ನರಸಿಂಹರಾಜಪುರಮಹಿಳೆಯರು ಸಮಸ್ಯೆಗಳು ಬಂದಾಗ ಆತಂಕಕ್ಕೆ ಒಳಗಾಗದೆ ಶಾಂತವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಧ.ಗ್ರಾ.ಯೋಜನೆ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ಸಲಹೆ ನೀಡಿದರು.
- ಸೀಗುವಾನಿ ರಂಗಮಂದಿರದಲ್ಲಿ ಶಾಂತಿ ಜ್ಞಾನವಿಕಾಸ ಕೇಂದ್ರದಲ್ಲಿ ಮಾಸಿಕ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಹಿಳೆಯರು ಸಮಸ್ಯೆಗಳು ಬಂದಾಗ ಆತಂಕಕ್ಕೆ ಒಳಗಾಗದೆ ಶಾಂತವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಧ.ಗ್ರಾ.ಯೋಜನೆ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ಸಲಹೆ ನೀಡಿದರು.
ಶುಕ್ರವಾರ ತಾಲೂಕಿನ ಸೀಗುವಾನಿ ರಂಗಮಂದಿರದಲ್ಲಿ ಧ.ಗ್ರಾ.ಯೋಜನೆ ಶಾಂತಿ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೌಟುಂಬಿಕ ಸಲಹೆಗಳು ಎಂಬ ವಿಚಾರವಾಗಿ ಮಾತನಾಡಿದರು. ಮಹಿಳೆಯರು ಮನೆ ಕೆಲಸದ ಜೊತೆಗೆ ಕುಟುಂಬ ನಿರ್ವಹಣೆ ಜವಾಬ್ದಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳ ಸಂಸ್ಕಾರ, ಆರ್ಥಿಕ ವ್ಯವಸ್ಥೆ, ಪರಸ್ಪರ ಸಂಬಂಧಗಳ ಸಮ ತೋಲನ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಹಿಳೆಯರು ಕಾನೂನುಗಳನ್ನು ತಮ್ಮ ರಕ್ಷಣೆಗಾಗಿ ಮಾತ್ರ ಉಪಯೋಗಿಸಿಕೊಳ್ಳಬೇಕು. ಕಾನೂನನ್ನು ದುರುಪಯೋಗ ಮಾಡಿಕೊಳ್ಳಬಾರದು. ಕಾನೂನು ಕುಟುಂಭದ ಶಾಂತಿಗೆ ಉಪಯೋಗಬೇಕು. ಭಂಗಕ್ಕೆ ಕಾರಣವಾಗಬಾರದು ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಜ್ಞಾನ ವಿಕಾಸ ಕೇಂದ್ರದ ಮೇಲ್ವೀ ಚಾರಕಿ ಉಷಾ ಮಾತನಾಡಿ, ಸಂಘದ ಸದಸ್ಯರು ಪ್ರತಿ ತಿಂಗಳು ನಡೆಯುವ ಮಾಸಿಕ ಸಭೆಗೆ ತಪ್ಪದೆ ಭಾಗವಹಿಸಬೇಕು ಎಂದ ಅವರು ಆರೋಗ್ಯ ರಕ್ಷೆ ಹಾಗೂ ಸಂಪೂರ್ಣ ಸುರಕ್ಷಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಸಭೆ ಅಧ್ಯಕ್ಷತೆಯನ್ನು ನಾಗದೇವತೆ ಸಂಘದ ಸದಸ್ಯೆ ರಮಾಮಣಿ ವಹಿಸಿದ್ದರು. ಸಭೆಯಲ್ಲಿ ಶಾಂತಿ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಪ್ರತಿಮಾ, ಸೇವಾ ಪ್ರತಿನಿಧಿ ಅಶ್ವಿನಿ ಉಪಸ್ಥಿತರಿದ್ದರು. ಹೆಲೆನ್ ಗೆಳತಿ ಅಂಕಣ ಓದಿದರು. ಸೇವಾ ಪ್ರತಿನಿಧಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ವಂದಿಸಿದರು. ಮಾಸಿಕ ಸಭೆಯಲ್ಲಿ ನಿತ್ಯ ಜ್ಯೋತಿ, ಕೀರ್ತನ, ಮೇರಿ, ನಾಗದೇವತೆ. ರಾಮೇಶ್ವರ,ಶ್ರೇದೇವಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.