿದ್ದರು.21ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ಚುಂಚಶ್ರೀ ತರೀಕೆರೆ ತಾಲೂಕು ಮಹಿಳಾ ಒಕ್ಕಲಿಗರ ಸಂಘದಿಂದ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯನ್ನು ವಾಣಿ ಶ್ರೀನಿವಾಸ್ ಉದ್ಘಾಟಿಸಿದರು. ಚುಂಚಶ್ರೀ ತರೀಕೆರೆ ತಾಲೂಕು ಮಹಿಳಾ ಒಕ್ಕಲಿಗರ ಸಂಘ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್ ಮತ್ತಿತರರು ಇದ್ದರು.