ಬಾಲವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು: ಟಿ.ಬಿ. ಜಯಚಂದ್ರ

| Published : Mar 03 2024, 01:33 AM IST

ಬಾಲವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು: ಟಿ.ಬಿ. ಜಯಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಪ್ರಾಥಮಿಕ ಶಾಲೆಗಲ್ಲಿಯೂ ಮಕ್ಕಳಿಂದಲೇ ಪ್ರಯೋಗಗಳು ನಡೆಯಬೇಕು ಮತ್ತು ಮಕ್ಕಳೇ ಸ್ವತಃ ಹೊಸದನ್ನು ಕಂಡುಹಿಡಿಯುವ ಪ್ರಯತ್ನ ಆಗಬೇಕು. ಇಂತಹ ಬಾಲವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಕೆಲಸ ಶಿಕ್ಷಣ ಇಲಾಖೆ ಮಾಡುತ್ತಿದೆ ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಪ್ರತಿ ಪ್ರಾಥಮಿಕ ಶಾಲೆಗಲ್ಲಿಯೂ ಮಕ್ಕಳಿಂದಲೇ ಪ್ರಯೋಗಗಳು ನಡೆಯಬೇಕು ಮತ್ತು ಮಕ್ಕಳೇ ಸ್ವತಃ ಹೊಸದನ್ನು ಕಂಡುಹಿಡಿಯುವ ಪ್ರಯತ್ನ ಆಗಬೇಕು. ಇಂತಹ ಬಾಲವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಕೆಲಸ ಶಿಕ್ಷಣ ಇಲಾಖೆ ಮಾಡುತ್ತಿದೆ ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.

ತಾಲೂಕಿನ ಕಾರ್ಪೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ವಿಜ್ಞಾನ ದಿನದಂದು ಎಲ್ಲರೂ ಒಟ್ಟಾಗಿ ವಿಜ್ಞಾನವನ್ನು ಸಂಭ್ರಮಿಸಿ, ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳಲು ಹಾಗೂ ಮಾನವ ಜನಾಂಗಕ್ಕೆ ನೆರವಾಗಬಲ್ಲ ಹೊಸ ಆವಿಷ್ಕಾರಗಳನ್ನು ನಡೆಸಲು ಮುಂದಿನ ತಲೆಮಾರುಗಳಿಗೆ ಸ್ಪೂರ್ತಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವೈಜ್ಞಾನಿಕ ಅನ್ವೇಷಣೆಯ ಮೂಲಕ ಜಗತ್ತನ್ನು ಅರಿಯಲು ಪ್ರಾಥಮಿಕ ಹಂತದಲ್ಲೇ ಅವಕಾಶ ಒದಗಿಸುವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು.

ರೇಷ್ಮೆ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್‌. ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ವಿಜ್ಞಾನ ವಿಷಯದಲ್ಲಿ ಕಡಿಮೆಯೇನಿಲ್ಲ ಎಂಬುದಕ್ಕೆ ಈ ವಸ್ತುಪ್ರದರ್ಶನವೇ ಸಾಕ್ಷಿ. ಎಲ್ಲಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಶ್ರಮ ಈ ಪ್ರಯೋಗಗಳಲ್ಲಿ ಕಾಣಬಹುದು. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದಾಗ, ಮೌಢ್ಯತೆ ಕಡಿಮೆಯಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನ ಒಂದು ವಿಶೇಷ ದಿನವಾಗಿದ್ದು, ಎಲ್ಲರ ಜೀವನ ಉತ್ತಮ ಪಡಿಸುವಲ್ಲಿ ವಿಜ್ಞಾನದ ಪಾತ್ರ ಅಪಾರವಾಗಿದೆ. ಶಿಕ್ಷಕರು ಪ್ರತಿ ಶಾಲೆಯಲ್ಲಿಯೂ ಮಕ್ಕಳು ಹಾಗೂ ಪೋಷಕರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಆಸಕ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರೇಹಳ್ಳಿ ರಮೇಶ್, ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು, ಕಾರ್ಪೆಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥ್, ಕಳ್ಳಂಬೆಳ್ಳ ಶಿಕ್ಷಣ ಸಂಯೋಜಕ ಬಿ.ವಿ. ಕೆಂಚಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್, ಸದಸ್ಯ ಅರುಣ್ ಕುಮಾರ್‌, ಹಟ್ಟಿ ಗೌಡ ಲಿಂಗಣ್ಣ, ಮುಕುಂದಪ್ಪ, ಯಲಿಯೂರು ಕ್ಲಸ್ಟರ್‌ ಸಮೂಹ ಸಂಪನ್ಮೂಲ ವ್ಯಕ್ತಿ ಎನ್. ಧರ್ಮೇಂದ್ರ, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ್, ಬಂಡೆ ಮಂಜಣ್ಣ, ಗೌಡ ರಾಜಪ್ಪ, ಮುನಿಸ್ವಾಮಿ, ರಾಜಪ್ಪ, ಮುಖ್ಯ ಶಿಕ್ಷಕಿ ಸುಜಾತ, ವಿಜ್ಞಾನ ಶಿಕ್ಷಕ ಸಿ.ಕೆ. ಅರ್ಪಣ, ಪಿ.ಜಿ. ಗಿರೀಶ್, ಗಂಗರತ್ನಮ್ಮ, ಸಿಆರ್‌ಪಿಗಳಾದ ಎ.ಎಂ. ರಾಮು, ಸುರೇಶ್, ಹಸೇನ್ ಪಾಶಾ, ಸುರೇಶಬಾಬು, ಮಾಜಿ ಸಿ.ಆರ್‌.ಪಿ.ಗಳಾದ ಟಿ.ಯು. ವೀರೇಶ್, ಸಿದ್ದೇಶ್ ಕುಮಾರ್‌, ಉಮೇಶ್, ಅಜೀಜ್, ಎನ್. ಶಾಂತಕುಮಾರ್‌ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.