ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಇನ್ನೂ ಹೆಚ್ಚಿನ ಅವಕಾಶ ಸಿಕ್ಕು ಮಹಿಳೆಯರನ್ನು ಗೌರವಿಸುವ ಕಾರ್ಯವಾಗಲಿ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ನಗರದ ಬಿವಿವಿ ಸಂಘದ ಮಿನಿಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಕ್ಷೇತ್ರದಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಭಾರತ ಮಾತೆಗ ಪುಷ್ಪಾಂಜಲಿ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತದಲ್ಲಿ ಮಹಿಳೆಯರೆ ಅಗ್ರಗಣ್ಯ, ದೇಶವನ್ನು ತಾಯಿಯಂದು ಕರೆದ ಭೂಮಿ ನಮ್ಮದು. ಎಲ್ಲಿ ನಾರಿಯರಿಗೆ ಗೌರವ ಸಿಗುತ್ತದೆ, ಅಲ್ಲಿ ದೇವತೆಗಳು ಇರುತ್ತಾರೆ ಎಂದು ನಂಬಿದವರು ನಾವು ಎಂದರು.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಧಾನಿ ಮೋದಿಯವರು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಯೋಜನೆಗಳ ಜೊತೆ ಶೇ.33ರಷ್ಟು ಮಹಿಳಾ ಮೀಸಲಾತಿ ತರುವ ಮೂಲಕ ಗೌರವ ನೀಡಿದ್ದಾರೆ. ಹಿಂದೆ ನಮ್ಮ ಹಿರಿಯರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭಾಗ್ಯಲಕ್ಷ್ಮೀ ಯೋಜನೆ ಮೂಲಕ ಹುಟ್ಟುವ ಹೆಣ್ಣುಮಗುವಿಗೆ ಭದ್ರತೆ ಒದಗಿಸಿದ್ದರು. ಇಂದು ಮಹಿಳೆಯರಿಗೆ ಗೌರವ ನೀಡುವುದು ಅಗತ್ಯವಾಗಿದೆ ಎಂದರು.ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಗ್ರಾಮೀಣ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಪಾತ್ರೊಟಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ:ರಾಷ್ಟ್ರಪ್ರಶಸ್ತಿ ಪುರಸ್ಕೃತ ಗೌರಮ್ಮ ಸಂಕೀನಮಠ, ನಗರಸಭೆ ಮಹಿಳಾ ಪೌರಕಾರ್ಮಿಕರನ್ನು ಹಾಗೂ ಭ್ಯಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಸವಿತಾ ಲಂಕೇನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಜಿಲ್ಲಾ ಉಪಾಧ್ಯಕ್ಷೆ ಭಾಗೀರತಿ ಪಾಟೀಲ, ಸುಜಾತಾ ಶೀಂಧೆ, ಶಿವಲೀಲಾ ಪಟ್ಟಣಶೆಟ್ಟಿ, ಪಾರ್ವತಿ ಹುಗ್ಗಿ, ಡಾ.ರೇಖಾ ಕಲಬುರಗಿ, ಜಯಶ್ರೀ ಏಕಭೋಟೆ, ಲಕ್ಷ್ಮೀ ಸಿಂತ್ರೆ, ಜ್ಯೋತಿ ಭಜಂತ್ರಿ, ಸ್ಮೀತಾ ಪವಾರ, ಭುವನೇಶ್ವರಿ ಕುಪ್ಪಸ್ತ, ಭಾಗ್ಯಶ್ರೀ ಹಂಡಿ, ಅನಿತಾ ಸರೋದೆ, ಲಕ್ಷ್ಮೀ ಮಡಿವಾಳರ, ನಾಗರತ್ನಾ ಒಂಕಲಕುಂಟಿ, ಸುಶೀಲಾ ಅಣ್ಣಿಗೇರಿ, ಸವಿತಾ ಏಳಮ್ಮಿ, ಶಿವಲೀಲಾ ಸಂಬಣ್ಣವರ, ಜ್ಯೋತಿ ಚವ್ಹಾಣ ಸೇರಿ ಮಹಿಳಾ ಕಾರ್ಯಕರ್ತರು ಇದ್ದರು.