ಸಂಘ ಸಂಸ್ಥೆಗಳಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು

| Published : Oct 28 2024, 01:04 AM IST

ಸಾರಾಂಶ

ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಸಂಘ, ಸಂಸ್ಥೆಗಳು ಸ್ಥಾಪನೆ ಯಾಗಬೇಕು. ಸಂಘ-ಸಂಸ್ಥೆಗಳು ಆಸ್ತಿತ್ವ ಉಳಿಸಿಕೊಳ್ಳುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರ್ತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸಮುದಾಯದ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ಸಂಘಗಳ ಸ್ಥಾಪನೆಯ ಉದ್ದೇಶ ಸಮಾಜಮುಖಿ ಕಾರ್ಯ ಚಟುವಟಿಕೆಗಳಾಗಿರಬೇಕೆ ಹೊರತು ಸ್ವಾರ್ಥಕ್ಕಾಗಿ ಬಳಕೆಯಾಗಬಾರದು ಎಂದು ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯಮಹಾಸ್ವಾಮಿ ಹೇಳಿದರು.

ಅವರು ಪಟ್ಟಣದ ಹೊರವಲಯದ ಹೊಸಕೋಟೆ ರಸ್ತೆಯ ಮಡಿವಾಳ ಗೇಟ್‌ ಬಳಿಯ ಮಾತಾಜಿ ಹಾಲ್‌ ನಲ್ಲಿ ಎ.ಎಸ್.ವಿ.ಎಸ್.ವಿ ಬೆಂಗಳೂರು ಇವರ ಸಹಕಾರದಲ್ಲಿ ನಡೆದ ನೂತನವಾಗಿ ಆಯೋದ್ಯಾ ನಗರದ ಶಿವಾಚಾರ್ಯ ವೈಶ್ಯ ನಗರ್ತ ಸಂಘ ಮತ್ತು ಆಯೋಧ್ಯಾನಗರ ದ ಶಿವಾಚಾರ್ಯ ನಗರ್ತ ಮಹಿಳಾ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘಗಳು ನೆರವಾಗಬೇಕು

ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಸಂಘ, ಸಂಸ್ಥೆಗಳು ಸ್ಥಾಪನೆ ಯಾಗಬೇಕು. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎನ್ನುವ ಚಿಂತನೆ ಮಾಡಬೇಕು. ಸಂಘ-ಸಂಸ್ಥೆಗಳು ಹೆಸರಿಗೆ ಮಾತ್ರ ಆಸ್ತಿತ್ವ ಉಳಿಸಿಕೊಳ್ಳದೆ ಕಟ್ಟಕಡೆಯ ವ್ಯಕ್ತಿಯನ್ನು ಗುರ್ತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸಮುದಾಯದ ಸಂಘಟನೆಗಳು ಮುಂದಾಗಬೇಕಾಗಿದೆ ಎಂದರು.

ಮಹಿಳೆಯರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರೆ ಅದು ಸಂಸ್ಥೆ ಬೆಳೆಯುವ ಜತೆಯಲ್ಲಿ ಸಮಾಜ ಸಹ ಬೆಳೆಯಲಿದೆ. ಬುದ್ದ ಬಸವ ಅಂಬೇಡ್ಕರ್‌ ಪ್ರತಿಮೆ ,ಫೋಟೋಗಳಿಗೆ ಪೂಜೆ ಮಾಡಿದ್ದರೆ ಸಾಲದು. ಸಮಾಜದಲ್ಲಿ ಸಮಾನತೆ ಬರಬೇಕೆಂದರೆ ತತ್ವ ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆ ಮೈಗೊಡಿಸಿಕೊಂಡಾಗ ಮಾತ್ರ ಧೀಂಮತ ವ್ಯಕ್ತಿಗಳಿಗೆ ಗೌರವ ನೀಡಿದಂತಾಗುತ್ತದೆ ಎಂದರು.

ಎರಡು ಸಂಘಟನೆ ಉದ್ಘಾಟನೆ

ಶಿವಾಚಾರ್ಯ ವೈಶ್ಯ ಜನಾಂಗದವರು ಒಂದೇ ದಿನ ಒಂದೇ ವೇದಿಕೆಯಲ್ಲಿ ಪುರುಷರ-ಮಹಿಳೆಯರ ಎರಡು ಸಂಘಗಳನ್ನು ಉದ್ಘಾಟನೆ ಮಾಡುವ ಮೂಲಕ ಸಮಾನತೆ ಸಾರಿದ್ದಾರೆ. ಈ ಸಂಸ್ಥೆಗಳಿಗೆ ಸದಾ ಕಾಲ ಬೆನ್ನೆಲುಬಾಗಿ ನಾವಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಮುದಾಯದ ಹಿರಿಯರನ್ನು ಅಭಿನಂದಿಸಲಾಯಿತು. ಸಮುದಾಯದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ವೇಶ ಭೂಷಣ ಸ್ಪರ್ಧೆಯಲ್ಲಿ ಚಿಣ್ಣರು ಹೆಚ್ಚಿನ ಉತ್ಸಾಹದಿಂದ ಪಾಲ್ಗೂಂಡಿದ್ದರು.

ಬೆಳ್ಳಾವಿ ಮಠದ ಮಹಾಂತ ಶಿವಾಚಾರ್ಯ ಸ್ವಾಮಿ,ಎ.ಎಸ್.ವಿ.ಎಸ್.ವಿ. ರಾಜ್ಯ ಅಧ್ಯಕ್ಷ ಎಸ್‌.ಪ್ರಕಾಶ್‌ ,ನಿರ್ದೇಶಕ ನಂಜುಂಡಪ್ಪ,ಗೌರವ ಕಾರ್ಯದರ್ಶಿ ಕೃಷ್ಣಮೂರ್ತಿ,ಖಜಾಂಚಿ ಶಂಕರ್‌ ,ನಗರ್ತ ಮಹಿಳಾ ಸಂಘ ಅಧ್ಯಕ್ಷ ಅಂಬಿಕಾ ಚಂದ್ರಶೇಖರ್‌ ,ಅರದ್ದೆ ನಂಜಪ್ಪ ,ಅಖಿಲ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಿವಶಂಕರಪ್ಪ ,ಎಸ್.ವಿ.ಎಸ್.ವಿ.ನಗರ್ತ ಸಂಘ ತಾಲೂಕು ಅಧ್ಯಕ್ಷ ಪ್ರೇಮ್‌ ಕುಮಾರ್‌, ಮಹಿಳಾ ಸಂಘದ ಅಧ್ಯಕ್ಷೆ ಕುಸುಮಾ ವಿಜಯಕುಮಾರ್‌ ,ನೂಟವೆ ರಾಜಣ್ಣ ,ಮಂಜು,ರವಿ,ಶಿವು,ರೂಪ,ಕುಮುದಾ, ದಿವ್ಯ, ಗಾಯತ್ರಿ ವಿಜಯಕುಮಾರ್‌ ಇನ್ನಿತರರು ಇದ್ದರು.