ಕಾರ್ಯಕರ್ತರಾಗಿ ದುಡಿದು ನಾಯಕರಾಗಿ

| Published : Dec 25 2024, 12:48 AM IST

ಸಾರಾಂಶ

ಈಗಿನ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ಸಿದ್ದಾಂತ ಬೇಕಿಲ್ಲ. ಅವರ ಹೆಸರು ಬಳಸಿಕೊಂಡು ಅಧಿಕಾರ ಏರುವಂತ ಪರಿಸ್ಥಿತಿ ಇದೆ. ದೇಶದಲ್ಲಿ ಮನುಸಂಸೃತಿಯ ಸಿದ್ದಾಂತದಲ್ಲಿ ಆರ್.ಎಸ್.ಎಸ್ ಹೇಳಿದ್ದನ್ನು ಬಿಜೆಪಿ ಅಚರಿಸುತ್ತಿದೆ, ಕಾಂಗ್ರೆಸ್ ನಮ್ಮನ್ನು ಬಳಸಿಕೊಂಡು ಗೆದ್ದು ಅಧಿಕಾರ ಹಿಡಿಯುತ್ತದೆ. ಉಚಿತ ಭಾಗ್ಯಗಳಿಂದ ಯಾರೂ ಸಬಲರಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ದಲಿತರು ಮೊದಲು ಕಾರ್ಯಕರ್ತರಾಗಿ ದುಡಿಯುವ ಮೂಲಕ ಸಂಘಟನೆ ಬಲಪಡಿಸಿ ನಂತರ ನಾಯಕರಾಗಬೇಕು. ಆಗ ಮಾತ್ರ ನಾವು ಸಶಕ್ತರಾಗುತ್ತೇವೆ. ಚಳವಳಿಯ ಮೂಲದಲ್ಲಿ ಬೆಳೆದವನಾಗಿ, ದಲಿತರ ಪ್ರಗತಿಗಾಗಿ ತಾವು ಈ ಮಾತು ಹೇಳುತ್ತಿರುವುದಾಗಿ ರಂಗಕರ್ಮಿ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.ಇತ್ತಿಚಿಗೆ ಮೃತ ಪಟ್ಟ ದಲಿತ ಮುಖಂಡ ವಿಚಾರವಾದಿ ಡಾ.ವೆಂಕಟರಮಣಪ್ಪ ಹಾಗು ಶೈಕ್ಷಣಿಕ ಪ್ರವಾಸದ ವೇಳೆ ಸಮುದ್ರದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರಿಗೆ ಶ್ರದ್ಧಾಂಜಲಿ ಅರ್ಪಿಸಲು ದಲಿತ ಸಂಘಟನೆ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಅಂಬೇಡ್ಕರ್‌ ಹೋರಾಟವೇ ಸ್ಫೂರ್ತಿ

ಅಂದಿನ ಚಳವಳಿಗಾರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ರಕ್ತಗತವಾಗಿತ್ತು. ಅಂದಿನ ಕಾಲಘಟ್ಟದಲ್ಲಿ ನಾಯಕರು ಕಡಿಮೆ ಇದ್ದರು, ಕಾರ್ಯಕರ್ತರು ಹೆಚ್ಚಾಗಿದ್ದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜೀವನದ ಹೋರಾಟವೆ ಸಂಘಟನೆಗೆ ಸ್ಫೂರ್ತಿಯಾಗಿತ್ತು ಎಂದರು.ಈಗಿನ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ಸಿದ್ದಾಂತ ಬೇಕಿಲ್ಲ. ಅವರ ಹೆಸರು ಬಳಸಿಕೊಂಡು ಅಧಿಕಾರ ಏರುವಂತ ಪರಿಸ್ಥಿತಿ ಇದೆ. ದೇಶದಲ್ಲಿ ಮನುಸಂಸೃತಿಯ ಸಿದ್ದಾಂತದಲ್ಲಿ ಆರ್.ಎಸ್.ಎಸ್ ಹೇಳಿದ್ದನ್ನು ಬಿಜೆಪಿ ಅಚರಿಸುತ್ತಿದೆ, ಕಾಂಗ್ರೆಸ್ ನಮ್ಮನ್ನು ಬಳಸಿಕೊಂಡು ಗೆದ್ದು ಅಧಿಕಾರ ಕೊಡದೆ ಡಿ.ಕೆ.ಶಿವಕುಮಾರ್ ಮನೆಗೆ ಹೊಗುತ್ತಾರೆ. ಇನ್ನು ಉಚಿತ ಭಾಗ್ಯಗಳಿಂದ ನಾವು ಸಬಲರಾಗುವುದಿಲ್ಲ. ಇದು ಮುಖ್ಯ ಅಲ್ಲ ಎಂದರು ಕೋಲಾರದ ಅದಿಮ ಸಂಸ್ಥೆ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ ನಮ್ಮ ಸಮುದಾಯಕ್ಕೆ ಯಾವುದೆ ಅನಕೂಲಗಳು ಆಗಿಲ್ಲ, ನಾವು ಮಾಡಿದ ಹೋರಾಟ ಹಾಗು ಚಳುವಳಿಗಳಿಂದ ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡಿದ್ದೇವೆ. ಇದೀಗ ದಲಿತ ಸಂಘರ್ಷ ಸಮಿತಿ ಒಡೆದು ಹೋಗಿದೆ ನಾವೆಲ್ಲ ಸಂಘಟಿತರಾಗಿ ಹೋರಾಟಗಳ ಮೂಲಕ ಮತ್ತೆ ಮುನ್ನೆಲೆಗೆ ತರಬೇಕೆಂದು ಹೇಳಿದರು.ಬಂಗವಾದಿ ನಾರಾಯಣಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್,ಪಿಎಲ್.ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕಾಂಗ್ರೆಸ್ ಮುಖಂಡ ಕೆ.ಕೆ.ಮಂಜುನಾಥ್, ಖ್ಯಾತ ವೈದ್ಯೆ ಡಾ.ಚಂದ್ರಕಳಾ, ಸಿ.ಎಂ.ಮುನಿಯಪ್ಪ, ಎನ್.ವೆಂಕಟೇಶ್,ರಾಮಾಂಜಮ್ಮ, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ನಾಗದೇನಹಳ್ಳಿ ಶ್ರೀನಿವಾಸ್,ಪುರಸಭೆ ನಾಮ ನಿರ್ದೇಶಕ ನರಸಿಂಹಮೂರ್ತಿ,ಬದ್ರಿ ನರಸಿಂಹ,ರಾಮಾಂಜಮ್ಮ ಮತ್ತಿತರರು ಇದ್ದರು.