ಮಹಿಳೆಗೆ ಎಲ್ಲ ರಂಗದಲ್ಲೂ ಅವಕಾಶ ಕಲ್ಪಿಸಬೇಕು

| Published : Mar 11 2025, 12:48 AM IST

ಸಾರಾಂಶ

ಮಹಿಳೆಯರಿಗೆ ಸಂವಿಧಾನದಲ್ಲಿ ಪ್ರಮುಖ ಹಕ್ಕುಗಳನ್ನು ನೀಡಲಾಗಿದೆ. ವೇದಗಳ ಕಾಲದಲ್ಲಿಯೇ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಧನೆಯನ್ನು ಮಾಡಿ ತೋರಿಸುತ್ತಿದ್ದಾರೆ. ಪೈಲೆಟ್‌ನಿಂದ ಹಿಡಿದು ರಾಷ್ಟ್ರಪತಿ ಹುದ್ದೆಯ ವರೆಗೆ ಮಹಿಳೆಯರು ಇರುವ ಬಗ್ಗೆ ಛಾಪು ಮೂಡಿಸಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಹಿಳೆಯರ ಸಬಲೀಕರಣಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಸಮಾನ ಅವಕಾಶ, ನಾಯಕತ್ವ ಮತ್ತು ಉದ್ಯೋಗಗಳಲ್ಲಿ ಅವಕಾಶವನ್ನು ನೀಡಬೇಕು ಎಂದು ತಾಪಂ ಇಒ ಎಚ್. ರವಿಕುಮಾರ್ ಹೇಳಿದರು. ಪಟ್ಟಣದ ಎಸ್‌ವಿಆರ್ ಕಲ್ಯಾಣ ಮಂಟಪದಲ್ಲಿ ಬಜ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಜ್ ಹಬ್ಬವನ್ನು ಮಹಿಳಾ ಸಬಲೀಕರಣ ಮತ್ತು ಯಶಸ್ಸಿನ ಸಂಭ್ರಮಾಚರಣೆ ಎಂಬ ಕಾರ್ಯಕ್ರಮ ಯನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದತ್ತ ಹಕ್ಕು

ಮಹಿಳೆಯರಿಗೆ ಸಂವಿಧಾನದಲ್ಲಿ ಪ್ರಮುಖ ಹಕ್ಕುಗಳನ್ನು ನೀಡಲಾಗಿದೆ. ವೇದಗಳ ಕಾಲದಲ್ಲಿಯೇ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಧನೆಯನ್ನು ಮಾಡಿ ತೋರಿಸುತ್ತಿದ್ದಾರೆ. ಪೈಲೆಟ್‌ನಿಂದ ಹಿಡಿದು ರಾಷ್ಟ್ರಪತಿ ಹುದ್ದೆಯ ವರೆಗೆ ಮಹಿಳೆಯರು ಇರುವ ಬಗ್ಗೆ ಛಾಪು ಮೂಡಿಸಿದ್ದಾರೆಂದರು.

ಬಜ್ ಸಂಸ್ಥೆಯ ಸಿಇಒ ಉತ್ತರ ನಾರಾಯಣ್ ಮಾತನಾಡಿ, ಹೆಣ್ಣು ಹುಟ್ಟಿದಾಗ ಅಯ್ಯೋ ಹೆಣ್ಣು ಮಗುನಾ ಎಂದು ಸಾಮಾನ್ಯವಾಗಿ ಜರಿಯುತ್ತಾರೆ. ಆದರೆ ನಾನು ಒಬ್ಬ ಹೆಣ್ಣಾಗಿ ಹುಟ್ಟಿ ಬಜ್ ಸಂಸ್ಥೆಯನ್ನು ಕಟ್ಟಿ ಹಲವು ಮಹಿಳೆಯರ ಸಬಲೀಕರಣಕ್ಕಾಗಿ ಹದಿಮೂರು ವರ್ಷಗಳಿಂದ ಶ್ರಮಿಸುವ ಮೂಲಕ ಸಾಧನೆಯನ್ನು ಮಾಡಿರುವ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದರು.

ಲಿಂಗ ಸಮಾನತೆ:

ಶಿಶು ಅಭಿವೃದ್ದಿ ಯೋಜನಾಧಿಕಾರಿ ಮುನಿರಾಜು ಮಾತನಾಡಿ, ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ನಿಂತಿದ್ದಾಳೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸುವ ಮತ್ತು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಮುತ್ತಪ್ಪ ಬಾಗೇವಾಡಿ , ಸಹಾಯಕ ವ್ಯವಸ್ಥಾಪಕ ಸೂರ್ಯ ಪ್ರಕಾಶ, ಚನ್ನಬಸವ, ಹಿರಿಯ ತರಬೇತಿ ಸಂಯೋಜಕ ಮಧು, ತರಬೇತಿ ಸಂಯೋಜಕ ಸರ್ವಜ್ಞ,ಗೆಳತಿ ಸುಗಮಕಾರಾದ ರೂಪ , ಅಂಬಿಕಾ, ಪವಿತ್ರ, ಮಾಲಿನಿ, ಸುಗುಣ,ಉಪಸ್ಥಿತರಿದ್ದರು.