ಮಹಿಳೆಯರು ಸಾಮಾಜಿಕ ಪ್ರೀತಿ ಬೆಳೆಸಬೇಕಿದ: ಡಾ.ನಿರ್ಮಲಾ

| Published : Mar 25 2024, 12:47 AM IST

ಮಹಿಳೆಯರು ಸಾಮಾಜಿಕ ಪ್ರೀತಿ ಬೆಳೆಸಬೇಕಿದ: ಡಾ.ನಿರ್ಮಲಾ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ: ಸಾಮಾಜಿಕ ಪ್ರೀತಿಯ ಕೊರತೆ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಜವಾಬ್ದಾರಿ ಅರಿತು ಸಾಮಾಜಿಕ ಕೊಂಡಿಯನ್ನು ಕಟ್ಟಬೇಕಿದೆ ಎಂದು ಮಹಾಂತೇಶ ನಗರದ ರಹವಾಸಿಗಳ ಸಂಘದ ಬಿಎಡ್‌ ಕಾಲೇಜು ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾಮಾಜಿಕ ಪ್ರೀತಿಯ ಕೊರತೆ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಜವಾಬ್ದಾರಿ ಅರಿತು ಸಾಮಾಜಿಕ ಕೊಂಡಿಯನ್ನು ಕಟ್ಟಬೇಕಿದೆ ಎಂದು ಮಹಾಂತೇಶ ನಗರದ ರಹವಾಸಿಗಳ ಸಂಘದ ಬಿಎಡ್‌ ಕಾಲೇಜು ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ್‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕ ಬೆಳಗಾವಿ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಪ್ರಸ್ತುತ ದಿನಗಳಲ್ಲಿ ಬದುಕಲು ಸರ್ಕಾರಿ ನೌಕರಿಯೇ ಬೇಕು ಅಂತೇನಿಲ್ಲ. ಕಾರ್ಯಕ್ಷಮತೆಯಿಂದ ಮಹಿಳೆ ಏನನ್ನಾದರೂ ಸಾಧಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕ ಅಧ್ಯಕ್ಷ ಸುರೇಶ ಹಂಜಿ ಮಾತನಾಡಿ, ಮಹಿಳೆಯರು ಉತ್ತಮ ಸಂಸ್ಕಾರ ನೀಡುವತ್ತ ಗಮನ ಹರಿಸಿದರೆ ಎಲ್ಲ ರಂಗಗಳಲ್ಲೂ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂತಾರಾಷ್ಟ್ರೀಯ ಈಜು ಪಟು ಜ್ಯೋತಿ ಕೋರಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಅಶ್ವಿನಿ ಬಾಗೋಜಿ, ಶಿಕ್ಷಕಿ ಸುಜಾತಾ ಕೆರಿಮನಿ, ರಾಜೇಶ್ವರಿ ಬೆಣ್ಣಿ, ಸಂಗೀತ ಕ್ಷೇತ್ರದ ಡಾ.ಸುನಿತಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ, ಎಸ್‌.ಡಿ.ಪಾಟೀಲ, ಪ್ರಭುದೇವ ಹಿರೇಮಠ, ಎನ್‌.ಬಿ.ಕಮತಿ, ಶಿವಾನಂದ ತಲ್ಲೂರ, ಗೀತಾ ದೇಯನ್ನವರ, ಸೋನಲ್ ಚೀನಿವಾಲ, ಶ್ವೇತಾ ಹೆದ್ದೂರಶೆಟ್ಟಿ, ಮಂಜುನಾಥ ಕಲಾಲ ಸೇರಿದಂತೆ ಸಾಹಿತ್ಯಾಸಕ್ತರು, ಮಹಿಳೆಯರು ಮತ್ತು ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೂಪಾ ಹಕ್ಕಿ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಡಾ.ಸಿದ್ದಣ್ಣ ವಾಲಿಶೆಟ್ಟಿ ವಂದಿಸಿದರು.