ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್ಕಾರ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ, ಗೃಹ ಲಕ್ಷ್ಮಿ ಯೋಜನೆ, ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಜಾತಿ, ಆದಾಯ ಪ್ರಮಾಣ ಪತ್ರ ಕಡ್ಡಾಯ ಮಾಡಿರುವುದರಿಂದ ಜನರು ತಾಲೂಕು ಕಚೇರಿ, ನಾಡಕಚೇರಿಗಳಲ್ಲಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದ ತಾಲೂಕು ಕಚೇರಿ, ನಾಡ ಕಚೇರಿಗಳಲ್ಲಿ ಮುಂಜಾನೆಯಿಂದಲೇ ನೂರಾರು ಮಂದಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ ಕಾದು ನಿಂತಿದ್ದು, ಸರ್ವರ್ ಸಮಸ್ಯೆ ಹಾಗೂ ಅಧಿಕ ಜನಸಂದಣಿಯಿಂದಾಗಿ ಸರ್ಕಾರ ಹಾಗೂ ತಾಲೂಕು ಆಡಳಿದ ವಿರುದ್ಧ ಆಕ್ರೋಶ ಹೊರ ಹಾಕಿ ಹಿಂದಿರುವಂತಾಗಿದೆ.
ವಿಧವೆ ಮತ್ತು ಮಹಿಳಾ ವಯೋವೃದ್ಧರು ದಿನನಿತ್ಯ ಪ್ರಮಾಣ ಪತ್ರಕ್ಕಾಗಿ ಅಲೆದಾಡಿ, ಕೊನೆಗೆ ದಾಖಲಾತಿಗಳನ್ನು ಮಾಡಿಸಲಾಗದೆ ತಾಲೂಕು ಕಚೇರಿ ಬಳಿ ವಯೋವೃದರ ಪರದಾಟ ಹೇಳತೀರದಾಗಿದೆ. ಸರ್ಕಾರ ಯೋಜನೆಗಳನ್ನು ಜಾರಿ ಮಾಡಿ ಇನ್ನಿಲ್ಲದ ದಾಖಲೆಗಳನ್ನು ಕೇಳುತ್ತಿದೆ. ಸರ್ಕಾರದ ನಿರ್ಧಾರಕ್ಕೆ ಜನರು ಮತ್ತು ವಯೋವೃದ್ಧರ ಆಕ್ರೋಶ ವ್ಯಕ್ತಪಡಿಸಿ ಇಡೀ ಶಾಪ ಹಾಕುತ್ತಿದ್ದಾರೆ.ಡೇರಿ ಅಧ್ಯಕ್ಷರಾಗಿ ಕೆ.ಎಸ್.ಮನೋಜ್ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಕೆ.ಬೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಎಸ್.ಮನೋಜ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಹಿಂದಿನ ಅಧ್ಯಕ್ಷ ದೇವರಾಜು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಕೆ.ಎಸ್.ಮನೋಜ್ ಹೊರತು ಪಡಿಸಿ ಉಳಿದ ಯಾವೊಬ್ಬ ನಿರ್ದೇಶಕನು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುರೇಶ್ಗ ಅವರು ಮನೋಜ್ ಅವರ ಅವಿರೋಧ ಆಯ್ಕೆಯನ್ನುಘೋಷಿಸಿದರು.ಕೆ.ಎಸ್.ಮನೋಜ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.ಮುಖಂಡ ಮನು ಮಾತನಾಡಿ, ಡೇರಿ ರಾಜಕೀಯ ಮಿಶ್ರಣ ಬೇಡ. ಒಡಂಬಡಿಕೆ ಮಾಡಿಕೊಂಡು ಮೊದಲ ಒಂದು ವರ್ಷದ ರೈತ ಸಂಘದ, ಉಳಿದ ನಾಲ್ಕು ವರ್ಷ ಜೆಡಿಎಸ್ ಬೆಂಬಲಿತರು ಆಡಳಿತ ನಡೆಸುವಂತೆ ಒಡಂಬಡಿಕೆಯಾಗಿತ್ತು. ಅದರಂತೆ ಮೊದಲ ಒಂದು ವರ್ಷ ರೈತಸಂಘ ಆಡಳಿತ ನಡಸಿ ಜೆಡಿಎಸ್‌ಗೆ ಅಧಿಕಾರ ನೀಡಿದ್ದಾರೆ. ನೂತನ ಅಧ್ಯಕ್ಷ ಕೆ.ಎಸ್.ಮನೋಜ್ ಅವರು ಆಯ್ಕೆಯಾಗಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ಈ ವೇಳೆ ಉಪಾಧ್ಯಕ್ಷ ನಾರಾಯಣ, ಮಾಜಿ ಅಧ್ಯಕ್ಷ ದೇವರಾಜು, ನಿರ್ದೇಶಕರಾದ ಸುರೇಶ, ಲಕ್ಷ್ಮೇಗೌಡ, ರಾಮೇಗೌಡ, ರಾಜು, ಶಶಿಕಲಾ, ಪ್ರೇಮಮ್ಮ,ವಸಂತಮ್ಮ, ಕಾರ್ಯದರ್ಶಿ ಸುರೇಶ್, ಮುಖಂಡರಾದ ಮನು, ಹರೀಶ್, ಸ್ವಾಮೀಗೌಡ, ಜಗದೀಶ್, ಕೆ.ಜೆ.ಕುಮಾರ್ ಸೇರಿದಂತೆ ಹಲವರು ಇದ್ದರು.
ಬೆಳಗ್ಗಿನಿಂದಲೇ ಊಟ, ತಿಂಡಿ ಎಲ್ಲವನ್ನು ಬಿಟ್ಟು, ಕ್ಯೂನಲ್ಲಿ ಅರ್ಜಿ ಸಲ್ಲಿಸಲು ಮುಂದಾದರೆ ಸರ್ವರ್ ಸಮಸ್ಯೆ ಇದೆ, ಅರ್ಜಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿ ಹೇಳಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಮತ್ತೆ ನಾಳೆ ಬಂದರೆ ಇದೇ ಉತ್ತರ ಹೇಳುತ್ತಿದ್ದಾರೆ ವಿನಃ ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.ಪಡಿತರ ವಿತರಕರು ಜಾತಿ ಪ್ರಮಾಣ ಪತ್ರ ನೀಡಿದರೆ ಮಾತ್ರ, ಅಕ್ಕಿ, ರಾಗಿ ವಿತರಿಸಲಾಗುವುದು ಇಲ್ಲದೆ ಹೋದಲ್ಲಿ, ಪಡಿತರ ನೀಡುವುದಿಲ್ಲ ಎನ್ನುತ್ತಿದ್ದಾರೆ. ಸರ್ಕಾರ ಯೋಜನೆಗಳನ್ನು ಜಾರಿ ಮಾಡಿ ನಂತರ ಅದಕ್ಕೆ ಇನ್ನಿಲ್ಲದ ದಾಖಲಾತಿಗಳನ್ನು ಕೇಳುವ ಬದಲು ಯಾವುದೇ ಯೋಜನೆಗಳನ್ನು ಜಾರಿ ಮಾಡುವುದೇ ಬೇಡ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿತ್ತಿದ್ದಾರೆ.