ಮಹಿಳೆಯರು ಕಾನೂನುಗಳ ಸದುಪಯೋಗ ಪಡೆಯಲಿ: ಪಿಎಸೈ ಶಾಂತಿನಾಥ

| Published : Dec 30 2024, 01:01 AM IST

ಸಾರಾಂಶ

ಜಾಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟೂಡೆಂಟ್ ವೆಲ್ಫೇರ್, ಎನ್.ಎನ್.ಎಸ್. ಘಟಕ ಹಾಗೂ ರಾಜ್ಯ ಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಮಹಿಳಾ ಭದ್ರತೆ, ರಸ್ತೆ ಸುರಕ್ಷತೆ ಹಾಗೂ ಸೈಬರ್ ಸೆಕ್ಯುರಿಟಿ ಎನ್ನುವ ಕುರಿತ ಉಪನ್ಯಾಸ ಏರ್ಪಡಿಸಲಾಗಿತ್ತು.

ಭಟ್ಕಳ: ಜಾಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟೂಡೆಂಟ್ ವೆಲ್ಫೇರ್, ಎನ್.ಎನ್.ಎಸ್. ಘಟಕ ಹಾಗೂ ರಾಜ್ಯ ಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಮಹಿಳಾ ಭದ್ರತೆ, ರಸ್ತೆ ಸುರಕ್ಷತೆ ಹಾಗೂ ಸೈಬರ್ ಸೆಕ್ಯುರಿಟಿ ಎನ್ನುವ ಕುರಿತ ಉಪನ್ಯಾಸ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಮಾತನಾಡಿದ ನಗರ ಠಾಣೆಯ ಪಿಎಸ್ಐ ಶಾಂತಿನಾಥ ಪಾಸನೆ, ಮಹಿಳೆಯರಿಗಾಗಿ ಹಲವು ಕಾನೂನುಗಳಿದ್ದು, ಅಗತ್ಯ ಸಂದರ್ಭದಲ್ಲಿ ಮಹಿಳೆಯರು ಸದುಪಯೋಗ ಪಡೆಯಬೇಕು. ಮಹಿಳೆಯರಿಗೆ ಇಲಾಖೆಯಿಂದ ಎಲ್ಲ ರೀತಿಯ ಸ್ಪಂದನೆ ದೊರಕುತ್ತದೆ. ಪ್ರತಿಯೊರ್ವರೂ ರಸ್ತೆ ನಿಯಮ ಸರಿಯಾಗಿ ಪಾಲಿಸಬೇಕು. ವಾಹನ ಚಾಲನೆ ಸಂದರ್ಭದಲ್ಲಿ ವೇಗದ ಮಿತಿ ಹೊಂದಬೇಕು. ಅವಸರದಲ್ಲಿ ವಾಹನ ಓಡಿಸುವುದರಿಂದ ಅಪಾಯಕ್ಕೆ ಆಹ್ವಾನವಿತ್ತಂತೆ ಎಂದರಲ್ಲದೇ ಮೋಟಾರು ವಾಹನ ಕಾಯಿದೆಯ ಕುರಿತು ತಿಳಿ ಹೇಳಿದರು.ಸೈಬರ್ ಸೆಕ್ಯುರಿಟಿಯ ಕುರಿತು ಮಾತನಾಡಿದ ಅವರು ಅನುಮಾಸ್ಪದ ಮೊಬೈಲ್ ನಂಬರ್‌ಗಳಿಂದ, ಗ್ರೂಪ್‌ಗಳಿಂದ ಬಂದ ಯಾವುದೇ ಮೆಸೇಜ್‌ಗಳನ್ನು ತೆರೆಯದೇ ನೇರವಾಗಿ ಡಿಲೀಟ್ ಮಾಡುವಂತೆ ಸೂಚನೆ ನೀಡಿದರು. ತಮ್ಮ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದವಾದ ವ್ಯವಹಾರ ಕಂಡು ಬಂದರೆ ತಕ್ಷಣ ೧೯೩೦ಕ್ಕೆ ದೂರವಾಣಿ ಕರೆ ಮಾಡಿ ಖಾತೆಯ ವಿವರಗಳನ್ನು ನೀಡುವಂತೆಯೂ ತಿಳಿಸಿದರು. ನಿಮ್ಮ ಸುತ್ತಮುತ್ತ ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿಗಳು, ಘಟನೆಗಳು ಕಂಡು ಬಂದರೆ ೧೧೨ಗೆ ಇಲ್ಲವೇ ಇಲಾಖೆಗೆ ತಿಳಿಸುವಂತೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಗರ ಠಾಣೆಯ ಎಸ್ಐ ದೀಪಾ ನಾಯಕ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸ್ವ ರಕ್ಷಣೆಯು ಕುರಿತು ಹಾಗೂ ತೊಂದರೆಗೊಳಗಾದಂತೆ ಜಾಗೃತೆ ವಹಿಸಬೇಕಾದ ಕ್ರಮ ತಿಳಿಸಿದರು.

ಎಎಸೈ ರವಿ ನಾಯ್ಕ, ಹೆಡ್ ಕಾನ್ಸ್‌ಟೇಬಲ್ ಮಂಜಪ್ಪ ನಾಯ್ಕ, ಗಿರೀಶ ನಾಯ್ಕ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಸುರೇಶ ಮೆಟಗಾರ್, ವಿದ್ಯಾರ್ಥಿ ಪ್ರತಿನಿಧಿ ಅಮಿತಾ ನಾಯ್ಕ ಉಪಸ್ಥಿತರಿದ್ದರು. ವೀಣಾ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿ ವಿಜೇತಾ ನಾಯ್ಕ ನಿರೂಪಿಸಿದರು. ಕಮಾಲಾಕ್ಷಿ ವಂದಿಸಿದರು.

ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಜಾಲಿ ರಸ್ತೆಯಲ್ಲಿ ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ಜನ ಜಾಗೃತಿ ಜಾಥಾ ನಡೆಸಿ ಜನಜಾಗೃತಿ ಮೂಡಿಸಲಾಯಿತು.