ಪುರಾಣ ಪುಣ್ಯಕಥೆಗಳಲ್ಲಿ ಮಹಿಳೆಗೆ ಉತ್ತಮ ಸ್ಥಾನಮಾನವಿದೆ. ಆದರೆ ಹಿಂದಿನ ಶತಮಾನಗಳಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗೆ ಕಳುಹಿಸುತ್ತಿರಲಿಲ್ಲ ಹಾಗೂ ವಿದ್ಯಾಭ್ಯಾಸ ಕೊಡಿಸುತ್ತಿರಲಿಲ್ಲ ಎಂದು ಓದಿದ್ದೇವೆ. ನಂತರದ ವರ್ಷಗಳಲ್ಲಿ ಕಾಲ ಮುಂದುವರಿದಂತೆ ಮಹಿಳೆಯರು ವಿದ್ಯಾವಂತರಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿ, ಮಹಿಳೆಯರು ಅಬಲರಲ್ಲ ಸಬಲರು ಎಂದು ತೋರಿಸಿದ್ದಾರೆ ಎಂದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಒಂದು ಆಚರಣೆಯಾಗದೇ ಪ್ರತಿನಿತ್ಯ ಎಲ್ಲಾ ಮಹಿಳೆಯರಿಗೆ ಗೌರವ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಹಿಳೆಯರು ಮನೆಯಲ್ಲಿ ಹಾಗೂ ಹೊರಗೆ ಬಹಳ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತೀರಿ. ಆದರೆ ನಿಮ್ಮ ಬಗ್ಗೆ ನಿಮ್ಮಗೇ ಕಾಳಜಿ ಇರುವುದಿಲ್ಲ., ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರು ಹಾಗೂ ಆಡಳಿತ ವೈದ್ಯಾಧಿಕಾರಿ ಡಾ. ಮಂಜುಳಾ ಸಲಹೆ ನೀಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪುರಾಣ ಪುಣ್ಯಕಥೆಗಳಲ್ಲಿ ಮಹಿಳೆಗೆ ಉತ್ತಮ ಸ್ಥಾನಮಾನವಿದೆ. ಆದರೆ ಹಿಂದಿನ ಶತಮಾನಗಳಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗೆ ಕಳುಹಿಸುತ್ತಿರಲಿಲ್ಲ ಹಾಗೂ ವಿದ್ಯಾಭ್ಯಾಸ ಕೊಡಿಸುತ್ತಿರಲಿಲ್ಲ ಎಂದು ಓದಿದ್ದೇವೆ. ನಂತರದ ವರ್ಷಗಳಲ್ಲಿ ಕಾಲ ಮುಂದುವರಿದಂತೆ ಮಹಿಳೆಯರು ವಿದ್ಯಾವಂತರಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿ, ಮಹಿಳೆಯರು ಅಬಲರಲ್ಲ ಸಬಲರು ಎಂದು ತೋರಿಸಿದ್ದಾರೆ ಎಂದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಒಂದು ಆಚರಣೆಯಾಗದೇ ಪ್ರತಿನಿತ್ಯ ಎಲ್ಲಾ ಮಹಿಳೆಯರಿಗೆ ಗೌರವ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.ಸಹಾಯಕ ಆಡಳಿತ ವೈದ್ಯಾಧಿಕಾರಿ ಚಿನ್ನಮ್ಮ ಮಾತನಾಡಿ ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಕೆಲವೊಮ್ಮೆ ದೈಹಿಕ ಸಹಜ ವ್ಯತ್ಯಾಸಗಿಳಿಂದ ಸೊರಗಿದಂತೆ ಕಂಡರೂ ತಕ್ಷಣ ಚೇತರಿಸಿಕೊಂಡು ತಮ್ಮ ನಿತ್ಯ ಕರ್ತವ್ಯದಲ್ಲಿ ತೊಡಗಿಸಿಕೊಂಡು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ರಾಜಮಹಾರಾಜರ ಆಡಳಿತದಲ್ಲಿ ಮಹಾರಾಣಿಗೂ ಶಸ್ತ್ರಾಭ್ಯಾಸ ಮಾಡಿಸುತ್ತಿದ್ದರು. ಶಸ್ತ್ರಾಭ್ಯಾಸ ಮಾಡಿದ ಮಹಾರಾಣಿಯರು ಅಗತ್ಯ ಸಮಯದಲ್ಲಿ ಸೇನಾಧಿಪತಿಯಾಗಿ ಸೈನ್ಯವನ್ನು ಮುನ್ನೆಡೆಸಿ ಜಯಗಳಿಸಿ ಸಮರ್ಥರು ಎಂದು ತೋರಿಸಿದ್ದಾರೆ ಎಂದರು. ಶುಶ್ರೂಷಕ ಅಧೀಕ್ಷಕಿ ಮೀನಾಕ್ಷಿ ಮಾತನಾಡಿ ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವ, ಮದರ್‌ತೆರೇಸ, ಕಲ್ಪನಾಚಾವ್ಲ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ಸಾಭೀತು ಮಾಡಿದ್ದಾರೆ. ಮಹಿಳೆ ತಾಯಿಯಾಗಿ, ಅಕ್ಕ ತಂಗಿಯಾಗಿ, ಹೆಂಡತಿಯಾಗಿ, ಶಿಕ್ಷಕಿಯಾಗಿ, ವೈದ್ಯೆಯಾಗಿ, ಶುಶ್ರೂಷಕಿಯಾಗಿ, ಕ್ರೀಡಾಪಟುವಾಗಿ ಪುರುಷರಿಗೆ ಸಮಾನರು ಎನಿಸಿದ್ದಾರೆ ಎಂದರು. ಆಡಳಿಯ ವೈದ್ಯಾಧಿಕಾರಿ ಡಾ. ಮಂಜುಳಾ ಆಸ್ಪತ್ರೆಯ ಎಲ್ಲ ಮಹಿಳಾ ವೈದ್ಯರಿಗೆ, ಶುಶ್ರೂಷಕಿಯರಿಗೆ, ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಹಾಗೂ ಆಟೋಟ ಜತೆಗೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಯಶಸ್ವಿನಿ ಪ್ರಾರ್ಥಿಸಿದರು, ಡಾ. ಕುಸುಮಾ ಸ್ವಾಗತಿಸಿದರು, ತುಳಸಿಕುಮಾರಿ ವಂದಿಸಿದರು, ನಾಗರತ್ನ ನಿರೂಪಿಸಿದರು ಹಾಗೂ ಪ್ರಮೋದಿನಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಆಡಳಿತಾಧಿಕಾರಿಯಾಗಿದ್ದ ಡಾ. ಲಕ್ಷ್ಮೀಕಾಂತ್ ಹಾಗೂ ಡಾ. ಧನಶೇಖರ್, ಡಾ. ವಿಜಯಕುಮಾರ್, ಡಾ. ವಿನಯ್ ಕುಮಾರ್, ಡಾ. ಪ್ರತಿಭಾ, ಡಾ. ಅಶ್ವತಿ, ಡಾ. ಶ್ರೇಯಾ, ಡಾ. ಪುಷ್ಯ, ಡಾ. ಭವ್ಯ, ಡಾ.ರೇಖಾ, ಡಾ. ನಾಗಕನ್ಯ, ಡಾ. ಪ್ರೀತಿ, ಡಾ. ಮಹಿಮಾ, ಡಾ. ವರ್ಷಾ, ಡಾ. ನಟರಾಜ್, ಡಾ. ದಿನೇಶ್, ಡಾ. ಸತ್ಯಪ್ರಕಾಶ್, ಡಾ. ಸೆಲ್ವ ಕುಮಾರ್, ಡಾ. ಅಜಯ್ ಕುಮಾರ್, ಡಾ. ಶ್ರೀನಿವಾಸ್, ಡಾ. ಲೋಕೇಶ್, ಡಾ. ಸತೀಶ್, ಡಾ. ಬಾಲಕೃಷ್ಣ, ಡಾ. ಸಂದೀಪ್ ಗೌಡ, ಡಾ. ಸುಜನ್, ಶುಶ್ರೂಷಕ ಅಧೀಕ್ಷಕ ಗ್ರೇಡ್-೨ ರವೀಂದ್ರ ಕುಮಾರ್, ಕಚೇರಿ ಅಧೀಕ್ಷಕ ಅಣ್ಣೇಗೌಡ, ಶುಶ್ರೂಷಕರಾದ ಕವಿತಾ, ಶಾಂತಿ, ಪಂಕಜಾ, ಶೈಲಾ, ಶಿಲ್ಪ, ಭಾಗ್ಯ, ಇತರರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವೈದ್ಯರು ಹಾಗೂ ಸಿಬ್ಬಂದಿ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.