ಕಾಮಗಾರಿ ಕ್ರೆಡಿಟ್‌: ಪಾಟೀಲ V/S ಬೆಳ್ಳುಬ್ಬಿ ಪೈಪೋಟಿ!

| Published : May 23 2025, 12:29 AM IST

ಕಾಮಗಾರಿ ಕ್ರೆಡಿಟ್‌: ಪಾಟೀಲ V/S ಬೆಳ್ಳುಬ್ಬಿ ಪೈಪೋಟಿ!
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಾನು ಮಾಡಿದ ಕಾಮಗಾರಿಗಳನ್ನು ತಾನು ಮಾಡಿದ್ದು ಎಂದು ಹೇಳುವ ಸಚಿವ ಶಿವಾನಂದ ಪಾಟೀಲರಿಗೆ ನಾನು ಸವಾಲು ಹಾಕುತ್ತೇನೆ. ನಾನು ಮಾಡಿದ ಕಾಮಗಾರಿಗಳನ್ನು ದಾಖಲೆ ಸಮೇತ ತೋರಿಸುತ್ತೇನೆ. ನಾನು ಮಾಡಿದ್ದು ಸಾಬೀತಾದರೆ ನೀನು ಗುಂಡು ಹೊಡೆದುಕೊಂಡು ಸಾಯಬೇಕು. ಅಥವಾ ನೀನು ಮಾಡಿದ್ದು ಎಂದು ಸಾಬೀತಾದರೆ ನಾನು ಪಿಸ್ತೂಲ್‌ನಿಂದ ಗುಂಡು ಹೊಡೆದುಕೊಂಡು ಸಾಯುತ್ತೇನೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಾನು ಮಾಡಿದ ಕಾಮಗಾರಿಗಳನ್ನು ತಾನು ಮಾಡಿದ್ದು ಎಂದು ಹೇಳುವ ಸಚಿವ ಶಿವಾನಂದ ಪಾಟೀಲರಿಗೆ ನಾನು ಸವಾಲು ಹಾಕುತ್ತೇನೆ. ನಾನು ಮಾಡಿದ ಕಾಮಗಾರಿಗಳನ್ನು ದಾಖಲೆ ಸಮೇತ ತೋರಿಸುತ್ತೇನೆ. ನಾನು ಮಾಡಿದ್ದು ಸಾಬೀತಾದರೆ ನೀನು ಗುಂಡು ಹೊಡೆದುಕೊಂಡು ಸಾಯಬೇಕು. ಅಥವಾ ನೀನು ಮಾಡಿದ್ದು ಎಂದು ಸಾಬೀತಾದರೆ ನಾನು ಪಿಸ್ತೂಲ್‌ನಿಂದ ಗುಂಡು ಹೊಡೆದುಕೊಂಡು ಸಾಯುತ್ತೇನೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸವಾಲು ಹಾಕಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಮಾಡಿದ್ದ ಕಾಮಗಾರಿಗಳನ್ನೂ ಸಚಿವ ಶಿವಾನಂದ ಪಾಟೀಲರು ತಾವೇ ಮಾಡಿದ್ದು ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆರೋಪಿಸಿದರು. ನಾನು ಸ್ಟೇಜ್ ಹಾಕುತ್ತೇನೆ. ಸಮಯ ನೀನು ಕೊಡು ಇಬ್ಬರೂ ಚರ್ಚೆ ಮಾಡೋಣ. ದಾಖಲೆ ಸಮೇತ ನಾನು ಮಾಡಿದ ಕಾಮಗಾರಿ ತೋರಿಸುತ್ತೇನೆ. ಅಲ್ಲಿ ಕಾಮಗಾರಿಗಳು ನಾನು ಮಾಡಿದ್ದು ಎಂದು ಸಾಬೀತಾದರೆ ನೀನು ಗುಂಡು ಹೊಡೆದುಕೊಂಡು ಸಾಯಬೇಕು. ಅಥವಾ ಕಾಮಗಾರಿಗಳನ್ನು ನೀನು ಮಾಡಿದ್ದು ಎಂದು ಸಾಬೀತಾದರೆ ನಾನು ಪಿಸ್ತೂಲ್‌ನಿಂದ ಗುಂಡು ಹೊಡೆದುಕೊಂಡು ಸಾಯುತ್ತೇನೆ ಎಂದು ಸವಾಲೆಸೆದರು.

ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಮೇ 23ರಂದು ಡಿಸಿಎಂ ಡಿ.ಕೆ.ಶಿವಕುಮಾರ ಕೊಲ್ಹಾರಕ್ಕೆ ಬರುತ್ತಿದ್ದು, ಈ ಸಂಬಂಧ ಕರೆದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವಾನಂದ‌ ಪಾಟೀಲ ತಾವು ಮಾಡದಿರುವ ಹಲವಾರು ಕಾಮಗಾರಿಗಳನ್ನು ಹಾಗೂ ಕೊರ್ತಿ ಕೊಲ್ಹಾರ ಸೇತುವೆ ನಾವು ಮಾಡಿದ್ದೇವೆ. ಕೊರ್ತಿ ಕೊಲ್ಹಾರ ಸೇತುವೆ ಪುನರ್ ನಿರ್ಮಾಣ ಸಮಿತಿ ಮಾಡಿ ಹೋರಾಟ ಮಾಡಿದ್ದೇವೆ, ಅಂದಾಗ ಸೇತುವೆ ಆಗಿದೆ. ವಿಜಯಪುರ- ಹುಬ್ಬಳ್ಳಿ ಹೈವೆ, ಜಿಲ್ಲಾದ್ಯಂತ 7 ಹೊಸ ತಾಲೂಕುಗಳನ್ನು ಮಾಡಿದ್ದು ನಾವು ಎಂದರು.ಕ್ಷೇತ್ರದಲ್ಲಿ ಮಿನಿ ವಿಧಾನಸೌಧ, ಬಸ್ ಡಿಪೋ, ಬಸ್ ನಿಲ್ದಾಣ, 40 ಹಳ್ಳಿಗಳಿಗೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಇವೆಲ್ಲವನ್ನೂ ನಾವು ಅಧಿಕಾರಿದಲ್ಲಿದ್ದಾಗಲೇ ಮಾಡಿದ್ದೇವೆ. ಅಲ್ಲದೆ ಎಸ್ಸಿ-ಎಸ್ಟಿ ಕಾಲೋನಿಯಲ್ಲಿ, ಹಲವು ತಾಂಡಾಗಳಲ್ಲಿ 2012ರಲ್ಲಿ ಸಿಸಿ ರಸ್ತೆ, ಸಮುದಾಯ ಭವನ, ಹೆಣ್ಣು ಮಕ್ಕಳ ಶೌಚಾಲಯ ಕಟ್ಟಿಸಿದ್ದೇವೆ. ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಮಾಡಿದ್ದು ನಾವು. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಮುಳವಾಡ ಏತ ನೀರಾವರಿ ಮೊದಲ ಹಂತದ ಕಾಮಗಾರಿ ಮಾಡಿದ್ದೇನೆ. ಬಳಿಕ 3ನೇ ಹಂತದ ಕಾಮಗಾರಿಯನ್ನು ಸಹ ನಾವೇ ಮಾಡಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಸಿದ್ರಾಮಯ್ಯ ಕಾಖಂಡಕಿ, ಕಲ್ಲಪ್ಪ‌ ಸೊನ್ನದ, ಇಸ್ಮಾಯಿಲಸಾಬ್ ತಹಶೀಲ್ದಾರ್‌ ಉಪಸ್ಥಿತರಿದ್ದರು.

-----------

ಬಾಕ್ಸ್‌

ಈ ಕೆಲಸಗಳನ್ನು ಮಾಡಿ ತೋರಿಸುವಂತೆ ಸವಾಲು

ನಾನು ಮಾಡಿದ ಕಾಮಗಾರಿಗಳನ್ನು ಪದೇ ಪದೇ ಮಾಡಿದ್ದು ತಾನು ಎಂದರೆ ಬಿಡುವುದಿಲ್ಲ. ಕ್ಷೇತ್ರದ ಜನರಿಗೆ ಅನುಕೂಲ ಮಾಡುವುದಾದರೆ ಈ ಕೆಳಗಿನ ಮೂರು ಕಾಮಗಾರಿಗಳನ್ನು ಮಾಡಿ ತೋರಿಸಲಿ ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಸವಾಲು ಹಾಕಿದರು. ಒಂದು ಲಕ್ಷ ಕೊಟಿ ಖರ್ಚು ಮಾಡಿ ಆಲಮಟ್ಟಿ ಡ್ಯಾಂನ್ನು 524 ಮೀಟರ್‌ಗೆ ಎತ್ತರಿಸಬೇಕು, ಅದನ್ನು ಮಾಡಲಿ. ಕೊಲ್ಹಾರದಲ್ಲಿನ 1498 ಮನೆಗಳಿಗೆ ಪರಿಹಾರದ ಹಣ ಕೊಡಿಸುವುದು ಪೆಂಡಿಂಗ್ ಇದೆ, ಅದನ್ನು ಮಾಡಲಿ. ಕೊಲ್ಹಾರದಲ್ಲಿ ಜಾಗ ಖರೀದಿಸಿ ಹೊಸ ಎಪಿಎಂಸಿ ನಿರ್ಮಾಣ ಮಾಡಿ ತೋರಿಸಲಿ ಎಂದು ಸಚಿವ ಶಿವಾನಂದ ಪಾಟೀಲಗೆ ಹೇಳಿದ್ದಾರೆ.