ವಿದ್ಯೆಯಿಂದ ವಿವೇಕ, ಸಂಸ್ಕಾರ ಲಭ್ಯವಾಗಲಿದೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳಲ್ಲಿ ಸಹನೆ ಮುಖ್ಯ. ಹಿಂದಿನ ದಿನಗಳಲ್ಲಿ ಶಿಕ್ಷಕರು ಮಕ್ಕಳಿಗೆ ಬೈಯ್ದು, ಬುದ್ಧಿ ಹೇಳುತ್ತಿದ್ದರಿಂದ ಅವರ ಜೀವನ ರೂಪಿಸಿಕೊಳ್ಳುವ ಜತಗೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಲು ಸಾಧ್ಯವಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಾಠ ಕಲಿತ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರನ್ನು ಗುರುತಿಸಿ ಗುರುವಂದನೆ ಸಲ್ಲಿಸುವುದು ಪುಣ್ಯದ ಕೆಲಸ ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ.ಎಲ್.ಲಿಂಗರಾಜು ಹೇಳಿದರು.ತಾಲೂಕಿನ ಮಲೆನಾಡ ಗಾಂಧಿ ದಿ.ಎಚ್.ಜಿ.ಗೋವಿಂದೇಗೌಡ ಪ್ರಶಸ್ತಿ ಪುರಸ್ಕೃತ ಮೂಡಲಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ 2017-18ನೇ ಸಾಲಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಸಂಭ್ರಮೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿದ್ಯೆಯಿಂದ ವಿವೇಕ, ಸಂಸ್ಕಾರ ಲಭ್ಯವಾಗಲಿದೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳಲ್ಲಿ ಸಹನೆ ಮುಖ್ಯ. ಹಿಂದಿನ ದಿನಗಳಲ್ಲಿ ಶಿಕ್ಷಕರು ಮಕ್ಕಳಿಗೆ ಬೈಯ್ದು, ಬುದ್ಧಿ ಹೇಳುತ್ತಿದ್ದರಿಂದ ಅವರ ಜೀವನ ರೂಪಿಸಿಕೊಳ್ಳುವ ಜತಗೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.ಈಗಿನ ಮಕ್ಕಳಿಗೆ ಬೈಯ್ದು, ಬುದ್ಧಿ ಹೇಳುವುದಕ್ಕಾಗುವುದಿಲ್ಲ. ಉದಾಸೀನ ಭಾವನೆ ಹೆಚ್ಚಾಗಿದೆ. ಜತೆಗೆ ಅವರಲ್ಲಿ ವಿದೇಯತೆ ಕೂಡ ಇಲ್ಲ. ಇಂತಹ ಭಾವನೆಯುಳ್ಳ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಕಷ್ಟ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಡಿ.ಮರಿಸ್ವಾಮಿಗೌಡ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಂ, ತಾಲೂಕು ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಸ್.ಕೇಶವಮೂರ್ತಿ ಮಾತನಾಡಿದರು.ಇದೇ ವೇಳೆ ಶಾಲೆಯ 2017-18ನೇ ಸಾಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹಳ ಅದ್ದೂರಿಯಾಗಿ ಹಿರಿಯ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಎನ್. ಬೋರೇಗೌಡ, ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್, ಕನ್ನಡ ಶಿಕ್ಷಕರಾದ ಜೆ.ಪುಟ್ಟಸ್ವಾಮಿ, ಪವಿತ್ರಾ, ಶಾಂತಮಣಿ, ಸಹ ಶಿಕ್ಷಕರಾದ ಸುನೀತಾ, ಲೋಕೇಶ್, ಟಿ.ಡಿ.ಮಂಜುಳಾ, ಗೋವಿಂದರಾಜು, ಎಲ್.ಕೆ.ಲೋಕೇಶ್ ಕಲ್ಕುಂದ, ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್, ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಣಿಕ್ಯನಹಳ್ಳಿ ಜಯರಾಂ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಲ್.ಎಸ್.ಕೇಶವಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಆರ್.ಸಿ.ನಾಗೇಗೌಡ, ಎಸ್ ಡಿಎಂಸಿ ಉಪಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಸದಸ್ಯರಾದ ಜವರೇಗೌಡ, ಲೋಕೇಶ್, ಸುರೇಶ್, ಗುಣವತಿ, ಸಂಪತ್ತು, ಪದ್ಮಾವತಿ, ಲಕ್ಷ್ಮಿ, ಮಾಜಿ ಅಧ್ಯಕ್ಷ ವೆಂಕಟೇಶ್, ಹಿರಿಯ ವಿದ್ಯಾರ್ಥಿಗಳಾದ ಅಕ್ಷತಾ, ಸೌಂದರ್ಯ, ಅನುಶ್ರೀ, ಸುಷ್ಮಿತಾ, ಕೀರ್ತಿ, ಜಮುನಾ, ಕುಸುಮ, ಚಂದನ್, ಕೀರ್ತನಾ, ಸೌಮ್ಯ, ಅಭಿಷೇಕ್, ಗೌತಮ್, ಅನಿಲ್ ಕುಮಾರ್, ಸುಪ್ರೀತ್, ಚಂದನ್, ನಯನ್ ಕುಮಾರ್, ವಿವೇಕ, ಸಹನಾ, ರಾಮ, ಲಕ್ಷ್ಮಣ ಸೇರಿದಂತೆ ಇತರರಿದ್ದರು.