ಗ್ರಾಮದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ

| Published : Jan 14 2024, 01:35 AM IST

ಸಾರಾಂಶ

ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಜರುಗಿದ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆಯ ಕಾರ್ಯಕ್ರಮದಲ್ಲಿ ಹೇಳಿಕೆ.

ಕನ್ನಡಪ್ರಭ ವಾರ್ತೆ ಅಥಣಿ

ಗ್ರಾಮದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜನರು ಅಧಿಕಾರ ಇಲ್ಲದೇ ಇರುವಾಗಲೂ ಗೌರವ ಕೊಡುವಂತ ಸತ್ಕಾರ್ಯಗಳನ್ನು ಮಾಡಬೇಕು ಎಂದು ಗ್ರಾಮ ಪಂಚಾಯತಿ ನಿಕಟಪೂರ್ವ ಅಧ್ಯಕ್ಷ ರಾಮಣ್ಣ ಪರಟಿ ಹೇಳಿದರು.

ನಂದೇಶ್ವರ ಗ್ರಾಮದಲ್ಲಿ ಜರುಗಿದ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯಕ್ತಿಯ ಜೀವನದಲ್ಲಿ ಅಧಿಕಾರ ಮುಖ್ಯವಾಗುವುದಿಲ್ಲ. ಮಾಡುವ ಕೆಲಸ ಕಾರ್ಯಗಳೇ ಶಾಶ್ವತವಾಗಿ ಉಳಿಯುತ್ತವೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಜನ ಸಾಮಾನ್ಯರ ಸಮಸ್ಯಗಳಿಗೆ ಸ್ಪಂದಿಸಬೇಕು. ಗ್ರಾಮದ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ಹಾಕಿಕೊಂಡು ಎಲ್ಲರನ್ನೂ ಗಮನಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡಿ. ನನ್ನ ಅವಧಿಯಲ್ಲಿ ಸಹಕಾರ ನೀಡಿದ ಗ್ರಾಮ ಪಂಚಾಯತಿ ಸದ್ಯರಿಗೆ ಹಾಗೂ ಗ್ರಾಮಸ್ಥರಿಗೆ ಚಿರಋಣಿಯಾಗಿದ್ದೇನೆ ಎಂದರು.

ಎರಡುವರೆ ವರ್ಷದ ಅವಧಿ ಆಯ್ಕೆಗಾಗಿ ಒಟ್ಟು 4 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಹೆಚ್ಚಿನ ಮತ ಪಡೆದು ನೂತನಾವಾಗಿ ಆಯ್ಕೆಯಾದ ಅಧ್ಯಕ್ಷೆ ಮಹಾದೇವಿ ಸದಾಶಿವ ಲಾಲಸಿಂಗಿ ಹಾಗೂ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಮಪ್ಪ ಶಿರೋಳ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ರಮೇಶಗೌಡ ಪಾಟೀಲ, ಬಸಪ್ಪ ಚಂಡಕಿ, ಸುರೇಶಗೌಡ ಪಾಟೀಲ, ಬುಜಬಲಿ ಪರಟಿ, ಬಾಳಾಸಾಹೇಬ ಪಾಟೀಲ, ಮಲ್ಲೇಶ ಅರಗೊಡ್ಡಿ, ಅದೃಶಿ ಪಾಟೀಲ, ಯಲ್ಲವ್ವ ಪೂಜಾರಿ, ತಾರವ್ವ ಹನಗಂಡಿ, ಚುನಾವಣಾ ಅಧಿಕಾರಿ ಡಾ. ಡಿ.ಜೆ.ಕಾಂಬಳೆ, ಪಿಡಿಒ ಎಸ್.ಟಿ.ಸರನಾಯಿಕ, ರಾಜು ಯಳಮಲ್ಲೆ, ಆರಕ್ಷಕ ಜಿ.ಎಚ್.ಹೊನವಾಡ, ಸದಾಶಿವ ಲಾಲಸಿಂಗಿ, ಕೃಷ್ಣಾ ಗುರವ, ಎಸ್.ಬಿ.ಜನವಾಡ, ಪಿ.ಎಂ.ಲಾಲಸಿಂಗಿ, ಮಹಾಂತೇಶ ಪೂಜಾರಿ, ಎಸ್.ಬಿ.ಲಾಲಸಿಂಗಿ, ಕಾರ್ಯದರ್ಶಿ ಜಯಾನಂದ ಪಾಟೀಲ, ಮಲ್ಲಿಕಾರ್ಜುನ ಯಲ್ಲಟ್ಟಿ, ಯಲ್ಲಪ್ಪ ಜಾಮಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಹಿಂದಿನಿಂದಲೂ ಗ್ರಾಮದ ಲಾಲಸಿಂಗಿ ಮನೆತನದ 4 ಜನರು ನಾಲ್ಕು ಅವಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದು ಗ್ರಾಮದ ಎಲ್ಲರ ಗಮನ ಸೇಳೆದಿದೆ.ಗ್ರಾಮದ ಹಿರಿಯರ ಮಾರ್ಗದರ್ಶನ ಪಡೆದು ಗ್ರಾಮದ ಅಭಿವೃದ್ಧಿಗಾಗಿ ಜನಪರ ಆಡಳಿತ ನೀಡುವೆ. ಮಹಿಳೆಯರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳ ಕಲ್ಪಿಸುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇನೆ.

-ಮಹಾದೇವಿ ಸದಾಶಿವ ಲಾಲಸಿಂಗಿ, ನೂತನ ಅಧ್ಯಕ್ಷೆ ಗ್ರಾಪಂ ನಂದೇಶ್ವರ.ನಾನು ಸೈನ್ಯದಲ್ಲಿ ಸೇವೆ ಸಲ್ಲಿಸಿ ದೇಶ ಸೇವೆ ಮಾಡಿ ನಿವೃತ್ತಿ ಹಂದಿದ್ದೇನೆ. ಮತ್ತೆ ಗ್ರಾಮದ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ಪ್ರಾಮಾಣಿಕತೆಯಿಂದ ಜನರ ಸಮಸ್ಯಗಳಿಗೆ ಸ್ಪಂದಿಸುತ್ತೇನೆ.

-ರಾಮಪ್ಪ ಸಿದ್ದಪ್ಪ ಶಿರೋಳ,

ನೂತನ ಉಪಾಧ್ಯಕ್ಷ ಗ್ರಾಪಂ ನಂದೇಶ್ವರ.