ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮ ವಹಿಸಿ: ಶಾಸಕಿ ಲತಾ

| Published : Sep 14 2024, 01:46 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮ ವಹಿಸಿ: ಶಾಸಕಿ ಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಈಚೆಗೆ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದಾಗ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿದ್ದರು

ಹರಪನಹಳ್ಳಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮ ವಹಿಸಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಪ್ರೌಢ ಶಾಲಾ ಶಿಕ್ಷಕರಿಗೆ ತಿಳಿಸಿದರು.

ಅವರು ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್‌ನಲ್ಲಿ ತಾಲೂಕು ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರ ಕ್ಲಬ್‌ ವತಿಯಿಂದ ಆಯೋಜಿಸಿದ್ದ ವಿಜಯನಗರ ಜಿಲ್ಲಾ ಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಸಿಎಂ ಈಚೆಗೆ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದಾಗ ಎಸ್ಸೆಸ್ಸೆಲ್ಸಿ

ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿದ್ದರು ಎಂದ ಅವರು, ಫಲಿತಾಂಶ ಸುದಾರಣೆ ನಿಟ್ಟಿನಲ್ಲಿ ಶಿಕ್ಷಕರು ಉತ್ತಮವಾಗಿ ಕೆಲಸ ಮಾಡಬೇಕು ಎಂದರು.

ಮಕ್ಕಳಿಗೆ ಸರಳವಾಗಿ, ಶ್ರದ್ದೆಯಿಂದ ಕಲಿಸಬೇಕು. ಓದುವ ಹವ್ಯಾಸ ಬೆಳೆಸಬೇಕು ಎಂದು ಅವರು ಹೇಳಿದರು.

ತಾಪಂ ಇಒ ವೈ.ಎಚ್‌.ಚಂದ್ರಶೇಖರ ಮಾತನಾಡಿ, ಕಳೆದ ಬಾರಿ ಕಡಿಮೆ ಫಲಿತಾಂಶ ಬಂದಿರುವ ತಾಲೂಕಿನ 16 ಪ್ರೌಢ ಶಾಲೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸರಳ ವಿಜ್ಞಾನ, ದೈನಂದಿನ ವಿಜ್ಞಾನ, ಸುಲಭ ವಿಜ್ಞಾನ ಹೀಗೆ ಮೂರು ವಿಧದಲ್ಲಿ ವಿಜ್ಞಾವನ್ನು ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಲೇಪಾಕ್ಷಪ್ಪ ಮಾತನಾಡಿ, ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ನಮಗೆ ದೊಡ್ಡ ಚಾಲೇಂಜ್‌ ಆಗಿದೆ. ಗುಣಾತ್ಮಕ ಫಲಿತಾಂಶ ಕೊಡಬೇಕಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಿ, ಪ್ರೀತಿಯಿಂದ ಕಲಿಸಿ ಎಂದು ಹೇಳಿದರು.

ಯುನಿಟ್‌ ಪರೀಕ್ಷೆ ಮಾಡಿ ತಾಯಂದಿರ ಸಭೆ ನಡೆಸಿ ಒಟ್ಟಿನಲ್ಲಿ ನಾವು ನೀವು ಸೇರಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಗಣನೀಯವಾಗಿ ಸುಧಾರಿಸಬೇಕು ಎಂದು ಅವರು ಹೇಳಿದರು.

ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಣ್ಣ ಮಾತನಾಡಿ, ಟಿವಿಯಲ್ಲಿ ಬರುವ ಶಾಸ್ತ್ರವನ್ನು ಮಕ್ಕಳ ಮನಸ್ಸಿನಿಂದ ಹೋಗಲಾಡಿಸಿ ವೈಜ್ಞಾನಿಕ ಶಾಸ್ತ್ರವನ್ನು ಗಟ್ಟಿಗೊಳಿಸಬೇಕು. ಪ್ರಗತಿಪರ ಆಲೋಚನೆ ಮಕ್ಕಳಿಗೆ ಮೂಡಿಸಿ ಎಂದು ಸಲಹೆ ನೀಡಿದರು.

ವಿಜ್ಞಾನ ಶಿಕ್ಷಕರ ಕ್ಲಬ್‌ ನ ಅಧ್ಯಕ್ಷ ಯತಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷಯ ಪರಿವೀಕ್ಷಕ ಹುಲಿಂಬಂಡಿ, ಬಸವಂತಯ್ಯ ಹಿರೇಮಠ, ಅಕ್ಷರ ದಾಸಲೋಹದ ಸಹಾಯಕ ನಿರ್ದೆಶಕ ಕೆ.ನಾಗರಾಜ, ಶಿಕ್ಷಣ ಸಂಯೋಜಕ ಕಬೀರ ನಾಯ್ಕ, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್‌.ಜಿ. ಮನೋಹರ, ಬಿ.ಜಯಮಾಲತೇಶ, ಪ್ರೌಢ ಶಾಲಾ ಎನ್‌ಪಿಎಸ್‌ ನೌಕರರ ಸಂಘದ ವಿರೇಶ, ನಿಂಗಪ್ಪ, ಶಂಕರನಾಯ್ಕ, ಅಂಜಿನಪ್ಪ, ಹರಿಯಮ್ಮನಹಳ್ಳಿ, ಶಶಿಕಲಾ, ಗುರುಮೂರ್ತಿ, ಕೊಟ್ರೇಶ, ವಿಶ್ವನಾಥ, ವಿಜ್ಞಾನ ಶಿಕ್ಷಕರ ಕ್ಲಬ್‌ ಸದಸ್ಯರು ಇದ್ದರು.