ಸೂಲಿಬೆಲೆ: ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕೌಶಲ್ಯ ತರಬೇತಿ ಪಡೆದು ಸ್ವ ಉದ್ದಿಮೆಗಳಲ್ಲಿ ತೊಡಗಿಕೊಂಡು ಆರ್ಥಿಕ ಸಬಲರಾಗಬೇಕು ಎಂದು ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಹಾಪ್ರಬಂಧಕ ಮಹೇಶ್ ಪೈ ಹೇಳಿದರು

ಸೂಲಿಬೆಲೆ: ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕೌಶಲ್ಯ ತರಬೇತಿ ಪಡೆದು ಸ್ವ ಉದ್ದಿಮೆಗಳಲ್ಲಿ ತೊಡಗಿಕೊಂಡು ಆರ್ಥಿಕ ಸಬಲರಾಗಬೇಕು ಎಂದು ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಹಾಪ್ರಬಂಧಕ ಮಹೇಶ್ ಪೈ ಹೇಳಿದರು.

ಹೋಬಳಿಯ ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಸ್ತ್ರ ಚಿತ್ರ ಕಲಾ ಉದ್ಯಮಿ ತರಬೇತಿ ಶಿಬಿರದ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿದ್ಯ ನೀಡುತ್ತಿದೆ. ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ಸ್ವಂತ ಉದ್ಯಮ ಪ್ರಾರಂಭಿಸಬೇಕು. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ಅಂಬರೀಷ್ ಮಾತನಾಡಿ, ಸಂಸ್ಥೆಯಲ್ಲಿ ನೀಡಲಾಗುವ ವಿವಿಧ ತರಬೇತಿಗಳನ್ನು ಪಡೆದ ಫಲಾನುಭವಿಗಳು ಸ್ವಂತ ಉದ್ಯಮ ಪ್ರಾರಂಭಿಸಿ ಇತರರಿಗೆ ಮಾದರಿಯಾಗಬೇಕು. ಸಂಸ್ಥೆಯ ರಾಯಭಾರಿಗಳಾಗಿ ಮತ್ತಷ್ಟು ಮಹಿಳೆಯರಿಗೆ ತರಬೇತಿ ಮಾಹಿತಿ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರನ್ನು ಸಂಸ್ಥೆಯಿಂದ ಗೌರವಿಸಲಾಯಿತು. ಉಪನ್ಯಾಸಕರಾದ ಮುನಿಕೃಷ್ಣ, ಮಧುಪ್ರಿಯ, ಸಿಂದುಜ, ಸುಗುಣ, ಕವನ, ನಾಗೇಶ್‌ ಇತರರಿದ್ದರು.