ಸಾರಾಂಶ
ಭಾರತೀಯ ವಿಕಾಸ ಟ್ರಸ್ಟ್ ಮತ್ತು ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್‌ಗಳ ಜಂಟಿ ಸಹಯೋಗದಲ್ಲಿ ಆಯೋಜಿಸಲಾದ ೨೧ದಿನಗಳ ಫ್ಯಾಷನ್ ಬ್ಲೌಸ್ ತರಬೇತಿ, ಆರಿ ಎಂಬ್ರಾಯ್ಡರಿ ಮತ್ತು ಸಾರಿ ಕುಚ್ಚು ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್‌ಗಳ ಜಂಟಿ ಸಹಯೋಗದಲ್ಲಿ ಆಯೋಜಿಸಲಾದ ೨೧ದಿನಗಳ ಫ್ಯಾಷನ್ ಬ್ಲೌಸ್ ತರಬೇತಿ, ಆರಿ ಎಂಬ್ರಾಯ್ಡರಿ ಮತ್ತು ಸಾರಿ ಕುಚ್ಚು ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿ ಮಣಿಪಾಲದ ಪವರ್ ಸಂಸ್ಥೆಯ ರೇಷ್ಮಾ ಥೋಟ ಮಾತನಾಡಿ, ಮಹಿಳೆಯರು ತರಬೇತಿಯನ್ನು ಪಡೆದು ಮನೆಗೆ ಮಾತ್ರ ಸೀಮಿತವಾಗದೇ ಸ್ವಂತ ಉದ್ಯಮವನ್ನು ಸ್ಥಾಪಿಸುವ ಛಲ ಮತ್ತು ಅರ್ಪಣಾ ಮನೋಭಾವವನ್ನು ಹೊಂದಿರಬೇಕು. ಆಗ ಮಾತ್ರ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಕರೆ ಇತ್ತರು.ಅಧ್ಯಕ್ಷತೆ ವಹಿಸಿದ್ದ ಮಣಿಪಾಲದ ಬಿವಿಟಿ ಟ್ರಸ್ಟಿನ ಆಡಳಿತ ವಿಶ್ವಸ್ಥರಾದ ವಿನುತಾ ಆಚಾರ್ಯ ಮಾತನಾಡಿ, ಬಿವಿಟಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಬೇಕಾಗುವ ಎಲ್ಲ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಅವರ ಸ್ವಂತ ಉದ್ದಿಮೆಗೆ ಬೇಕಾಗುವಂತಹ ಸಲಹೆ, ಸೂಚನೆ ಮತ್ತು ಎಲ್ಲ ರೀತಿಯ ಸಹಾಯ ನೀಡಲು ಸದಾ ಸಿದ್ಧವಿದೆ ಎಂದು ತಿಳಿಸಿದರು.ಬಿವಿಟಿ ಸಂಸ್ಥೆಯ ಹಿರಿಯ ಸಲಹೆಗಾರ ಜಗದೀಶ್ ಪೈ ಮತ್ತು ಸಂಪನ್ಮೂಲ ವ್ಯಕ್ತಿ ಸನ್ನಿತಾ ಪರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಬಿವಿಟಿಯ ಮುಖ್ಯಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಬಿರಾರ್ಥಿ ಮಂಜುಳಾ ಪ್ರಾರ್ಥಿಸಿದರು. ಬಿವಿಟಿಯ ಮುಖ್ಯ ವ್ಯವಸ್ಥಾಪಕ ಮನೋಹರ್ ಕಟ್ಗೇರಿ ವಂದಿಸಿದರು. ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮ ಕಾರ್ಯಕ್ರಮ ನಿರೂಪಿಸಿದರು. ಬಿವಿಟಿ ಸಿಬ್ಬಂದಿ ಯು. ಗೀತಾ ರಾವ್ ಸಹಕರಿಸಿದರು.