ಪ್ರತಿಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಅನನ್ಯ: ಶಾಸಕ ಪ್ರಸಾದ ಅಬ್ಬಯ್ಯ

| Published : Mar 10 2025, 12:21 AM IST

ಪ್ರತಿಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಅನನ್ಯ: ಶಾಸಕ ಪ್ರಸಾದ ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇದು ಲಿಂಗ ಸಮಾನತೆಗಾಗಿ ನಡೆಯುತ್ತಿರುವ ಹೋರಾಟ ಮತ್ತು ಜೀವನದ ಎಲ್ಲ ಅಂಶಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಮಹತ್ವದ ಪ್ರಬಲ ಜ್ಞಾಪನೆಯಾಗಿದೆ ಎಂದು ಶಾಸಕ ಅಬ್ಬಯ್ಯ ಹೇಳಿದರು.

ಹುಬ್ಬಳ್ಳಿ: ಮಹಿಳಾ ದಿನ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರ ಅದ್ಭುತ ಕೊಡುಗೆಗಳನ್ನು ಗೌರವಿಸುವ ಸಮಯವಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಬಿಡ್ನಾಳದ ಆರ್.ಕೆ. ಪಾಟೀಲ ಶಾಲೆ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಹಿಳಾ ದಿನಾಚರಣೆ ಮತ್ತು ಎಸ್.ಸಿ. ಶೆಟ್ಟರ ಆಂಡ್ ಸನ್ಸ್ ಕಂಪನಿಯ ಸಿ‌.ಎಸ್.ಆರ್. ಅನುದಾನದ ಅಡಿ 6 ಸ್ಮಾರ್ಟ್ ಟಿವಿ‌ ಮತ್ತು ನೀರಿನ ಅರವಟಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇದು ಲಿಂಗ ಸಮಾನತೆಗಾಗಿ ನಡೆಯುತ್ತಿರುವ ಹೋರಾಟ ಮತ್ತು ಜೀವನದ ಎಲ್ಲ ಅಂಶಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಮಹತ್ವದ ಪ್ರಬಲ ಜ್ಞಾಪನೆಯಾಗಿದೆ. ಮಹಿಳಾ ದಿನ ಪ್ರಪಂಚದಾದ್ಯಂತದ ಮಹಿಳೆಯರ ಶಕ್ತಿ, ಧೈರ್ಯ ಮತ್ತು ಸಾಧನೆಗಳನ್ನು ಆಚರಿಸುವ ಸಮಯ. ವಿಜ್ಞಾನ ಮತ್ತು ಶಿಕ್ಷಣದಿಂದ ವ್ಯಾಪಾರ, ಕಲೆ ಮತ್ತು ನಾಯಕತ್ವದ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರ ಕೊಡುಗೆಗಳನ್ನು ಗೌರವಿಸುವ ದಿನ ಇದು ಎಂದರು.

ಈ ಸಂದರ್ಭದಲ್ಲಿ ಉದ್ಯಮಿ ಎಸ್.ಸಿ. ಶೆಟ್ಟರ, ನಿಖಿಲ್ ಶೆಟ್ಟರ, ಪಾಲಿಕೆ ಮಾಜಿ ಸದಸ್ಯ ಮೋಹನ್ ಅಸುಂಡಿ, ಜಮಾಲಸಾಬ ನದಾಫ, ಮಂಜುನಾಥ ಗೋಂದಕರ್, ಶರಣಯ್ಯ ಹಿರೇಮಠ, ಮಂಜು ಪೊಲೀಸ್‌ಪಾಟೀಲ, ಹಜರತ್ ಮುನ್ಸಿ, ಮಂಜುನಾಥ್ ಉಪ್ಪಾರ, ಭೀಮಣ್ಣ ಬಡಿಗೇರ, ಶೇಖಯ್ಯ ರುದ್ರಾಕ್ಷಿ, ರೇಷ್ಮಾ ನದಾಫ, ಸಾವಿತ್ರಿ ಮಾದರ, ನಿಂಗಪ್ಪ ರಾಣೋಜಿ ಸೇರಿದಂತೆ ಹಲವರಿದ್ದರು.

ಮಹಿಳೆ ಇಂದು ಅಬಲೆಯಲ್ಲ ಅವಳು ಸಬಲೆ

ಹುಬ್ಬಳ್ಳಿ: ಮಹಿಳೆ ಇಂದು ಅಬಲೆ ಅಲ್ಲ ಅವಳು ಸಬಲೆ. ಆದರೆ, ಸಮಾಜದಲ್ಲಿ ಮಹಿಳೆಯನ್ನು ನಿರ್ವಹಿಸಿಕೊಳ್ಳುವಂತಹ ಮನಸ್ಥಿತಿಗಳು ಬೇಕು ಎಂದು ಕೆಎಂಸಿಆರ್‌ಐನ ಸಹ ಪ್ರಾಧ್ಯಾಪಕಿ ಡಾ. ಅಶ್ವಿನಿ ಎಚ್.ಆರ್. ಹೇಳಿದರು.

ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ಸಭಾಂಗಣದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಶನಿವಾರ ಹಮ್ಮಿಕೊಳ್ಳಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ನೀವು ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲಿ ಸ್ವಾವಲಂಬಿಗಳಾಗಿ ಎಂದು ಕರೆ ನೀಡಿದರು.ವಿದೇಶದ ಆರ್ಥಿಕತೆಗೆ ಮಹಿಳೆ ಬೇಕು, ಸರ್ಕಾರಿ ಕಚೇರಿಗಳಲ್ಲಿ ಹಲವಾರು ಅವಕಾಶಗಳಿದ್ದು, ಇಂದು ಮಹಿಳೆಯರು ಎಲ್ಲ ರೀತಿಯ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿರುವದರಿಂದ ದೇಶದ ಆರ್ಥಿಕತೆಯಲ್ಲಿ ಮಹಿಳೆಯೂ ಭಾಗಿಯಾಗಿದ್ದಾಳೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ದಂಡಿನ ಮಾತನಾಡಿ, ಭಾರತದ ಸಂಸ್ಕೃತಿಯಲ್ಲಿ ತಾಯಂದಿರಿಗೆ, ಮಹಿಳೆಯರಿಗೆ ಪೂಜ್ಯ ಸ್ಥಾನ ನೀಡಿರುವಂತದ್ದು ಹೆಮ್ಮೆಯ ಸಂಗತಿ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಮಾಜಮುಖಿಯಾಗಿ ಮುಂದೆ ಬಂದಿದ್ದಾರೆ ಎಂದರು.

ಪ್ರಶಿಕ್ಷಣಾರ್ಥಿಗಳಾದ ರಾಜಶ್ರೀ ಮತ್ತು ಶಶಿಕಾಂತ್ ಮಾತನಾಡಿದರು. ಪ್ರಾಚಾರ್ಯೆ ಡಾ. ಎನ್.ಡಿ. ಶೇಖ್, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ಭಟ್, ಡಾ. ಎ.ಜೆ. ಪಾಟೀಲ್, ಪಿಯು ಪ್ರಾಚಾರ್ಯ ಪ್ರೊ. ಸಂದೀಪ್ ಬೂದಿಹಾಳ, ಡಾ. ಎಚ್.ವಿ. ಬೆಳಗಲಿ, ಡಾ. ರಾಜಕುಮಾರ್ ಪಾಟೀಲ್, ಡಾ. ಪಿ.ಎಸ್. ಹೆಗಡಿ, ಡಾ. ಎಂ.ಪಿ. ಚಳಗೇರಿ ಸೇರಿದಂತೆ ಹಲವರಿದ್ದರು.