ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ: ಶಾಸಕ ಯು.ಬಿ. ಬಣಕಾರ

| Published : Mar 28 2025, 12:35 AM IST

ಸಾರಾಂಶ

ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ, ಸ್ವಚ್ಛ ಗ್ರಾಮವನ್ನು ನಿರ್ಮಾಣ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು.

ಹಿರೇಕೆರೂರು: ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಪ್ರೇಕ್ಷಣಿಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನಕೂಲ ಕಲ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ತಾಲೂಕಿನ ಉಜನೀಪುರ ಗ್ರಾಮದ ಉಜನೇಶ್ವರ ದೇವಸ್ಥಾನ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನೂತನವಾಗಿ ನಿರ್ಮಿಸಿದ ಯಾತ್ರಿ ನಿವಾಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಜನತೆಗೆ ಅನಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಅಗತ್ಯ ಮೂಲ ಸೌಕರ್ಯಗಳು, ಸಮುದಾಯ ಭವನಗಳು, ಯಾತ್ರಿ ನಿವಾಸಗಳು ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಕಾರ್ಯಗತ ಮಾಡುತ್ತಿದೆ. ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಂಡು ಗ್ರಾಮಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ, ಸ್ವಚ್ಛ ಗ್ರಾಮವನ್ನು ನಿರ್ಮಾಣ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಯಾತ್ರಿ ನಿವಾಸ ಕಟ್ಟಡವನ್ನು ಸಮರ್ಪಕ ನಿರ್ವಹಣೆಯ ಮೂಲಕ ಸದ್ಬಳಕೆ ಮಾಡಿಕೊಂಡು ಸರ್ಕಾರದ ಉದ್ದೇಶ ಈಡೇರಿಸಬೇಕು ಎಂದರು.ಈ ಸಂದರ್ಭದಲ್ಲಿ ಮಂಜುನಾಥ ಶಿಡಗನಾಳ, ಶಿದ್ದನಗೌಡ ಪಾಟೀಲ, ನಾಗರಾಜ ಸಿಂಗಾಪುರ, ಟಿ.ಬಿ. ಹುಡೇದ, ಈರಪ್ಪ ಬೇವಿನಹಳ್ಳಿ, ರುದ್ರಪ್ಪ ಪೂಜಾರ, ಮಂಜುಗೌಡ ಪಾಟೀಲ, ಈರಪ್ಪ ಪೂಜಾರ, ಉಜ್ಜಪ್ಪ ಶಿಡಗನಾಳ, ನಿಂಗಪ್ಪ ಕಾಯಕದ, ಯೋಗೇಶ ಬೇವಿನಹಳ್ಳಿ, ಈರಯ್ಯ ಮಠದ. ತಿಪ್ಪೆಶ ಯಡಗೋಡಿ, ಸತೀಶ ಶಿರಗೇರಿ, ಚಂದ್ರು ಶಿರಗೇರಿ, ಪುಟ್ಟನಗೌಡ ಪಾಟಿಲ, ಸುರೇಶ ದಂಡಗೀಹಳ್ಳಿ, ಕುಬೇರಗೌಡ ಬೇವಿನಹಳ್ಳಿ ಸೇರಿದಂತೆ ಗ್ರಾಮಸ್ಥರು ಇದ್ದರು.

ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

ಹಾವೇರಿ: ತಾಲೂಕಿನ ಬಸವನಕಟ್ಟಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ. 28ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಬಸವನಕಟ್ಟಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಬಸವನಕಟ್ಟಿ, ಸೋಮನಕಟ್ಟಿ, ಮಾಚಾಪುರ, ಬೂದಗಟ್ಟಿ, ಕನವಳ್ಳಿ, ಹನುಮನಹಳ್ಳಿ, ಕಾಟೇನಹಳ್ಳಿ, ಅಗಡಿ, ತಿಮ್ಮೇನಹಳ್ಳಿ, ಮಾಳಾಪುರ, ಗಾಂಧಿಪುರ, ಜಾನಕೊಪ್ಪ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.