ಸಾರಾಂಶ
ಮಾಗಡಿ: ಗ್ರಾಮದಲ್ಲಿ ಮಹಿಳೆಯರು ಸುಸ್ಥಿರ ಬದುಕು ರೂಪಿಸಿಕೊಳ್ಳಲು ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ನಾರಾಯಣ ಶ್ಲಾಘಿಸಿದರು.
ತಾಲೂಕಿನ ಬಿರಾವರದಲ್ಲಿ ಬೆಂಗಳೂರಿನ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಮಶ್ರಕ್ ಗ್ಲೋಬಲ್ ಕಂಪನಿ, ರಿಫಲ್ ಆಫ್ ಚೇಂಚ್ ಫೌಂಡೇಷನ್, ಕಳ್ಳಿಪಾಳ್ಯ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಸಂಘಟಿತರಾದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಮ್ಮ ಗ್ರಾಮದ ಮಹಿಳೆಯರು ಕೈಗೊಂಡಿರುವ ಕೃಷಿ ಚಟುವಟಿಕೆಗಳು ಒಂದು ಉದಾಹರಣೆ. ಮುಂದಿನ ದಿನಗಳಲ್ಲಿ, ಇಂತಹ ಕಾರ್ಯಕ್ರಮಗಳಿಗೆ ಪಂಚಾಯ್ತಿ ವತಿಯಿಂದ ಇನ್ನೂ ಹೆಚ್ಚಿನ ಬೆಂಬಲ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಹಿಟ್ನಾಳ್ ಅವರು ಮುಟ್ಟು ಮತ್ತು ಮೌಢ್ಯ ಮತ್ತು ಶುಚಿತ್ವದ ಕುರಿತು ಉಪನ್ಯಾಸ ನೀಡಿದರು.ಮಶ್ರಕ್ ಗ್ಲೋಬಲ್ ಕಂಪನಿ ರಮೇಶ್ ಮಾತನಾಡಿ, ನಮ್ಮ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ನೀಡಿರುವ ಹಣ, ಮಹಿಳಾ ಸಬಲೀಕರಣಕ್ಕೆ ಇಷ್ಟು ಉತ್ತಮವಾಗಿ ಸದ್ಬಳಕೆಯಾಗುತ್ತಿರುವುದು ಖುಷಿ ತಂದಿದೆ. ಇಂತಹ ಕಾರ್ಯಗಳನ್ನು ಮುಂದೆಯೂ ಸಂಸ್ಥೆ ಬೆಂಬಲಿಸಲಿದೆ ಎಂದು ತಿಳಿಸಿದರು.
ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ಕೆ.ರವಿ ಮಾತನಾಡಿ, ಮಶ್ರಕ್ ಕಂಪನಿ ಆರ್ಥಿಕ ನೆರವಿನೊಂದಿಗೆ, ಆರ್‌ಸಿಒಎಫ್ ಸಹಯೋಗದಲ್ಲಿ ಬಿರಾವರ ಮತ್ತು ಕಳ್ಳಿಪಾಳ್ಯ ಹಾಗೂ ದೊಡ್ಡಬಳ್ಳಾಪುರ ಚೆನ್ನಮ್ಮದೇವಿ ಅಗ್ರಹಾರದಲ್ಲಿ ಅನುಷ್ಠಾನಗೊಳ್ಳುತ್ತಿರುವ ''''ವಿಶ್ವಾಸ್'''' ಯೋಜನೆ ಕುರಿತು ಮಾಹಿತಿ ನೀಡಿದರು.ಸಂಪನ್ಮೂಲ ಕೇಂದ್ರ ಉದ್ಘಾಟನೆ:
ಕಾರ್ಯಕ್ರಮಕ್ಕೂ ಮುನ್ನ ‘ಅಮ್ಮನ ಮನೆ‘ಯಲ್ಲಿ ಭೂಮಿ ಸಂಸ್ಥೆ ಆರಂಭಿಸಿರುವ ಸಮುದಾಯ ಸಂಪನ್ಮೂಲ ಕೇಂದ್ರವನ್ನು ಮುಶ್ರಕ್ ಗ್ಲೋಬಲ್ ಸರ್ವೀಸ್ ಕಂಪನಿ ಮುಖ್ಯಸ್ಥರಾದ ಶಂಕರ್, ಜಯಂತಿ, ಜಯರಾಂ, ಗಣೇಶ್ ಮತ್ತು ಆರ್‌ಒಸಿಎಫ್‌ನ ಕವಿತಾ ಮತ್ತು ಭೂಮಿ ಸಂಸ್ಥೆಯ ನಿರ್ದೇಶಕರು ಉದ್ಘಾಟಿಸಿದರು.ಕಾರ್ಯಕ್ರಮದ ಬಳಿಕ ಅತಿಥಿಗಳು ''''ವಿಶ್ವಾಸ್'''' ಯೋಜನೆಯಡಿ ಸಂಘದ ಮಹಿಳೆಯರು ತಮ್ಮ ಮನೆಯೆಂಗಳದಲ್ಲಿ ನಿರ್ಮಿಸಿರುವ ಕೈತೋಟ, ಔಷಧೀಯ ಗಿಡಗಳ ತೋಟ, ಎರೆಹುಳು ಗೊಬ್ಬರ ಘಟಕಗಳನ್ನು ವೀಕ್ಷಿಸಿ, ಸ್ವಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ರುಚಿ ಸವಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆ ಅನಿತಾ, ಗ್ರಾಪಂ ಸದಸ್ಯರಾದ ಲಕ್ಕೇನಹಳ್ಳಿ ಗಂಗರಾಜು, ಗುಡೇಮಾರನಹಳ್ಳಿ ಹನುಮಂತರಾಯಪ್ಪ, ಪಂಕಜಮ್ಮ, ಮಾಜಿ ಸದಸ್ಯರಾದ ನಾರಾಯಣಪ್ಪ, ಆರ್‌ಸಿಎಫ್ ಮುಖ್ಯಸ್ಥೆ ಕವಿತಾ, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಸುಶೀಲಾ ಕಾಮತ್, ಕಾರ್ಯದರ್ಶಿ ಗೀತಾರಾಣಿ, ನಿರ್ದೇಶಕಿ ಶ್ವೇತಾ, ಬಿರಾವರ, ಕಳ್ಳಿಪಾಳ್ಯ ಮಹಿಳೆಯರು, ವಿಶ್ವಾಸ್ ಯೋಜನೆಯ ಫಲಾನುಭವಿಗಳು ಹಾಜರಿದ್ದರು.(ಫೋಟೋ ಕ್ಯಾಫ್ಷನ್ 17.3.24ನಲ್ಲಿ IMG-20240316-WA0071 ನಲ್ಲಿ ಫೋಟೋ ಇದೆ)ಮಾಗಡಿ ತಾಲೂಕಿನ ಬಿರಾವರದಲ್ಲಿ ಬೆಂಗಳೂರಿನ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಮಶ್ರಕ್ ಗ್ಲೋಬಲ್ ಕಂಪನಿ, ರಿಫಲ್ ಆಫ್ ಚೇಂಚ್ ಫೌಂಡೇಷನ್, ಕಳ್ಳಿಪಾಳ್ಯ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ನಾರಾಯಣ ಉದ್ಘಾಟಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))