ಮದುವೆಗೆ ಸಿಗದ ಹೆಣ್ಣು, ರೈತರ ಮಕ್ಕಳಿಂದ ಪಾದಯಾತ್ರೆ

| Published : Mar 18 2025, 12:32 AM IST

ಸಾರಾಂಶ

ಮಂಡ್ಯ: ಮದುವೆಯಾಗಲು ಹೆಣ್ಣು ಸಿಗದ ಹಿನ್ನೆಲೆಯಲ್ಲಿ ಬೇಸತ್ತ ತಾಲೂಕಿನ ಅವ್ವೇರಹಳ್ಳಿಯ ರೈತರ ಮಕ್ಕಳು ಕಂಕಣ ಭಾಗ್ಯಕ್ಕಾಗಿ ಮಲೆ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು.

ಮಂಡ್ಯ: ಮದುವೆಯಾಗಲು ಹೆಣ್ಣು ಸಿಗದ ಹಿನ್ನೆಲೆಯಲ್ಲಿ ಬೇಸತ್ತ ತಾಲೂಕಿನ ಅವ್ವೇರಹಳ್ಳಿಯ ರೈತರ ಮಕ್ಕಳು ಕಂಕಣ ಭಾಗ್ಯಕ್ಕಾಗಿ ಮಲೆ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು. ಗ್ರಾಮದ ಸುಮಾರು 15ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಮದುವೆಯಾಗಲು ಹೆಣ್ಣು ಸಿಗಲೆಂದು ಹರಕೆ ಹೊತ್ತು ಗ್ರಾಮಸ್ಥರೊಂದಿಗೆ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯಲ್ಲಿ ಯುವಕರು, ಮಹಿಳೆಯರು, ಗ್ರಾಮಸ್ಥರು ಇದ್ದರು.

ಪೋಷಕರು ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ. ಹೆಣ್ಣು ಹೆತ್ತವರಿಗೆ ಸರ್ಕಾರಿ ನೌಕರಿ ಇರಬೇಕು. ಜೊತೆಗೆ ಆಸ್ತಿಯೂ ಇರಬೇಕು, ಶ್ರೀಮಂತನಾಗಿರಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಗ್ರಾಮವೊಂದರಲ್ಲೇ 50 ಕ್ಕೂ‌ ಹೆಚ್ಚು ಅವಿವಾಹಿತರು ಇದ್ದಾರೆ. ಯಾರಿಗೂ ‌ಹೆಣ್ಣು ಸಿಗುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೂ ಸರಿಯಾದ ಬೆಲೆ ಇಲ್ಲ. ಇತ್ತ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಮಂಡ್ಯ ಜಿಲ್ಲೆಯ ರೈತರ ಮಕ್ಕಳಿಗೆ ಗೋಳು ತಪ್ಪುತ್ತಿಲ್ಲ. ಈ ಗ್ರಾಮವಲ್ಲದೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಾವಿರಾರು ರೈತರ ಮಕ್ಕಳು ಮದುವೆಯಾಗದೆ ಉಳಿದಿದ್ದಾರೆ ಎಂದು ಪಾದಯಾತ್ರಿ ಯುವಕರು ಹೇಳಿದ್ದಾರೆ.