ಮಹಿಳೆಯರು ಸಂಘಟಿತರಾಗಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿ ಬನ್ನಿ, ತಮ್ಮಲ್ಲಿರುವ ಕೀಳಿಮೆಯನ್ನು ಬಿಟ್ಟರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜೆಎಸ್‌ಎಸ್ ಅಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಿಕಾ ತಿಳಿಸಿದರು.

- ಮಗು ಹೆಣ್ಣೆಂದು ತಿಳಿದು ಮೂಗು ಮುರಿಯುವವರೂ ಹೆಣ್ಣೇ ಆಗಿರುವುದು ದುರಂತ । ವಿಶ್ವ ಮಹಿಳಾ ದಿನಾಚರಣೆ ವೇಳೆ ಕಳವಳ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಿಳೆಯರು ಸಂಘಟಿತರಾಗಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿ ಬನ್ನಿ, ತಮ್ಮಲ್ಲಿರುವ ಕೀಳಿಮೆಯನ್ನು ಬಿಟ್ಟರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜೆಎಸ್‌ಎಸ್ ಅಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಿಕಾ ತಿಳಿಸಿದರು.ಮಹಾಮನೆಯಲ್ಲಿ ಕದಳಿ ಮಹಿಳಾ ವೇದಿಕೆಯ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಶರಣರ ವಿವಿಧ ವೇಷಭೂಷಣ ಪ್ರಧರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಇಂದು ಎಲ್ಲಾ ರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ವಿಶ್ವ ಮಹಿಳೆ ದಿನಾಚರಣೆಯು ಮಾ.೮ರಂದು ಆಗಿದ್ದು, ಈ ದಿನವನ್ನು ಮಹಿಳೆಯರು ವಿಶೇಷವಾಗಿ ಆಚರಿಸುವ ಜೊತೆಗೆ ಪ್ರಗತಿಯತ್ತ ಸಾಗಬೇಕು. ಯಾವುದೇ ಕ್ಷೇತ್ರವಾದರು ಅಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೆ, ಯಶಸ್ಸು ನಮ್ಮದಾಗುತ್ತದೆ. ನಮ್ಮ ತಂದೆ ನನ್ನನ್ನು ವೈದ್ಯಕೀಯ ಶಿಕ್ಷಣ ಕೊಡಿಸಿ, ವ್ಯಾಸಂಗ ಮಾಡಿಸಿದ ಫಲವಾಗಿ ನಾನಿಂದು ಸ್ತ್ರೀರೋಗ ತಜ್ಞೆಯಾಗಿದ್ದೇನೆ. ನಮ್ಮ ಯಶಸ್ಸಿನಿಂದ ತಂದೆ, ತಾಯಿ ಇರುತ್ತಾರೆ. ಅವರ ನಿರಂತರ ಪರಿಶ್ರಮ ಮತ್ತು ಪ್ರೋತ್ಸಾಹ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಬಸವವಾದಿ ಶರಣರು ೧೨ನೇ ಶತಮಾನದಲ್ಲೇ ಸಮಾನತೆಯನ್ನು ಸಾರಿದರು. ಅವರ ನೀಡಿದ ಪ್ರೋತ್ಸಾಹ ಇಂದು ನಾವೆಲ್ಲರು ಒಂದೆಡೆ ಸೇರಲು ಸಾಧ್ಯವಾಗಿದೆ. ಅಂಥ ಶರಣರ ಪರಂಪರೆಯನ್ನು ಎಲ್ಲರು ಉಳಿಸಿಬೆಳೆಸೋಣ ಎಂದರು.ಮತ್ತೋರ್ವ ಬಸವರಾಜೇಂದ್ರ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾದ ಡಾ. ಶ್ವೇತಾ ಶಶಿಧರ್‌ ಅವರು ಉಪನ್ಯಾಸ ನೀಡಿ, ಮಹಿಳೆಯರು ಮೊದಲು ನಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು, ಸಮಾಜದ ಮುಖ್ಯವಾಹಿನಿ ಬರಬೇಕು. ಹೆಣ್ಣು ಹುಟ್ಟಿತ್ತಲ್ಲ ಎಂದು ತಾತ್ಸಾರ ಮಾಡುವವಳು ಸಹ ಹೆಣ್ಣೆ. ಇಂಥ ಮನಸ್ಥಿತಿಯನ್ನು ತಾಯಿ, ಅತ್ತೆಯಾದರು ಬಿಡಬೇಕು. ‘ಹೆಣ್ಣೊಂದು ಕಲಿತರೇ, ಶಾಲೆಯೊಂದು ತೆರೆದಂತೆ’ ಹೀಗಾಗಿ ಮಹಿಳೆಯರು ಇಂದು ಆಕಾಶಯಾನ ಮಾಡಿ ಬಂದಿದ್ದಾರೆ. ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಹೀಗಾಗಿ ಮಹಿಳೆಯರು ಪ್ರಗತಿಯಲ್ಲಿ ಸಹ ಸಹಕಾರ ನೀಡಬೇಕು. ಹೆಣ್ಣು ಭ್ರೂಣ ಹತ್ಯೆಗೆ ನಿಲ್ಲಬೇಕು. ಪುರುಷರನ್ನು ದ್ವೇಷ ಮಾಡುವುದಲ್ಲ. ಅವರಿಗೆ ಅಂಥ ಮನಸ್ಥಿತಿಯನ್ನು ತುಂಬುವವರ ಯಾರು. ಹೀಗಾಗಿ ಪ್ರತಿಯೊಬ್ಬರು ಹೆಣ್ಣಿನ ಬಗ್ಗೆ ಸಹನೆ ತೋರುವುದು ಬೇಡ. ಅವಳಿಗೆ ಅವಕಾಶ ನೀಡಿ, ಗೆದ್ದು ಬರುವ ಶಕ್ತಿ ಸಾಮರ್ಥ ಇದೆ ಎಂದರು.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಮಾತನಾಡಿ, ಕುಮಾರಸ್ವಾಮಿ ಅವರು ತಮ್ಮ ತಂದೆ ಗುರುಮಲ್ಲಪ್ಪ ಅವರ ಹೆಸರಿನಲ್ಲಿ ದತ್ತಿ ಹಾಗೂ ರತ್ನಮ್ಮ ಬಸವರಾಜು ಅವರು ಮಹದೇವಮ್ಮ ರುದ್ರಪ್ಪ ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ ಕಾರ್ಯಕ್ರಮ ಇದಾಗಿದ್ದು, ಶರಣರ ವಿಚಾರವನ್ನು ತಿಳಿದುಕೊಳ್ಳುವ ಜೊತೆಗೆ ಅನುಭವ ಮಂಟಪದಲ್ಲಿ ಎಲ್ಲ ವರ್ಗದವರು ಹಾಗೂ ಮಹಿಳೆಯರಿಗೆ ವಿಶೇಷ ಸ್ಥಾನವನ್ನು ನಮ್ಮ ಶರಣರು ನೀಡಿದ್ದರು. ಇಂಥ ಸಂಸ್ಕೃತಿ ಪರಂಪರೆಯನ್ನು ಎಲ್ಲರು ಮುಂದುವರಿಸಿಕೊಂಡು ಹೋಗೋಣ ಎಂದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ವಸಂತಮ್ಮ ವಹಿಸಿದ್ದರು. ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ದತ್ತಿ ದಾನಿಗಳಾದ ರತ್ನಮ್ಮ ಬಸವರಾಜು, ವಿಜಯಾಂಬ ಕುಮಾರಸ್ವಾಮಿ, ಪಾರ್ವತಿ ಬಳಗದ ಅಧ್ಯಕ್ಷರಾದ ಆಶಾ, ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಅನ್ನಪೂರ್ಣ ಪದಾಧಿಕಾರಿಗಳು, ಸದಸ್ಯರು ಮೊದಲಾದವರು ಇದ್ದರು.ಅನುಭವ ಮಂಪಟದಲ್ಲಿರುವ ಶರಣರ ವೇಷಭೂಷಣಗಳನ್ನು ಧರಿಸಿ, ಅವರ ವಚನಗಳನ್ನು ಹೇಳುವ ಮೂಲಕ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಶರಣರ ವೇಷಗಳನ್ನು ಧರಿಸಿ ಗಮನ ಸೆಳೆದರು. ಮಹಿಳಾ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು.---

29ಸಿಎಚ್ಎನ್‌12

ವಿಶ್ವ ಮಹಿಳಾ ದಿನಾಚರಣೆ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಶರಣರ ವಿವಿಧ ವೇಷಭೂಷಣ ಪ್ರದರ್ಶನ ಕಾರ್ಯಕ್ರಮವನ್ನು ಜೆಎಸ್‌ಎಸ್ ಅಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಿಕಾ ಉದ್ಘಾಟಿಸಿದರು.