ಸಹಕಾರ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳಿವೆ. ದೇಶಾದ್ಯಂತ ಅನೇಕ ಮಹಿಳೆಯರು ಈ ಮೂಲಕ ಸಾಧನೆ ಮಾಡಿದ್ದಾರೆ. ಜೀವನ ನಿರ್ವಹಣೆಗೂ ಕಷ್ಟಪಡುತ್ತಿದ್ದವರು ಇಂದು ಸಹಕಾರ ಭಾರತಿ ನೆರವಿನಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಸಹಕಾರ ಭಾರತಿಯ ರಾಜ್ಯ ಮಹಿಳಾ ಪ್ರಮುಖ್ ಶೈಲಾ ಹಿರೇಮಠ್ ತಿಳಿಸಿದ್ದಾರೆ.
- ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಶೈಲಾ ಹಿರೇಮಠ್
- - -ಕನ್ನಡಪ್ರಭ ವಾರ್ತೆ ಜಗಳೂರು
ಸಹಕಾರ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳಿವೆ. ದೇಶಾದ್ಯಂತ ಅನೇಕ ಮಹಿಳೆಯರು ಈ ಮೂಲಕ ಸಾಧನೆ ಮಾಡಿದ್ದಾರೆ. ಜೀವನ ನಿರ್ವಹಣೆಗೂ ಕಷ್ಟಪಡುತ್ತಿದ್ದವರು ಇಂದು ಸಹಕಾರ ಭಾರತಿ ನೆರವಿನಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಸಹಕಾರ ಭಾರತಿಯ ರಾಜ್ಯ ಮಹಿಳಾ ಪ್ರಮುಖ್ ಶೈಲಾ ಹಿರೇಮಠ್ ತಿಳಿಸಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಗೌರವಿ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ''''''''ಜಗಳೂರು ತಾಲೂಕು ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗ''''''''ವನ್ನು ಭಾರತಮಾತೆ ಹಾಗೂ ಲಕ್ಷ್ಮಣ ರಾವ್ ಇನಾಂದಾರ್ ಭಾವಚಿತ್ರಗಳಿಗೆ ಪುಷ್ಪಸಮರ್ಪಣೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಒಗ್ಗಟ್ಟಿನಿಂದ ಸಮಸ್ಯೆಗಳಿಗೆ ಪರಿಹಾರ:ಮಹಿಳೆಯರು ಮೊದಲಿಗೆ ಸಂಘಟನೆ ಸದಸ್ಯತ್ವವನ್ನು ಪಡೆದು, ನಂತರ ಅಭ್ಯಾಸ ವರ್ಗ ಹಾಗೂ ಸಮಾವೇಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಾವು ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಇತರ ಮಹಿಳೆಯರನ್ನೂ ಕರೆತರಬೇಕು. ಇಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಕ್ತ ಅವಕಾಶವಿದೆ. ಪ್ರತಿಯೊಬ್ಬರೂ ಸಹಕಾರ ಭಾರತದೊಂದಿಗೆ ಕೈಜೋಡಿಸಿ, ಸ್ವಉದ್ಯೋಗದ ಮೂಲಕ ಗೌರವಯುತ ಜೀವನ ನಡೆಸಬೇಕು ಎಂದರು.
700 ಜಿಲ್ಲೆಗಳಲ್ಲಿ ವಿಸ್ತರಣೆ:ಜಿಲ್ಲಾ ಮಹಿಳಾ ಪ್ರಮುಖ್ ಪುಷ್ಪವಾಲಿ ಮಾತನಾಡಿ, ದೇಶದ ಸುಮಾರು 700 ಜಿಲ್ಲೆಗಳಲ್ಲಿ ಸಹಕಾರ ಭಾರತಿ ವಿಸ್ತರಿಸಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಯಾವುದೇ ಜಾತಿಭೇದವಿಲ್ಲದೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚಿಸಬಹುದು. ಪರಿಸರ ಸಂರಕ್ಷಣೆ, ನೀರು ಉಳಿತಾಯ, ಪ್ಲಾಸ್ಟಿಕ್ ಮುಕ್ತ ಸಮಾಜ, ಮಕ್ಕಳಿಗೆ ಸಂಸ್ಕಾರ ನೀಡುವುದು, ಹಿರಿಯರಿಗೆ ಗೌರವ ಕೊಡುವುದು ಹಾಗೂ ನಾಗರಿಕರ ಕರ್ತವ್ಯಗಳಂತಹ ನೂರಾರು ಉಪಯುಕ್ತ ವಿಷಯಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ ಎಂದರು.
ವಿಶೇಷ ಉಪನ್ಯಾಸಗಳು:ಕಾರ್ಯಕ್ರಮದ ಭಾಗವಾಗಿ ''''''''''''''''ಸಹಕಾರ ಭಾರತ ಪರಿಚಯ'''''''''''''''' ಹಾಗೂ ''''''''''''''''ಆಡಳಿತ ಮಂಡಳಿ ನಿರ್ದೇಶಕರ ಜವಾಬ್ದಾರಿಗಳು ಮತ್ತು ಕರ್ತವ್ಯಗಳು'''''''''''''''' ಎಂಬ ವಿಷಯಗಳ ಕುರಿತು ಗಣ್ಯರಿಂದ ವಿಶೇಷ ಉಪನ್ಯಾಸ ನಡೆಯಿತು. ಬೆಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಮಾಲತೇಶ್ ಆಚಾರ್ಯ, ಜಿಲ್ಲಾಧ್ಯಕ್ಷ ಇಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ, ಹಾಲು ಒಕ್ಕೂಟದ ಪ್ರಮುಖರಾದ ಪಾಲಾಕ್ಷಪ್ಪ, ಜಿಲ್ಲಾ ಕಾರ್ಯದರ್ಶಿ ದೇವಿಕೆರೆ ಶಿವಕುಮಾರ ಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ನರೇಶ್ , ಎನ್. ದೀಪಾ, ಜಲ್ದಾಕ್ಷಿ, ಪ್ರಿಯಾಂಕ್, ಲತಾ, ಹೇಮಾವತಿ, ನೂರಾರು ಮಹಿಳಾ ಸಹಕಾರಿ ಬಂಧುಗಳು ಉಪಸ್ಥಿತರಿದ್ದರು.
- - -(ಬಾಕ್ಸ್) * ಮಹಿಳೆಯರು ಬಲವರ್ಧನೆಗೆ ಶ್ರಮಿಸಲಿ: ಶ್ವೇತ ಆರಾಧ್ಯ
ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಹಿಳಾ ಪ್ರಮುಖ್ ಶ್ವೇತ ಆರಾಧ್ಯ ಮಾತನಾಡಿ, ಇಂದಿನ ಕಾಲದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಅತ್ಯಂತ ಅಗತ್ಯ. ಲಕ್ಷ್ಮಣ ರಾವ್ ಇನಾಂದಾರ್ ಅವರು 1978ರಲ್ಲಿ ಸಹಕಾರ ಭಾರತಿಯನ್ನು ಆರಂಭಿಸಿದಾಗ ಅಂದಿನ ಪ್ರಧಾನಮಂತ್ರಿ ಇದರಿಂದ ಪ್ರೇರಿತರಾಗಿದ್ದರು. ಸಹಕಾರವೇ ಸಂಘಟನೆಯ ಜೀವಾಳವಾಗಿದೆ. ಅಭ್ಯಾಸ ವರ್ಗದಲ್ಲಿ ಲಭ್ಯವಾಗುವ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು, ಮಹಿಳೆಯರು ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಸಹಕಾರ ಭಾರತಿಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.- - -
-19ಜಗಳೂರು1:ಜಗಳೂರಲ್ಲಿ ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗ ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಪ್ರಮುಖ್ ಶೈಲಾ ಹಿರೇಮಠ್ ಚಾಲನೆ ನೀಡಿದರು.