ಮಹಿಳೆಯರನ್ನು ಗೌರವದಿಂದ ಕಾಣಬೇಕು:ಶಾಸಕ ಜಿ.ಎಚ್.ಶ್ರೀನಿವಾಸ್

| Published : Mar 13 2024, 02:03 AM IST

ಮಹಿಳೆಯರನ್ನು ಗೌರವದಿಂದ ಕಾಣಬೇಕು:ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರನ್ನು ಗೌರವ ಸ್ಥಾನದಲ್ಲಿ ನೋಡಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ. ನವಜೀವನ್ ಸೇವಾ ಕೇಂದ್ರದಿಂದ ಆರಾಧನಾ ಕಾನ್ವೆಂಟ್ ಆವರಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ತರೀಕೆರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅಭಿಮತ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಿಳೆಯರನ್ನು ಗೌರವ ಸ್ಥಾನದಲ್ಲಿ ನೋಡಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ನವಜೀವನ್ ಸೇವಾ ಕೇಂದ್ರದಿಂದ ಆರಾಧನಾ ಕಾನ್ವೆಂಟ್ ಆವರಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ

ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಹೆಣ್ಣು ಕಲಿತರೆ ಕುಟುಂಬ ಕಲಿತಂತೆ, ಮಹಿಳೆಯರು ಐಎಎಸ್ ಓದಿದ್ದಾರೆ, ಮಿಲಿಟರಿಯಲ್ಲಿದ್ದಾರೆ, ಅನೇಕ ಸ್ತ್ರೀಶಕ್ತಿ ಸಂಘ ಗುಂಪುಗಳು ಇವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡ ಸ್ತ್ರೀ ಸ್ವಸಹಾಯ ಗುಂಪುಗಳನ್ನು ರಚಿಸಿ ಆರ್ಥಿಕ ನೆರವು ನೀಡಿ ಹೆಚ್ಚಿನ ಆದ್ಯತೆನೀಡಿದೆ. ಮಹಿಳೆಯರ ಅಭಿವೃದ್ಧಿ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶುಭಾ ಮರವಂತೆ ಮಾತನಾಡಿ ಹೆಣ್ಣು ಮಕ್ಕಳು ಅಬಲೆಯರಲ್ಲ ಸಬಲೆಯರು, ಎಲ್ಲಾ ಕ್ಷೇತ್ರದಲ್ಲೂ ಮುಂದೆ ಇರುವವರು ಎಂದು ಹೇಳಿದರು.

ತರೀಕೆರೆ ಸಂತ ತೋಮಸ್ ಚರ್ಚ್ ಧರ್ಮ ಗುರುಗಳು ಫಾದರ್ ಎಲಿಯಾಸ್ ಸಿಕ್ವೆರಾ ಮಹಿಳೆ ದಿನಾಚರಣೆ ಬಗ್ಗೆ ತಿಳಿಸಿಕೊಟ್ಟರು.

ಪುರಸಭೆ ಅಧ್ಯಕ್ಷ ಪರಮೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅನಿಲ್ ಕುಮಾರ್ ವಿಷ್ಣವಿ, ವಕೀಲರಾದ ವಿಭಾ ವರ್ಗೀಸ್, ಸ್ಪೂರ್ತಿ ಮಹಾ ಸಂಘ ಅಧ್ಯಕ್ಷೆ ವಿಜಯ, ಪುರಸಬೆ ಸದಸ್ಯ ಅನಿಲ್ ಮೆನೆಜಸ್, ಆರಾಧಾನಾ ಕಾನ್ವೆಂಟ್ ಸುಫೀರಿಯರ್ ಡಾ.ಸಿಸ್ಟ್ರರ್ ಮೋಕ್ಷ, ನವಜೀವನ್ ಸೇವಾ ಕೇಂದ್ರದ ನಿರ್ದೇಶಕರಾದ ಸಿಸ್ಟರ್ ಜಿಯಾ ಮತ್ತಿತರರು ಭಾಗವಹಿಸಿದ್ದರು.12ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನವಜೀವನ್ ಸೇವಾ ಕೇಂದ್ರ ದಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಶಾಸಕ

ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಪರಮೇಶ್, ಸದಸ್ಯ ಅನಿಲ್ ಮನೆಜಸ್, ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶುಭಾ ಮರವಂತೆ ನವಜೀವನ್ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ಜಿಯಾ ಮತ್ತಿತರರು ಇದ್ದರು.