ಕುಟುಂಬದಲ್ಲಿ ಇಂದು ಮಹಿಳೆಯರ ಹಿಡಿತವಿದೆ. ಹೀಗಾಗಿ ಕುಟುಂಬ ನಿರ್ವಹಣೆ ಮಹಿಳೆಯರಿಗೆ ನೀಡಿದೆ. ವೃದ್ಧಾಪ್ಯ ತಂದೆ-ತಾಯಿಗಳನ್ನು ಮಹಿಳೆಯರು ನೋಡಿಕೊಳ್ಳಬೇಕು ಎಂದು ಶಿಗ್ಗಾಂವಿ ಸವಣೂರ ಶಾಸಕ ಯಾಸೀರ್ ಖಾನ್ ಪಠಾಣ್ ಮಾಡಿದರು.

ಶಿಗ್ಗಾಂವಿ: ಕುಟುಂಬದಲ್ಲಿ ಇಂದು ಮಹಿಳೆಯರ ಹಿಡಿತವಿದೆ. ಹೀಗಾಗಿ ಕುಟುಂಬ ನಿರ್ವಹಣೆ ಮಹಿಳೆಯರಿಗೆ ನೀಡಿದೆ. ವೃದ್ಧಾಪ್ಯ ತಂದೆ-ತಾಯಿಗಳನ್ನು ಮಹಿಳೆಯರು ನೋಡಿಕೊಳ್ಳಬೇಕು ಎಂದು ಶಿಗ್ಗಾಂವಿ ಸವಣೂರ ಶಾಸಕ ಯಾಸೀರ್ ಖಾನ್ ಪಠಾಣ್ ಮಾಡಿದರು.

ತಾಲೂಕಿನ ಬಂಕಾಪುರ ಪಟ್ಟಣದ ಫಕೀರೇಶ್ವರ ಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ‍್ಯಕ್ರಮ ದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಶಕ್ತಿಯನ್ನು ಒಂದೆಡೆ ಕೂಡಿಸುವುದು ಕಷ್ಟಸಾಧ್ಯ. ಆದರೆ, ಈ ಧರ್ಮಸ್ಥಳ ಸಂಘಕ್ಕೆ ಒಂದು ಶಕ್ತಿ, ಶ್ರೀಗಳ ಆಶೀರ್ವಾದ ಇದೆ ಎಂದರು.

ಸಮೂದಾಯದಲ್ಲಿಯ ವ್ಯಸನಮುಕ್ತರನ್ನಾಗಿಸಲು ಈ ಸಂಘ ಬಹಳಷ್ಟು ಶ್ರಮಿಸುತ್ತಿದೆ. ವೃದ್ಧಾಶ್ರಮಕ್ಕೆ ನಮ್ಮ ಪಾಲಕರನ್ನು ಬಿಡುವ ಸಂಸ್ಕೃತಿ ನೋವು ತರಿಸುತ್ತಿದೆ, ನಾರಿ ಶಕ್ತಿ ದೇಶಕ್ಕೆ ತಿಳಿದಿದೆ, ನಮ್ಮ ಭಾರತ ದೇಶ ವಿಶೇಷ ಸಂಸ್ಕೃತಿಯುಳ್ಳ ದೇಶ, ನಮ್ಮ ಶರಣರು ನೀಡಿದ ಪರಂಪರೆಯ ಮಾರ್ಗದರ್ಶನ ಮರೆಯುತ್ತಿದ್ದೇವೆ, ದೇವರ ಸ್ಥಾನದಲ್ಲಿ ತಂದೆ-ತಾಯಿಯನ್ನು ಕಾಣುವ ದೇಶ ನಮ್ಮದಾಗಿದೆ. ನಮ್ಮ ಸರಕಾರವೂ ಮಹಿಳೆಯರ ಶಕ್ತಿಯಿಂದ ಬಂದಿದೆ ಎಂದರು.

ಕಾರ‍್ಯಕ್ರಮದಲ್ಲಿ ಬಂಕಾಪೂರ ಲಯನ್ಸ್ ಶಾಲೆಯ ಪ್ರಧಾನ ಶಿಕ್ಷಕಿ ಗಂಗೂಬಾಯಿ ದೇಸಾಯಿ "ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ " ಎಂಬ ವಿಷಯದ ಕುರಿತು ಉಪನ್ಯಾಸದಲ್ಲಿ, ಸಂಘದಿಂದ ಸಾಲ ಪಡೆಯುವುದು ಅಷ್ಟೆ ಅಲ್ಲ, ಸಂಘ ಶಿಸ್ತು, ಸಂಘಟನೆಯನ್ನು ಕಲಿಸುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸಬಲವಾಗಲು ಸಂಘಟನೆಯ ಮೂಲಕ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸುತ್ತಿದ್ದಾರೆ. ದೇವರು ಪುರುಸೊತ್ತು ಇದ್ದಾಗ ಸೃಷ್ಟಿಸಿದ ಅಂತಕರಣದ ಅಧಿದೇವತೆಯೇ ಹೆಣ್ಣು ಎಂದು ಭಾವಿಸಬೇಕಿದೆ. ಗಂಡ ಹೆಂಡತಿಯನ್ನು ಪರಿಚಯ ಮಾಡಿಕೊಡುವಾಗ ಇವರು "ನಮ್ಮ ಕುಟುಂಬ " ಎಂದು ಪರಿಚಯ ಮಾಡಿಕೊಡುವ ಮಟ್ಟಿಗೆ ಮಹಿಳೆಗೆ ಪ್ರಾಶಸ್ತ್ಯವಿದೆ. ಅದಕ್ಕೆ ಮುಖ್ಯ ಕಾರಣ ಕುಟುಂಬದಲ್ಲಿ ಮಹಿಳೆಯರು ಸರ್ವಾಂಗೀಣ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನೋಡಿದರೆ ಮಹಿಳೆಯ ಸಾಮರ್ಥ್ಯ ಏನು ಎಂಬುದನ್ನ ತಿಳಿಬಹುದು ಎಂದರು.

ಬಂಕಾಪೂರ ಫಕೀರೇಶ್ವರ ಶಾಖಾ ಮಠದ ಅಧ್ಯಕ್ಷ ಮಂಜುನಾಥ ಕೂಲಿ, ಜನ ಜಾಗೃತಿ ವೇದಿಕೆ ಸದಸ್ಯ ಶಿವಾನಂದ ಮ್ಯಾಗೇರಿ, ಧರ್ಮಸ್ಥಳ ಮಹಿಳಾ ಸಂಘದ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ, ಗುರಿ ಇಟ್ಟು ಸಂಘಟನೆಯ ಮೂಲಕ ಕೆಲಸ ಮಾಡಿ ನಡೆದರೆ ನಮ್ಮ ಸಾಧನೆ ಸಾಧ್ಯವಾಗಬಹುದು ಎನ್ನುವುದಕ್ಕೆ ಈ ಧರ್ಮಸ್ಥಳ ಸಂಘವೇ ಕಾರಣವಾಗಿದೆ. ಎಲ್ಲ ಕ್ಷೇತ್ರದಲ್ಲಿ ಈ ಸಂಘ ಬಹಳಷ್ಟು ಶಿಸ್ತು ಇಟ್ಟು ಕಾರ್ಯನಿರ್ವಹಿಸುತ್ತಿದೆ, ಇದು ವಿಶೇಷವಾಗಿ ಮಹಿಳೆಯರ ಸಬಲೀಕರಣ ಇದರಲ್ಲಿ ಮುಖ್ಯವಾಗಿದೆ ಎಂದು ಮಾತನಾಡಿದರು.

ಬಂಕಾಪುರ ಪಿಎಸ್ಐ ಶ್ರೀಶೈಲ್ ಕೆಂಚಣ್ಣವರ, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಯೋಜನಾ ನಿರ್ದೇಶಕಿ ಸುಧಾ ಮಾತನಾಡಿದರು. ಬಂಕಾಪುರ ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಗುಡ್ಡಪ್ಪ ಜಲದಿ, ಸೋಮಣ್ಣ ಕುರಿ ಸೇರಿದಂತೆ ಧರ್ಮಸ್ಥಳ ಸಂಘದ ಓರ್ವ ಮಹಿಳಾ ಸದಸ್ಯರು, ಪದಾಧಿಕಾರಿಗಳು ಇದ್ದರು. ಸಂಘದ ಶಿಗ್ಗಾಂವಿ ಯೋಜನಾಧಿಕಾರಿ ಶೇಖರ್ ನಾಯಕ್ ಕಾರ‍್ಯಕ್ರಮ ನಿರುಪಿಸಿದರು.