ಸಾರಾಂಶ
ವಿದ್ಯಾವಂತರು ಯಾವತ್ತೂ ಸುಮ್ಮನೇ ಕೈ ಕಟ್ಟಿ ಕೂರಬಾರದು. ಆದ್ದರಿಂದ ನಾವೆಲ್ಲ ಸೇರಿ ಶಾಲೆಯನ್ನು ಪ್ರಾರಂಭಿಸಿದ್ದೇವೆ. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳ ಮಕ್ಕಳಿಗೆ ಆದ್ಯತೆ ನೀಡಿದ್ದು ಪೋಷಕರು ಇಂದಿನಿಂದಲೇ ತಮ್ಮ ಮಕ್ಕಳನ್ನ ನಮ್ಮ ಲಂಡನ್ ಕಿಡ್ಸ್ ಶಾಲೆಗೆ ದಾಖಲಿಸಬಹುದು.
ಕೊರಟಗೆರೆ: ಪಟ್ಟಣದ ಶಿವಗಂಗಾ ಚಿತ್ರಮಂದಿರ ಮುಂಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಲಂಡನ್ ಕಿಡ್ಸ್ ಶಾಲೆಯ ಉದ್ಘಾಟನೆಯನ್ನು ತಹಸೀಲ್ದಾರ್ ಮಂಜುನಾಥ್ ನೆರವೇರಿಸಿದರು.
ನಂತರ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಲಂಡನ್ ಕಿಡ್ಸ್ ಶಾಲೆಯನ್ನು ಕೊರಟಗೆರೆ ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಭವಿಷ್ಯವನ್ನು ರೂಪಿಸಿ, ಶಾಲೆಯನ್ನು ಚೆನ್ನಾಗಿ ಮುಂದುವರೆಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು.ಲಂಡನ್ ಕಿಡ್ಸ್ ಶಾಲೆಯ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ, ಈ ಶಾಲೆಯಲ್ಲಿ ಆರು ವರ್ಷದೊಳಗಿನ ಮಕ್ಕಳಿಗೆ ದಾಖಲಾತಿಗಳು ಈಗಾಗಲೇ ಪ್ರಾರಂಭವಾಗಿದ್ದು, ಪ್ರಥಮ ವರ್ಷದ ಅಡ್ಮಿಶನ್ ಗಳಿಗೆ ಶೇಕಡ ೧೦ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಭದ್ರತೆಗಾಗಿ ಪ್ರತಿ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ವಿಶಾಲ ಆಟದ ಮೈದಾನ ಹಾಗೂ ನುರಿತ ತರಬೇತಿ ಹೊಂದಿರುವ ಶಿಕ್ಷಕರಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತೇವೆ ಎಂದು ತಿಳಿಸಿದರು.
ಶ್ರುತಿ ವೆಂಕಟೇಶ್ ಮಾತನಾಡಿ, ವಿದ್ಯಾವಂತರು ಯಾವತ್ತೂ ಸುಮ್ಮನೇ ಕೈ ಕಟ್ಟಿ ಕೂರಬಾರದು. ಆದ್ದರಿಂದ ನಾವೆಲ್ಲ ಸೇರಿ ಶಾಲೆಯನ್ನು ಪ್ರಾರಂಭಿಸಿದ್ದೇವೆ. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳ ಮಕ್ಕಳಿಗೆ ಆದ್ಯತೆ ನೀಡಿದ್ದು ಪೋಷಕರು ಇಂದಿನಿಂದಲೇ ತಮ್ಮ ಮಕ್ಕಳನ್ನ ನಮ್ಮ ಲಂಡನ್ ಕಿಡ್ಸ್ ಶಾಲೆಗೆ ದಾಖಲಿಸಬಹುದು. ಮೊದಲು ಬಂದವರಿಗೆ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.ತಹಸೀಲ್ದಾರ್ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯಮುನಾ, ಇಒ ಅಪೂರ್ವ, ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಸೇರಿದಂತೆ ಹಲವು ಗಣ್ಯರು, ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.