ರೈತರಿಗೆ ಸಿಗುವ ಬಡ್ಡಿರಹಿತ ಬೆಳೆ ಸಾಲ ಹಾಗೂ ಕಡಿಮೆ ಬಡ್ಡಿ ದರದ ಇತರೆ ಸೌಲಭ್ಯಗಳನ್ನು ಪ್ರತಿಯೊಬ್ಬ ಸದಸ್ಯರು ಮತ್ತು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಕೆ.ಆರ್.ಪೇಟೆ:

ರಾಜಕೀಯ ಬದಿಗಿಟ್ಟು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಎಂದು ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಕರೆ ನೀಡಿದರು.

ತಾಲೂಕಿನ ಅಲಂಬಾಡಿಕಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದ ಅಭಿವೃದ್ಧಿ ಕುರಿತು ರೈತರು ಹಾಗೂ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.

ರೈತರಿಗೆ ಸಿಗುವ ಬಡ್ಡಿರಹಿತ ಬೆಳೆ ಸಾಲ ಹಾಗೂ ಕಡಿಮೆ ಬಡ್ಡಿ ದರದ ಇತರೆ ಸೌಲಭ್ಯಗಳನ್ನು ಪ್ರತಿಯೊಬ್ಬ ಸದಸ್ಯರು ಮತ್ತು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಶೇ.95 ರಷ್ಟು ಅಂಕ ಗಳಿಸಿ, ನೀಟ್ (ಓಇಇಖಿ) ಆಲ್ ಇಂಡಿಯಾ ರ್‍ಯಾಂಕ್‌ನಲ್ಲಿ ಉತ್ತಮ ಸ್ಥಾನ ಪಡೆದು, ಪ್ರಥಮ ಸುತ್ತಿನಲ್ಲೇ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆದಿರುವ ಎನ್.ಮನ್ವಿತ್‌ಕುಮಾರ್, ಎಸ್ಸೆಸ್ಸೆಲ್ಸಿ 520 ಅಂಕಗಳಿಸಿದ ಗ್ರಾಮದ ಪ್ರಜ್ವಲ್ ವಾಸುದೇವ್ ಮತ್ತು ದ್ವಿತೀಯ ಪಿಯುಸಿಯಲ್ಲಿ 405 ಅಂಕಗಳಿಸಿದ ಸಫೀನಾ ಅಜಾ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷ ಎಂ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ಪಿ.ನಂಜುಂಡೇಗೌಡ, ರಾಜು, ಕರಿಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್, ತಾಲೂಕು ಶಾಖೆ ವ್ಯವಸ್ಥಾಪಕ ಜಲೇಂದ್ರ, ಉಪಾಧ್ಯಕ್ಷೆ ಜವರಮ್ಮ ಜವರೇಗೌಡ ಹಾಗೂ ಸಂಘದ ನಿರ್ದೇಶಕ ಉಪಸ್ಥಿತರಿದ್ದರು.

ಷೇರುದಾರರು ಸಂಘದ ಶಾಖೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ: ಟಿ.ಬಲದೇವ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಷೇರುದಾರ ಸದಸ್ಯರು ವ್ಯಾಪಾರ ವಹಿವಾಟುಗಳನ್ನು ಸಂಘದ ಶಾಖೆಗಳಲ್ಲಿಯೇ ವ್ಯವಹರಿಸಿದರೆ ಸಹಕಾರ ಸಂಘಗಳು ಲಾಭದಾಯಕವಾಗಿ ಮುನ್ನಡೆಯುತ್ತವೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್ ಕರೆ ನೀಡಿದರು.

ತಾಲೂಕಿನ ಹರಿಹರಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘ ಪ್ರಸಕ್ತ ಸಾಲಿನಲ್ಲಿ 7,62,640 ರು. ನಿವ್ವಳ ಲಾಭಗಳಿಸಿ ತಾಲೂಕಿನ ಸಹಕಾರ ಸಂಘಗಳ ಪ್ರಗತಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.ಸಂಘದ ಪ್ರಭಾರ ಕಾರ್ಯದರ್ಶಿ ಬಿ.ಎಚ್.ಸಂಜಯ್ ಸಂಘದ ಲೆಕ್ಕಪತ್ರ ಮಂಡಿಸಿದರು. ಸಂಘದ ಅಧ್ಯಕ್ಷ ಎಚ್.ಕೆ.ರವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರತ್ನಮ್ಮ, ನಿರ್ದೇಶಕರಾದ ತೆರ್‍ನೇನಹಳ್ಳಿ ಟಿ.ಬಲದೇವ್, ಕೆ.ಎನ್.ಜಯರಾಮ್, ಎಚ್.ವಿ. ಚಂದ್ರಶೇಖರ್, ಎಚ್.ಎನ್. ಶ್ರೀಧರ್, ಎಚ್.ಎಸ್.ಮಹೇಶ್, ಎಚ್.ಜಿ.ಶಂಕರ್, ಗೀತಾ, ದೊಡ್ಡಭೈರನಾಯಕ, ಬಸವರಾಜು, ಕತ್ತರಘಟ್ಟ ಕೆ.ಎನ್.ಸಿದ್ದಲಿಂಗೇಗೌಡ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ, ಎಚ್.ಬಿ.ಭರತ್‌ಕುಮಾರ್, ಎಂಡಿಸಿಸಿ ಬ್ಯಾಂಕ್ ತಾಲೂಕು ಶಾಖೆ ವ್ಯವಸ್ಥಾಪಕ ಕೆ.ಜೆ.ಗಿರಿವರ್ಧನ್, ಸಂಘದ ವ್ಯವಸ್ಥಾಪಕ ಎಂ.ಕೆ.ಲೋಕೇಶ್, ಮೇಲ್ವಿಚಾರಕ ಬಿ.ಎಂ.ವಿಶ್ವನಾಥ್ ಹಲವರು ಇದ್ದರು.