ಕಠಿಣ ಪರಿಶ್ರಮ, ನಿಷ್ಠೆಯಿಂದ ಬದುಕು ಸುಂದರವಾಗಿಸಿಕೊಳ್ಳಿ: ಲಕ್ಷ್ಮಣ ಅಷ್ಟಗಿ

| Published : Oct 10 2024, 02:15 AM IST

ಸಾರಾಂಶ

ಪರೀಕ್ಷಾರ್ಥಿಗಳು ಮೋಜು, ಮಸ್ತಿಗಾಗಿ ಮೊಬೈಲ್‌ಗಳನ್ನು ಬಳಸದೇ ಅಮೂಲ್ಯವಾದ ಮುಂದಿನ 3 ತಿಂಗಳ ಸಮಯವನ್ನು ಹಾಳು ಮಾಡದೇ ಎಲ್ಲ ಸಮಯವನ್ನು ಅಭ್ಯಾಸಕ್ಕಾಗಿ ಮೀಸಲಿಟ್ಟರೆ ಈ 3 ತಿಂಗಳ ಪರಿಶ್ರಮವು ನಿಮ್ಮ ಮುಂದಿನ 60 ವರ್ಷಗಳ ಬದುಕನ್ನು ಸುಖಕರವಾಗಿರುವಂತೆ ಮಾಡುತ್ತದೆ ಎಂದು ಗಡಿನಾಡು ಕೋಚಿಂಗ್‌ ಸೆಂಟರ್‌ ನಿರ್ದೇಶಕ ಲಕ್ಷ್ಮಣ ಮ.ಅಷ್ಟಗಿ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪರೀಕ್ಷಾರ್ಥಿಗಳು ಮೋಜು, ಮಸ್ತಿಗಾಗಿ ಮೊಬೈಲ್‌ಗಳನ್ನು ಬಳಸದೇ ಅಮೂಲ್ಯವಾದ ಮುಂದಿನ 3 ತಿಂಗಳ ಸಮಯವನ್ನು ಹಾಳು ಮಾಡದೇ ಎಲ್ಲ ಸಮಯವನ್ನು ಅಭ್ಯಾಸಕ್ಕಾಗಿ ಮೀಸಲಿಟ್ಟರೇ ಈ 3 ತಿಂಗಳ ಪರಿಶ್ರಮವು ನಿಮ್ಮ ಮುಂದಿನ 60 ವರ್ಷಗಳ ಬದುಕನ್ನು ಸುಖಕರವಾಗಿರುವಂತೆ ಮಾಡುತ್ತದೆ ಎಂದು ಗಡಿನಾಡು ಕೋಚಿಂಗ್‌ ಸೆಂಟರ್‌ ನಿರ್ದೇಶಕ ಲಕ್ಷ್ಮಣ ಮ.ಅಷ್ಟಗಿ ಕಿವಿಮಾತು ಹೇಳಿದರು.

ನಗರದ ಪ್ರತಿಷ್ಠಿತ ಗಡಿನಾಡು ಕೋಚಿಂಗ್‌ ಸೆಂಟರ್‌ನಲ್ಲಿ ಪೊಲೀಸ್ ಹಾಗೂ ಪಿಎಸೈ ಪರೀಕ್ಷೆಗಳ ಕುರಿತು ಈಚೆಗೆ ನಡೆದ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಪ್ರಮಾಣದಲ್ಲಿ ಭಾಗವಹಿಸುತ್ತಿರುತ್ತಾರೆ. ಆದರೆ, ಯಾವ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ನಿಷ್ಠೆಯಿಂದ ಮುಂದಿನ ಕನಿಷ್ಠ 3 ತಿಂಗಳ ಕಾಲ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವವರು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಮೂಲಕ ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುತ್ತಾರೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸುಮಾರು 50ಕ್ಕೂಅಧಿಕ ಪರೀಕ್ಷಾರ್ಥಿಗಳು ಇದ್ದರು.

ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಿದ ಕಾರ್ಯಾಗಾರ: ಗಡಿನಾಡು ಕೊಂಚಿಂಗ್ ಸೆಂಟರ್‌ನಲ್ಲಿ ನಡೆದ ಉಚಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮುಂಬರುವ ಪೊಲೀಸ್ ಹಾಗೂ ಪಿಎಸೈ ಪರೀಕ್ಷೆಗಳ ಬಗ್ಗೆ ಸಂಪೂರ್ಣವಾದ ತಿಳುವಳಿಕೆ ನೀಡಿದರು. ಪರೀಕ್ಷೆಗಳನ್ನು ಯಶಸ್ವಿಯಾಗಿ ಹೇಗೆ ಉತ್ತೀರ್ಣವಾಗಿ ತಮ್ಮ ಬದುಕನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿಯಲ್ಲಿ ಬದಲಾವಣೆಯಾದ ಸಾಕಷ್ಟು ಅಂಶಗಳು, ಪಠ್ಯಕ್ರಮಗಳು, ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆಯಾದ ಹಲವಾರು ಮಾದರಿಗಳು, ಸಮಯದ ಸರಿಯಾದ ಉಪಯೋಗವನ್ನು ಮಾಡುವುದನ್ನು, ಪರೀಕ್ಷೆಯ ಕಠಿಣತೆಯ ಬಗ್ಗೆ ಹಾಗೂ ಇನ್ನೂ ಮುಂತಾದ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಮಯದ ಸರಿಯಾದ ಸದ್ಬಳಕೆ ಮಾಡುವುದನ್ನು ಮತ್ತು ಯಾವ ರೀತಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುವುದರ ಕುರಿತು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಪರೀಕ್ಷೆಗಳ ತಯಾರಿಗೆ ಬೇಕಾದ ಎಲ್ಲ ಮಾಹಿತಿಯ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ವಿವರಣೆ ನೀಡುವ ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಿದ ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಪ್ರಮಾಣದಲ್ಲಿ ಭಾಗವಹಿಸುತ್ತಿರುತ್ತಾರೆ. ಆದರೆ, ಯಾವ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ನಿಷ್ಠೆಯಿಂದ ಮುಂದಿನ ಕನಿಷ್ಠ 3 ತಿಂಗಳ ಕಾಲ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವರು ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಮೂಲಕ ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುತ್ತಾರೆ.

-ಲಕ್ಷ್ಮಣ ಅಷ್ಟಗಿ, ಗಡಿನಾಡು ಕೋಚಿಂಗ್ ಸೆಂಟರ್‌ ನಿರ್ದೇಶಕರು.