ಮಹಿಳೆಯರ ಆರೋಗ್ಯ, ಸಬಲೀಕರಣ ಮಹತ್ವದ್ದು

| Published : Mar 13 2024, 02:01 AM IST

ಸಾರಾಂಶ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಪ್ರಕಾರ 2023ರಲ್ಲಿ ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು 3.4 ಲಕ್ಷಕ್ಕಿಂತ ಹೆಚ್ಚಿದೆ. ಇದರೊಂದಿಗೆ ಅನೇಕ ಮಹಿಳೆಯರು ರಕ್ತಹೀನತೆಯಂತಹ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಧಾರವಾಡ:

ಆಧುನಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಾಧನೆ ಇದ್ದರೂ ಅವಳ ಆರೋಗ್ಯ ರಕ್ಷಣೆ, ಸಬಲೀಕರಣ ಮಹತ್ವದ್ದು ಎಂದು ಫ್ಯಾಮಿಲಿ ಪ್ಲಾನಿಂಗ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ ಧಾರವಾಡ ಶಾಖೆ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ್‌ ಹೇಳಿದರು.ಅಗರವಾಲ ಕಣ್ಣಿನ ಆಸ್ಪತ್ರೆ, ಸಿಟಿ ಕ್ಲಿನಿಕ್, ಸಾಫಲ್ಯ ಸಂಸ್ಥೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಜತೆಗೂಡಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಉಚಿತ ಕಣ್ಣಿನ, ಹೃದಯ ರೋಗ ತಪಾಸಣೆ, ಥೈರಾಡ್‌ ತಪಾಸಣೆ ಮತ್ತು ಸ್ತ್ರೀ ರೋಗ ಸಮಸ್ಯೆಗಳಿಗೆ ಸಂಬಂಧಿಸಿದ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಪ್ರಕಾರ 2023ರಲ್ಲಿ ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು 3.4 ಲಕ್ಷಕ್ಕಿಂತ ಹೆಚ್ಚಿದೆ. ಇದರೊಂದಿಗೆ ಅನೇಕ ಮಹಿಳೆಯರು ರಕ್ತಹೀನತೆಯಂತಹ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮಹಿಳೆಯರ ಆರೋಗ್ಯ ರಕ್ಷಣೆ, ಸಬಲೀಕರಣವು ಅತ್ಯಂತ ಮಹತ್ವದ್ದು ಎಂದರು. ಡಾ. ನರ್ಸರಿನ್ ಹೊನ್ನಳ್ಳಿ ಮಾತನಾಡಿ, ಮಹಿಳೆಯರ ಸಬಲೀಕರಣದಲ್ಲಿ ಪುರುಷರ ಪಾತ್ರವೂ ಇದೆ. ಮಹಿಳೆಯರ ಕಾರ್ಯಕ್ರಮಗಳಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಬೇಕೆಂದರು.ಸಿಟಿ ಕ್ಲಿನಿಕ್‌ನ ಡಾ. ಶಿವಪ್ರಕಾಶ ಮಠದ, ಶ್ರೀಕಾಂತ ಆಪ್ಟೆ, ಅಗರವಾಲ ಕಣ್ಣಿನ ಆಸ್ಪತ್ರೆಯ ಶ್ರೀಕಾಂತ ಉಲ್ಲಬುಲೇಸ, ಹೇಮಾ ಹಡಪದ ಇದ್ದರು. ಶಿಲ್ಪಾ ಅದರಗುಂಚಿ ಸ್ವಾಗತಿಸಿದರು, ಆಶಾ ಕೋರಿಶೆಟ್ಟರ ವಂದಿಸಿದರು.