ಸಾರಾಂಶ
ದೇವನಹಳ್ಳಿ: ತಾಲೂಕು ಕುರುಬರ ಸಂಘಕ್ಕೆ ಮುಂದಿನ ಅವಧಿಗೆ ಮಾತೃಘಟಕ, ಯುವ ಘಟಕ ಹಾಗೂ ಮಹಿಳಾ ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಟ್ಟಣದ ಕುರುಬರ ಸಂಘದ ಕನಕ ಭವನದಲ್ಲಿ ನಡೆಯಿತು.
ತಾಲೂಕು ಸಂಘದ ನಿರ್ಗಮಿತ ಅಧ್ಯಕ್ಷ ಪಿ.ರವಿಕುಮಾರ್ ಅವಿರೋಧವಾಗಿ ನೇಮಕಗೊಂಡ ವಿವಿಧ ಘಟಕಗಳಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ, ಇದುವರೆಗೂ ಸಂಘದಲ್ಲಿ ನನಗೆ ಪ್ರೋತ್ಸಾಹ ನೀಡಿದಂತೆ ಹೊಸ ಸಮಿತಿಗೂ ಎಲ್ಲರೂ ಸಹಕರಿಸಬೇಕು. ನಮ್ಮ ಅವಧಿಯಲ್ಲಿ ಯಾವುದೇ ಕಾರ್ಯಕ್ರಮಗಳಿಗೂ ದುಂದು ವೆಚ್ಚಮಾಡದೇ ಸಂಘದಲ್ಲಿರುವ ೩೦ ಲಕ್ಷಕ್ಕೂ ಅಧಿಕ ಹಣವನ್ನ ಹಾಗೆಯೇ ಉಳಿಸಿದ್ದೇವೆ. ಅದನ್ನು ಮುಂದಿನ ಪದಾಧಿಕಾರಿಗಳು ಇನ್ನೂ ಹೆಚ್ಚಿಗೆ ಬೆಳೆಸಿ ಮುಂದಿನ ಪೀಳಿಗೆಗೆ ಸಂಘದ ಆರ್ಥಿಕತೆಯನ್ನು ಬಲಪಡಿಸಬೇಕೆಂದರು.ಯುವ ಘಟಕದ ಜಿಲ್ಲಾಧ್ಯಕ್ಷ ಬೆಟ್ಟೇನಹಳ್ಳಿ ಮಹೇಶ್ ಮಾತನಾಡಿ, ಸಂಘದ ಬೆಳವಣಿಗೆಗೆ ನನ್ನ ಸಂಪೂರ್ಣ ಸಹಕಾರವಿದೆ. ಈ ಬಾರಿ ಕನಕ ಜಯಂತಿಯನ್ನು ಪ್ರತಿ ಗ್ರಾಮಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಬೇಕು. ದೇವನಹಳ್ಳಿಯಲ್ಲಿ ಕನಕದಾಸರ ಪಲ್ಲಕ್ಕಿ ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಪ್ರತಿ ಮನೆಯಿಂದ ಭಾಗವಹಿಸಬೇಕಿದೆ. ಜನಾಂಗದ ವಿದ್ಯಾರ್ಥಿ ವಸತಿ ನಿಲಯಕ್ಕೆ ನಿವೇಶನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆದು ಈಡೇರಿಸಿಕೊಳ್ಳಬೇಕೆಂದರು.
ನೂತನ ಪದಾಧಿಕಾರಿಗಳು: ತಾಲೂಕು ಸಂಘ-ಗೌರವಾಧ್ಯಕ್ಷ ಪಿ.ರವಿಕುಮಾರ್, ಕಾರ್ಯಾಧ್ಯಕ್ಷ ಎನ್.ರಮೇಶ್ ಚನ್ನಹಳ್ಳಿ, ಅಧ್ಯಕ್ಷ ಎಸ್.ಕೆ. ಕೋದಂಡರಾಮಯ್ಯ, ಪ್ರದಾನ ಕಾರ್ಯದರ್ಶಿ ಜಿ.ಎನ್.ತಿಲಕ್, ಖಜಾಂಚಿ ವೇಣುಗೋಪಾಲ್, ಉಪಾಧ್ಯಕ್ಷರಾಗಿ ಬೀರಸಂದ್ರ ಮಂಜುನಾಥ್, ಎ.ರಂಗನಾಥಪುರ ರವಿಕುಮಾರ್, ಚನ್ನಹಳ್ಳಿ ಮೂರ್ತಿ, ಉಗನವಾಡಿ ಪಿಳ್ಳಪ್ಪ, ಬುಳ್ಳಹಳ್ಳಿ ನಾಗೇಶ್, ಮುನಿರಾಜು ಬರ್ಮ, ದೇವನಹಳ್ಳಿ ಮುನಿರಾಜು, ದಾಸರಹಳ್ಳಿ ಶಿವಶಂಕರ್, ಸಹಕಾರ್ಯದರ್ಶಿ ಜಿಸಿ ಮುನಿರಾಜು, ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ, ಕಾನೂನು ಸಲಹೆಗಾರರಾಗಿ ಬೆಟ್ಟೇನಹಳ್ಳಿ ಬೆ.ಎಂ.ಬೀರಪ್ಪ, ಚನ್ನಹಳ್ಳಿ ಸಿ.ಆರ್.ದೇವರಾಜ್, ಎ.ರಂಗನಾಥಪುರದ ಎ.ರವಿಪ್ರಕಾಶ್ ಆಯ್ಕೆಯಾಗಿದ್ದಾರೆ. ಯುವಸಂಘದ ಪದಾಧಿಕಾರಿಗಳು:ದೇವನಹಳ್ಳಿಯ ಹರೀಶ್ ಗೌರವಾಧ್ಯಕ್ಷ, ಕೆಂಪರಾಜ್ ಕಾರ್ಯಾಧ್ಯಕ್ಷ, ಎಸ್.ಉಮೇಶ್ ಅಧ್ಯಕ್ಷ, ಬುಳ್ಳಹಳ್ಳಿಯ ಬಿ.ಆರ್. ಮುನಿರಾಜ್ ಪ್ರಧಾನ ಕಾರ್ಯದರ್ಶಿ, ಖಜಾಂಚಿ ಬೆಟ್ಟೇನಹಳ್ಳಿ ಮಂಜುನಾಥ್, ಉಪಾಧ್ಯಕ್ಷರಾಗಿ ದೇವನಹಳ್ಳಿಯ ಪ್ರದೀಪ್‌ಕುಮಾರ್, ಆವತಿ ಆನಂದಕುಮಾರ್, ಸೋಲೂರು ನವೀನ್, ಬೆಟ್ಟಕೋಟೆ ಮನೋಹರ, ಉಗನವಾಡಿ ಗೌತಮ್, ಯಲುವಳ್ಳಿ ಪ್ರದೀಪ್. ಸಹಕಾರ್ಯದರ್ಶಿಗಳಾಗಿ ಅವತಿ ತಿಲಕ್, ದಾಸರಹಳ್ಳಿ ಲಿಖಿತ್, ಕಾನೂನು ಸಲಹೆಗಾರರಾಗಿ ರಾಕೇಶ್ ಸೋಲೂರು, ಅಶ್ವಿನ್‌ಕುಮಾರ್ ಟಿ.ಹೊಸಹಳ್ಳಿ, ಸಂಘಟನಾ ಕಾರ್ಯದರ್ಶಿಗಳಾಗಿ ಶೆಟ್ಟೇರಹಳ್ಳಿ ಸಿದ್ದೇಶ್, ದೇವನಹಳ್ಳಿ ಅನಿಲ್‌ಕುಮಾರ್, ಅಣಿಘಟ್ಟ ಮುಕುಂದ, ಎಚ್.ಸಿ. ರಮೇಶ್ ಹರಳೂರು ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕದ ಪದಾಧಿಕಾರಿಗಳು: ದೇವನಹಳ್ಳಿಯ ಶಶಿಕಲಾ ಗೌರವಾಧ್ಯಕ್ಷೆ, ಸುಣಘಟ್ಟ ಮೀನಾ ಕಾರ್ಯಾಧ್ಯಕ್ಷೆ, ತಾಲೂಕು ಅಧ್ಯಕ್ಷರಾಗಿ ದೇವನಹಳ್ಳಿಯ ಮಾಧವಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ, ಖಜಾಂಚಿ ಚನ್ನಹಳ್ಳಿ ನಾಗಮ್ಮ, ಉಪಾಧ್ಯಕ್ಷರಾಗಿ ಸೂಲೂರು ಚೌಡಮ್ಮ, ಅಗಲಕೊಟೆ ವನಿತ, ವತೊಯ ಅಶ್ವಿನಿ, ದೇವನಹಳ್ಳಿಯ ಮುನಿರತ್ನ, ಪವಿತ್ರ, ಲಕ್ಷ್ಮೀ ವೆಂಕಟೇಶ್ ಸಹಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಪದ್ಮ, ಕಾನೂನು ಸಲಹೆಗಾರರಾಗಿ ಗೀತ ಚನ್ನಹಳ್ಳಿ,ಜಿಲ್ಲಾ ಯುವ ಸಂಘದ ಪದಾಧಿಕಾರಿಗಳು:
ಬೆಟ್ಟೇನಹಳ್ಳಿ ಬಿ.ಆರ್.ಮಹೇಶ್, ಹಿರಿಯ ಉಪಾಧ್ಯಕ್ಷರಾಗಿ ದೇವನಹಳ್ಳಿಯ ಜಿ.ಎನ್.ನಾಗರಾಜ್, ಉಪಾಧ್ಯಕ್ಷರಾಗಿ ಕಾರ್ತೀಕ್ ಎಲ್, ಮಿಥುನ್, ಆವತಿಯ ಸುಬ್ರಮಣಿ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳು ಆಯ್ಕೆ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಸಿ.ಮುನಿರಾಜು, ಮುನಿನಂಜಪ್ಪ, ಪಿ.ರವಿಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ರಾಜ್ಯ ಸಮಿತಿಯ ಮಂಜುಳ, ಭಾಗ್ಯ ರಮೇಶ್, ಚನ್ನಹಳ್ಳಿ ರಮೇಶ್ , ಹರೀಶ್, ನಾಗರಾಜ್ ಮುಂತಾದವರಿದ್ದರು.
೦೬ ದೇವನಹಳ್ಳಿ ಚಿತ್ರಸುದ್ದಿ ೦೧ದೇವನಹಳ್ಳಿಯ ಕುರುಬರ ಸಂಘದ ಕನಕ ಭವನದಲ್ಲಿ ಕುರುಬರ ಸಂಘಕ್ಕೆ ನೂತನಜಿಲ್ಲಾ ಮತ್ತು ತಾಲೂಕಿನ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.