ಸಾರಾಂಶ
ಯಲಬುರ್ಗಾ: ನಾವು ಮಾಡುವ ಕೆಲಸ ದೇವರ ಕೆಲಸವಿದ್ದಂತೆ. ಅದನ್ನು ನಿಷ್ಠೆಯಿಂದ ಮಾಡಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.ಹಿರೇವಂಕಲಕುಂಟಾ ಗ್ರಾಮದ ರಸ್ತೆ ಬದಿ ನೆಡುತೋಪು ಕಾಮಗಾರಿ ಸ್ಥಳದಲ್ಲಿ ನರೇಗಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನರೇಗಾ ಯೋಜನೆ ಜಾರಿಯಾಗಿ ಇಂದಿಗೆ ೧೮ ವರ್ಷ ಕಳೆದಿದ್ದು, ಕೋಟ್ಯಂತರ ಕೂಲಿಕಾರರಿಗೆ ಆಸರೆಯಾಗಿದೆ. ಅವರ ಆರ್ಥಿಕತೆಗೆ ಸಹಕಾರಿಯಾಗಿದೆ ಎಂದರು.ತಾವು ಮಾಡುವ ಕೆಲಸದಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಸಸಿ ಹೆಮ್ಮರವಾಗಿ ಬೆಳೆದು ಸಾವಿರಾರು ಜನ, ಜಾನುವಾರು, ಪಕ್ಷಿಗಳಿಗೆ ನೆರಳು ನೀಡುತ್ತದೆ ಎಂದು ಹೇಳಿದರು.ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ನರೇಗಾ ಯೋಜನೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಡಿಒರಾದ ಗೋಣೆಪ್ಪ ಜಿರ್ಲಿ ನಿರೂಪಿಸಿದರು.ನರೇಗಾ ದಿನದ ಅಂಗವಾಗಿ ಅಕುಶಲ ಕೂಲಿಕಾರರು, ಅಧಿಕಾರಿಗಳು ಸೇರಿ ಕೇಕ್ ಕತ್ತರಿಸುವ ಮೂಲಕ ಖುಷಿ ವ್ಯಕ್ತಪಡಿಸಿದರು. ಇದೇ ವೇಳೆ ೧೦೦ ಮಾನವ ದಿನಗಳು ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ಕಾಯಕ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಾಳಪ್ಪ, ಮನಿಶ್, ಕೆಎಚ್‌ಪಿಟಿ ಸಂಯೋಜಕ ಸಿಂಧು ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ನಡೆಸಿದರು.ಸಾಮಾಜಿಕ ಅರಣ್ಯ ಇಲಾಖೆಯ ಆರ್‌ಎಫ್‌ಒ ಬಸವರಾಜ ಗೋಗೇರಿ, ತಾಪಂ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಎಂಐಎಸ್ ಸಂಯೋಜಕ ಬಸವರಾಜ ದೊಡ್ಡಮನಿ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಶರಣಪ್ಪ ಕದಂಪುರ, ಗುರುರಾಜ್ ಬಾಲಿ, ಶಾಮೀದಸಾಬ, ಪಿಡಿಒ ಗೋಣೆಪ್ಪ ಜಿರ್ಲಿ, ತಾಪಂ ಸಿಬ್ಬಂದಿ, ತಾಂತ್ರಿಕ ಸಹಾಯಕರು, ಸಮುದಾಯ ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರರು, ಗ್ರಾಪಂ ಸಿಬ್ಬಂದಿ ಇದ್ದರು.