ಸಾರಾಂಶ
ಸಿರುಗುಪ್ಪ: ಮಹಿಳಾ ಸ್ವಸಹಾಯ ಸಂಘದಿಂದ ಸ್ವಾವಲಂಬಿ ಜೀವನಕ್ಕೆ ಸಾಧ್ಯವಾಗುತ್ತಿದೆ. ಜೊತೆಗೆ ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವ ಪರಿವರ್ತಿಸಲು ಸಹಾಯಕವಾಗಿದೆ ಎಂದು ಎನ್.ಆರ್.ಎಲ್.ಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಹೇಳಿದರು.
ತಾಲೂಕಿನ ಬಾಗೇವಾಡಿ ಗ್ರಾಪಂ ಆವರಣದಲ್ಲಿ ನಡೆದ ಎನ್.ಆರ್.ಎಲ್.ಎಂ ಯೋಜನೆಯಡಿ ಭತ್ತದ ನಾಡು ಸಂಜೀವಿನಿ ವನಧನ ವಿಕಾಸ ಕೇಂದ್ರದಿಂದ ಬಾಗೇವಾಡಿ ಗ್ರಾಮದ ಮಹಿಳಾ ಸಂಘದವರ ಅಣಬೆ ಮತ್ತು ಜೇನುತುಪ್ಪ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಎನ್.ಆರ್.ಎಲ್.ಎಂ ಯೋಜನೆಯಡಿ ಗ್ರಾಮೀಣ ಭಾಗದ ಸ್ವಸಹಾಯ ಮಹಿಳಾ ಸಂಘದ ಸದಸ್ಯರಿಗೆ ಜೀವನೋಪಾಯಕ್ಕಾಗಿ ನೀಡುವ ವಿವಿಧ ಕರ ಕುಶಲ ವಸ್ತುಗಳ ತಯಾರಿಕೆ, ಅನೇಕ ಉತ್ಪನ್ನಗಳ ತಯಾರಿಸಿ ಮಾರಾಟ ಮಾಡಬೇಕು. ಇದರಿಂದ ಆದಾಯದ ಹೆಚ್ಚಿಸಿಕೊಳ್ಳಲು ನೇರವಾಗುತ್ತದೆ ಎಂದರು.
ಪ್ರಧಾನಮಂತ್ರಿ ವನ್ ಧನ್ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ವನ್ ಧನ್ ವಿಕಾಸ ಕೇಂದ್ರವಾಗಿದೆ. ಇದು ಮಹಿಳೆಯರಿಗೆ ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ, ಕೌಶಲ್ಯ ತರಬೇತಿ, ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸುವ ಮೂಲಕ ಅವರ ಜೀವನೋಪಾಯವನ್ನು ಹೆಚ್ಚಿಸಲು ಮತ್ತು ಅವರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.ಬಾಗೇವಾಡಿ ಗ್ರಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ತಾಪಂ ಸಹಾಯಕ ನಿರ್ದೇಶಕ ಬಸವರಾಜ್, ಬಾಗೇವಾಡಿ ವನಧನ ವಿಕಾಸ ಕೇಂದ್ರ ಅಧ್ಯಕ್ಷೆ ನಂದಿನಿ, ಸಾಯಿನಾಥ ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಲಕ್ಷ್ಮಿ ರೈತ ಸಂಪರ್ಕ ಕೇಂದ್ರ ಅಧಿಕಾರಿ ಪುರುಷೋತ್ತಮ್, ಎನ್.ಆರ್.ಎಲ್.ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಹನುಮನ ಗೌಡ, ಕೃಷಿಯೇತರ ಅಧಿಕಾರಿ ಗೌಸಲ್ ಅಜೀಮ್, ಕೃಷಿ ಅಧಿಕಾರಿ ಮಹಾಂತೇಶ್ವರ, ವಲಯ ಮೇಲ್ವಿಚಾರಕ ಆಲಂ ಬಾಷ, ಕೌಶಲ್ಯ ವಲಯ ಮೇಲ್ವಿಚಾರಕ ಶೇಷಪ್ಪ, ಜಿಪಿಎಲ್ಎಫ್ ಸಹಾಯಕಿ ಎನ್.ಹುಲಿಗೆಮ್ಮ, ಸಂಪನ್ನೂಲ ಅಧಿಕಾರಿಗಳಾದ ಯಶೋದ, ಹೇಮಾವತಿ ಇದ್ದರು.
ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಪಂನಲ್ಲಿ ನಡೆದ ಎನ್.ಆರ್.ಎಲ್.ಎಂ ಯೋಜನೆಯಡಿ ಅಣಬೆ, ಜೇನುತುಪ್ಪ ಉತ್ಪಾದನಾ ಘಟಕವನ್ನು ಬಾಗೇವಾಡಿ ಗ್ರಾಪಂ ಅಧ್ಯಕ್ಷೆ ಕಾಮಾಕ್ಷಮ್ಮ ಉದ್ಘಾಟಿಸಿದರು.